

ವಿಜಯವಾಣಿ ಸುದ್ದಿಜಾಲ ಗದಗ
ಮುಂಬರುವ ಮೂರು ತಿಂಗಳಲ್ಲಿ ಮಳೆಗಾಲ ಇರುವುದರಿಂದ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗುತ್ತವೆ. ತಾಂಡೆಯಲ್ಲಿ ಯಾವುದೇ ಡೆಂಘೀ ಜ್ವರ ಪ್ರಕರಣಗಳು ಬರದಂತೆ ತಡೆಯಲು, ಮುಂಜಾಗ್ರತವಾಗಿ ಲಾರ್ವಾ ನಿಯಂತ್ರಣ ಮಾಡಬೇಕಾಗಿದೆ ಎಂದು ಆಯುಷ್ಮಾನ ಆರೋಗ್ಯ ಮಂದಿರ ಆರೋಗ್ಯ ನಿರೀಣಾ-ಧಿಕಾರಿ ಸಿದ್ದಪ್ಪ ಲಿಂಗದಾಳ ಹೇಳಿದರು
ಜಿಲ್ಲಾಡಳಿತ ವತಿಯಿಂದ ಪಾಪನಾಶಿ ತಾಂಡಾದಲ್ಲಿ ಶನಿವಾರ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬರು ನಿಮ್ಮ ಮನೆಯ ನೀರಿನ ಪರಿಕರಗಳನ್ನು ಮುಚ್ಚಿಡಬೇಕು. ಲಾರ್ವಾ ನಾಶಪಡಿಸಬೇಕು ಮತ್ತು ಈಡೀಸ್ ಸೋಳ್ಳೆಗಳು ಕಚ್ಚದಂತೆ ಸೊಳ್ಳೆಯ ಪರದೆಯನ್ನು ಉಪಯೋಗಿಸಬೇಕು. ಟೈಯರ್, ಬ್ಯಾರಲ್, ಟೆಂಗಿನ ಚಿಪ್ಪು ಎಳನೀರಿನ ಕಾಯಿ ಸೊಳ್ಳೆಗಳ ಉತ್ಪತ್ತಿಗೆ ನೀರು ಸಿಗದಂತೆ ನೋಡಿಕೊಳ್ಳಬೇಕು. ತಗ್ಗು ಪ್ರದೇಶದಲ್ಲಿ ನಿಂತ ನೀರಿಗೆ ಸುಟ್ಟ ಆಯಿಲ್ನ್ನು ಹಾಕಬೇಕು. ಸಾರ್ವಜನಿಕರು 3 ತಿಂಗಳುಗಳಕಾಲ ಆರೋಗ್ಯ ಇಲಾಖೆಯ ಜತೆ ಕೈಜೊಡಿಸಿ ಸಹಕಾರ ನೀಡಬೇಕೆಂದು ತಿಳಿಸಿದರು.
ತಾಂಡೆಗಳಲ್ಲಿನ ಜನರು ಗೋವಾ ಮತ್ತು ಮಂಗಳೂರಿಗೆ ಹೋಗಿ ಬಂದಾಗ ಕಡ್ಡಾಯವಾಗಿ ರಕ್ತಪರೀೆ ಮಾಡಿಕೋಳ್ಳಬೇಕು. ತಾಂಡೆಯಲ್ಲಿ ಯಾವುದೇ ಜ್ವರ ಕಂಡು ಬರದಂತೆ ಆರೋಗ್ಯ ಇಲಾಖೆಯ ಜೊತೆಗೆ ಕೈಜೊಡಿಸಬೇಕು. ಡಂಘೀ ಜ್ವರಕ್ಕೆ ಭಯಪಡದೇ ಆರೋಗ್ಯ ಜಾಗೃತಿಯಿಂದ ಇರಬೇಕು. ಪ್ರತಿದಿನ ಸಂಜೆ ಬೆವಿನಸೋಪ್ಪಿನ ಹೊಗೆ ಹಾಕುವ ಕಾರ್ಯವನ್ನು ಬಹು ಮುಖ್ಯವಾಗಿ ಮಾಡಬೇಕು ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಸುರಣಾಧಿಕಾರಿ ಸವಿತಾ ಪವಾರ ಮಾತನಾಡಿ, ಡೆಂಘೀ ಜ್ವರಕ್ಕೆ ನಿಧಿರ್ಷ್ಟವಾದ ಔಷಧಿ ಇರುವುದಿಲ್ಲ. ಆದರೆ ರೋಗಲಣಕ್ಕೆ ತಕ್ಕಂತೆ ಔಷದೋಪಚಾರ ಮಾಡಿ ಗುಣ ಪಡಿಸಲಾಗುವುದು. ಜ್ವರ ಬಂದಂತವರು ತಣ ರಕ್ತತಪಾಸಣೆ ಮಾಡಿಸಿಕೊಳ್ಳಬೇಕು. ತಾಂಡೆಗಳಲ್ಲಿ ಲಾರ್ವಾ ನಾಶಪಡಿಸುವ ಕಾರ್ಯವನ್ನು ಆಶಾ ಕಾರ್ಯಕರ್ತೆಯರು ಸರಿಯಾಗಿ ಮಾಡಿ ಸೊಳ್ಳೆಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಬೇಕು. ನಿಂತ ನೀರುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯತೆಯನ್ನು ಸಿಎಸ್ಐ ಆಸ್ಪತ್ರೆಯ ಡಾ.ಪ್ರಶಾಂತ ವಹಿಸಿದ್ದರು. ಆಸ್ಪತ್ರೆಯ ಶಾಮ್ ರಾಮಪ್ಪ ನಾಯಕ, ಮನ್ನಪ್ಪ ಪೂಜಾರ, ರಮೇಶ ಪೂಜಾರ, ರೇಣುಕಾ ಪುರದ, ಮೀನಾ ವಡ್ಡರ, ನಾರಾಯಣಪ್ಪ ಪೂಜಾರ ಲಕ್ಷಿ$್ಮ ಪೂಜಾರ, ಲಲಿತಾ ಅಂಗಡಿ, ಸಾವಕ್ಕ ಪೂಜಾರ, ಮಂಜುಳಾ ಆರಿ, ಉಮಾದೇವಿ ಖಾನಾಪೂರ ಇತರರು ಇದ್ದರು.