ದೇವಾಂಗ ಸಮಾಜದ ಗದಗ ಹುಬ್ಬಳ್ಳಿ ಧಾರವಾಡ  ಕೊಪ್ಪಳ ಹಾಗೂ ಹಾವೇರಿ  ಜಿಲ್ಲೆಗಳ ಸಂಘಟನಾತ್ಮಕ ಸಭೆ

IMG-20241014-WA0011
Published on

Gadag: ಹಳೆ ಬನಶಂಕರಿ ದೇವಸ್ಥಾನದ  ಒಂದನೇ ಮಹಡಿ ಸಭಾಭವನದಲ್ಲಿ ಸಭೆ ದೇವಾಂಗ ಸಮಾಜದ ನಡಿಯತು.

ಗದಗ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರಾದ  ದಶರಥರಾಜ ಕೊಳ್ಳಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ  ಈ ಹಿಂದೆ  ದೇವಾಂಗ ಸಮಾಜದ ಹಂಪಿ  ಹೇಮಕೊಟ ಗಾಯತ್ರಿಪಟ ಮಹಾಸಂಸ್ಥಾನ ಶಾಕಾ ಮಠ ಕೆಂಪ ಲಿಂಗನಹಳ್ಳಿ ಬೆಂಗಳೂರಿನಲ್ಲಿ ಜನಗಣತಿ ಅಂಗವಾಗಿ ಸಭೆ ಕರೆಯಲಾಗಿತ್ತು ಸಭೆಯ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ  ದಯಾನಂದ ಪುರಿ ಸ್ವಾಮೀಜಿಯವರ  ದಿವ್ಯ ಸಾನಿಧ್ಯದಲ್ಲಿ ಹಾಗೂ ರಾಜ್ಯ ಅಧ್ಯಕ್ಷರಾದಂತ ಸನ್ಮಾನ್ಯ ಶ್ರೀ ರವೀಂದ್ರ ಕಲಬುರ್ಗಿ ಅವರ ಅಧ್ಯಕ್ಷತೆಯಲ್ಲಿ ಸಭೆಯು ಜರಗಿದ ಸಂದರ್ಭದಲ್ಲಿ ರಾಜ್ಯದಲ್ಲಿ ದೇವಾಂಗ ಸಮಾಜ ಬಾಂಧವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಜನಗಣತಿಯನ್ನು ಮಾಡಿ ನಂಜುಂಡಯ್ಯ ವರದಿಗೆ ಸಹಕರಿಸಬೇಕೆಂದು ತಿಳಿಸಿದಾಗ  ಗದಗ ಜಿಲ್ಲೆ  ಮೊದಲನೇ ಸ್ಥಾನದಲ್ಲಿ ಜನಗಣತಿಯನ್ನ ಮಾಡಿ ರಾಜ್ಯ ಸಂಘಕ್ಕೆ  ಮಾಹಿತಿ ನೀಡಲಾಯಿತು ಆದರೆ ಈಗ  ರಾಜ್ಯದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಜನಗಣತಿ  ಆಮೆ ಗತಿಯಲ್ಲಿ ಸಾಗ್ತಾ ಇದೆ  ಆದ್ದರಿಂದ ಹೊಸ ಯೋಜನೆಯಿಂದ ಜನಗಣತಿ ಮಾಡೋದು ಬಹಳ ಸುಲಭವಾಗಿದೆ ಈಗ ಆನ್ಲೈನ್ ಮುಖಾಂತರ ಜನಗಣತಿಯನ್ನು ತಮ್ಮ ತಮ್ಮ ಮನೆಯಲ್ಲಿ ಕುಳಿತು ಈ ಜನಗಣತಿಯನ್ನು ತಮ್ಮ ಮನೆಯ ವಿವರವನ್ನು  ನೀಡಲಿಕ್ಕೆ ಯಾಪನ್ನು ತಯಾರು  ಮಾಡಲಾಗಿದೆ  ಯಾಪ್  (ಆನ್ಲೈನ್ ಮುಖಾಂತರ) ಉಪಯೋಗಿಸಿಕೊಂಡು ಎಲ್ಲರೂ ತಮ್ಮ ತಮ್ಮ ಮನೆತನದ ಮಾಹಿತಿಯನ್ನು  ಯಾಪ್ ಮುಖಾಂತರ ಗದಗ ಜಿಲ್ಲಾ ದೇವಾಂಗ ಸಂಘದ ಇಮೇಲ್ ಐಡಿಗೆ ಕಳಿಸಲು ಅತಿ ಸರಳವಾದಂತ ಆಪನ್ನು ಇವತ್ತು ಹುಬ್ಬಳ್ಳಿ ಧಾರವಾಡ ದೇವಾಂಗ ಸಂಘದವರು  ಕಂಡುಹಿಡಿದಿದ್ದಾರೆ ಅದಕ್ಕಾಗಿ ಎಲ್ಲರೂ ಸಹಕರಿಸಬೇಕೆಂದರು. ಆದರಿಂದ ಇಂದು ಗದಗ್ ಜಿಲ್ಲೆಯಲ್ಲಿ  ನಾಲ್ಕು ಜಿಲ್ಲೆಗಳ ಸಭೆಯನ್ನು ಕರೆದು ಮಾಹಿತಿ ನೀಡಲಾಗಿದೆ ಹುಬ್ಬಳ್ಳಿ ಧಾರವಾಡ ಗದಗ ಹಾವೇರಿ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಈ ಒಂದು ಸಭೆಯನ್ನು ಕರೆಯಲಾಗಿದೆ ಎಲ್ಲಾ ಜಿಲ್ಲಾಧ್ಯಕ್ಷರು ಇದಕ್ಕೆ  ಸ್ಪಂದಿಸಬೇಕೆಂದರು

