Gadag: ದೇವಾಂಗ ಮಹಿಳಾಮಂಡಲದ ವತಿಯಿಂದ ಆರನೇ ವಾರ್ಷಿಕೋತ್ಸವದ ಅಂಗವಾಗಿ ಮಹಿಳೆಯರಿಗಾಗಿ ಅಗ್ನಿ ರಹಿತ ಅಡುಗೆ ಸ್ಪರ್ಧೆ ಹಾಗೂ ಸೂಪರ್ ಮಿನಿಟ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು .
ಅಡುಗೆ ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸುಕತೆ ಯಿಂದ ಭಾಗವಹಿಸಿದ್ದರು. ಇದರಲ್ಲಿ ಆರೋಗ್ಯಕರವಾದ ಪಚಡಿ ,ಕೋಸಂಬರಿ, ತಂಬುಳಿ, ಮೊಲೈ ಕೋಫ್ತಾ, ಸಲಾಡ್, ಮ್ಯಾಂಗೋರಸ್ಮಲೈ ಗಿರ್ಮಿಟ್ಟಿ ವಸರವಲಕ್ಕಿ ಮುಂತಾದ ಅಡುಗೆಗಳು ಆಕರ್ಷಿತವಾಗಿದ್ದವು .
ಸೂಪರ್ ಮಿನಿಟ್ ಸ್ಪರ್ಧೆಗಳಾದ ಬಿಂದಿ ಹಚ್ಚಿಕೊಳ್ಳುವುದು ಗ್ಲಾಸ್ ಗಳನ್ನು ಒಂದರ ಮೇಲೆ ಒಂದು ನಿಲ್ಲಿಸುವುದು .ಸ್ಟ್ರಾ ದಿಂದ ಬಾಲ್ ಗಳನ್ನು ಒಂದ ಲೋಟದಿಂದ ಇನ್ನೊಂದ ಲೋಟಕ್ಕೆ ಹಾಕುವುದನ್ನು ಆಡಿಸಲಾಯಿತು .ಎಲ್ಲ ಮಹಿಳೆಯರು ವಯಸ್ಸಿನ ಭೇದ ಮರೆತು ಸಂತೋಷದಿಂದ ಪಾಲ್ಗೊಂಡರು
ಪಾಕ ಸ್ಪರ್ಧೆಗೆ ನಿರ್ಣಾಯಕರಾಗಿ ಶ್ರೀಮತಿ ಜಯಶ್ರೀ ಪಾಟೀಲ ಹಾಗೂ ರೂಪ ಕಬಾಡಿ ಆಗಮಿಸಿದ್ದರು
ಸ್ಪರ್ಧೆಗಳನ್ನು ಶ್ರೀಮತಿ ಭಾರತಿ ಗಡ್ಡಿ ಶ್ರೀಮತಿ ನಿರ್ಮಲ ಕೊಳ್ಳಿ ಹಾಗೂ ಶ್ರೀಮತಿ ಸುಜಾತ ಕಾಖಂಡಕಿ ನಡೆಸಿಕೊಟ್ಟರು .
ದೇವಾಂಗ ಮಹಿಳಾ ಮಂಡಲದ ಪದಾಧಿಕಾರಿಗಳಾದ ಶ್ರೀಮತಿ ಶಕುಂತಲಾ ಬಿಜಲಿ ರತ್ನ ಪುರಂತರ ಪುಷ್ಪ ಗುಗ್ರಿ ರತ್ನ ಗಾಡದ ಲಕ್ಷ್ಮಿ ಗಾರ್ಗಿ ಕಲಾವತಿ ಕೊಳ್ಳಿ ಮೇಘ ಜವಳಿ ಭಾಗ್ಯ ಅರಿ ಲತಾ ನಂದರಗಿ ಶೋಭಾ ಆರಿ ಗಾಯತ್ರಿ ಬೆಲ್ಲದ ಸುಧಾ ಕಂಗೂರಿ ವಂಜಾಕ್ಷಿ ಶಾಲಾದರ ವಿಜಯಲಕ್ಷ್ಮಿ ಕಡಕೋಳ ಮಹಾಲಕ್ಷ್ಮಿ ಚಳಗೇರಿ ಮೇಘ ಜವಳಿ ರತ್ನಾ ಪುರoತರ್ ಸುಧಾ ಬಳ್ಳಿ ಮಹಾಲಕ್ಷ್ಮಿ ಚಳಗೇರಿ ರತ್ನ ಚಳಗೇರಿ ಮೇಘ ಜವಳಿ ಆಶಾಲತಾ ಜವಳಿ ಪುಷ್ಪ ಗುಗ್ಗರಿ ಗದುಗಿನ ಮಂಡಳಿಯವರಾದ ಶಂಕ್ರಮ್ಮ ಕಂಪ್ಲಿ ಶಕುಂತಲಾ ಲತಾ ಕಂದಗಲ್ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.