 ಉದ್ಘಾಟಕರಾಗಿ  ಆಗಮಿಸಿದಂತಹ  ಡಾ  ಬ್ಯಾಕೋಡಿ ಯವರು ಮಾತನಾಡಿ ಡಿಜಿಟಲ ಆಪ್ ಮೂಲಕ ಮಾಡುವಂತ ಜನಗಣತಿಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿ  ಈ ಹಿಂದೆ ಮ್ಯಾನುವಲ್ ಆಗಿ ಫಾರ್ಮು ಮೂಲಕ ಜನಗಣತಿ ಮಾಡಲಾಗಿತ್ತು   ಅವಾಗ  ರಾಜ್ಯದಲ್ಲಿ ದೇವಾಂಗ ಸಮಾಜದ ಜನಗಣತಿ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು ಯಾವುದೇ ಜಿಲ್ಲೆಗಳು ಈ ಒಂದು ಜನಗಣತಿಯನ್ನು ಮಾಡದೆ ಇದ್ದರೂ ಕೂಡ ಗದಗ ಜಿಲ್ಲೆಯವರು ಸಂಪೂರ್ಣ ಜನಗಣತಿಯನ್ನು ಮಾಡಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ   ಎಂದರು.  ಈ ಕಾರ್ಯಗಾರದಲ್ಲಿ ಭಾಗಿಯಾಗಿ ಎಲ್ಲರೂ ಡಿಜಿಟಲ  ಆಪ್ ಮುಖಾಂತರ ತಮ್ಮ ತಮ್ಮ  ಮನೆತನದ ವಿವರಣೆಯನ್ನು  ನೀಡಬೇಕೆಂದರು.  

ಹುಬ್ಬಳ್ಳಿ ಧಾರವಾಡ ದೇವಾಂಗ ಸಂಘದ ಪ್ರಮುಖರಾದ  ರವಿ ಪಾಟೀಲಯವರು ಮಾತನಾಡಿ  ರಾಜ್ಯದಲ್ಲಿ ದೇವಾಂಗ ಸಮಾಜದ ಜನಗಣತಿ ಅತಿ ಅವಶ್ಯಕ ಈಗಾಗಲೇ ಸರ್ಕಾರ ನಂಜುಂಡಯ್ಯ ವರದಿಯನ್ನು ಆಧರಿಸಿ ಮೀಸಲಾತಿಗಳನ್ನು ಮಾಡುತ್ತಿದ್ದಾರೆ ಆದರಿಂದ ನಮ್ಮ ಸಮಾಜದ  ನಿಜವಾದ ಸ್ಥಿತಿಗತಿಗಳನ  ನಾವು ಜನಗಣತಿ ಮುಖಾಂತರ ತಿಳಿಸಬೇಕಾಗಿದೆ. ಆದರಿಂದ ಸಮಾಜ ಬಾಂಧವರು ಡಿಜಿಟಲ್ ಆಪ್ ಮುಖಾಂತರ ತಮ್ಮ ಮನೆತನದ ಮಾಹಿತಿ ನೀಡಬೇಕೆಂದರೂ. 

ಕೊಪ್ಪಳ ಜಿಲ್ಲಾ ದೇವಾಂಗದ ಅಧ್ಯಕ್ಷರಾದ  ಶಿವಶಂಕರಪ್ಪ ಚಿನ್ನಿ ಅವರು ಮಾತನಾಡಿ   ಈಗಾಗಲೇ ಬೇರೆ ಬೇರೆ ಸಮಾಜದವರು  ಹಿಂದುಳಿದ ವರ್ಗಕ್ಕೆ ಸೇರಿಸಲು ಹೋರಾಡುತ್ತಿದ್ದಾರೆ  ಆದರಿಂದ ನಾವು ಹಿಂದು ಉಳಿದ ವರ್ಗದವರು ಎಚ್ಚೆತ್ತುಕೊಂಡು  ನಮ್ಮ ಜಾತಿ ಗಣತಿಯನ್ನ ಮಾಡಿ  ನಮ್ಮ ಸಮಾಜದಲ್ಲಿ  80 ಪರ್ಸೆಂಟ್ ಜನ ಕೊಲಿ ಕಾರ್ಮಿಕರಿದ್ದು ಎಲ್ಲರೂ ಕಡು ಬಡತನದಲ್ಲಿ ಇರುವ ಸಮಾಜವಾಗಿದೆ  ಆದರಿಂದ  ಸಮಾಜ ಬಾಂಧವರು  ಜನಗಣತಿಯಲ್ಲಿ ಸಹಕರಿಸಬೇಕೆಂದರೂ  

ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ  ರಾಘವೇಂದ್ರ ಕೊಪ್ಪಳ ಅವರು ಮಾತನಾಡಿ  ಸಮಾಜದಲ್ಲಿ ಸಂಘಟನೆ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ  ಅದರ ಜೊತೆಗೆ   ಸಮಾಜ ಬಾಂಧವರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ  ಸಮಾಜದ ಏಳಿಗೆಗೆ ಸಹಕರಿಸಬೇಕೆಂದರು.  ಈ ಸಂದರ್ಭದಲ್ಲಿ  ಲಕ್ಷ್ಮೇಶ್ವರ ದೇವಾಂಗ್ ಸಂಘದ ಅಧ್ಯಕ್ಷರಾದ  ನಾಗೇಶ್  ಗುಜುರಿ, ಅಶೋಕ ಬಣ್ಣದ, ಮಲ್ಲಿಕಾರ್ಜುನ್ ಬೆಲ್ಲದ  ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಭು ನೀಲಗುಂದ  ಸಂಜಯ್ ನೀಲಗುಂದ   ಮುಂಡರಗಿ ದೇವಾಂಗ ಸಮಾಜದ ಅಧ್ಯಕ್ಷರಾದ ಕಿಟ್ಟಪ್ಪ ಗುಬ್ಬಿ ನಾಗರಾಜ ಭೂತ  ಪ್ರಕಾಶ್ ಹತ್ತಿಕಾ ಪ್ರಕಾಶ ಗುಗ್ಗರಿ  ಈರಣ್ಣ  ಹುಳ್ಳಿ  ಬಸವರಾಜ  ಕಂಪ್ಲಿ  ವಿಶ್ವನಾಥ ವನಕಿ ಅಶೋಕ ಅಂಟಿನ  ಹಿರಿಯ ಮಹಿಳಾ ಸದಸ್ಯರಾದ ಶಂಕ್ರಮ್ಮ ವೈ ಕಂಪನಿ ಲಲಿತ ಕಂದಗಲ್ ಸುನಂದಣಿ ಗೀತಾ  ಶ್ರೀಮತ ನಿರ್ಮಲ ಕೊಳ್ಳಿ ಶಾಂತಾಬಾಯಿ ಹೊನ್ನಳ್ಳಿ ಗೀತಾ ದೇವಾಂಗ ಮಠ ವೀಣಾ ನೀಲಗುಂದ ಕಂಪನಿ ಶಂಕರ್ ಕುದುರೆಮೋತಿ ವಿರುಪಾಕ್ಷ ನೀಲಗುಂದ ಶಂಕ್ರಪ್ಪ  ಹುಳ್ಳಿ ದೇವಾಂಗ ಸಮಾಜದ ಹಲವಾರು ಸಮಾಜ ಬಾಂಧವರು ಭಾಗವಹಿಸಿದ್ದರು

  ನಿರೂಪಣೆಯನ್ನು ದೊಡ್ಡಪ್ಪ ಮೂಲಿಮನಿಯವರು ನಡೆಸಿಕೊಟ್ಟರು ಸ್ವಾಗತ ಗೀತೆಯನ್ನು ನವೀನ್ ಮೆಡಿ  ನಡೆಸಿಕೊಟ್ಟರು  ಸರ್ವರನ್ನು ಎಸ್ ಎಸ್ ಕಡ್ಡಿಯವರು ಸ್ವಾಗತಿಸಿದರು  ವಂದನಾರ್ಪಣೆಯನ್ನು ಮಹಿಳಾಮಂಡಲದ ಅಧ್ಯಕ್ಷರಾದ ಸುಜಾತ ಕಾಕಂಡಕಿ ಅವರು ನಡೆಸಿಕೊಟ್ಟರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net