

ಗದಗ: ಬಿಡಾಡಿ ದನಗಳ ಹಾವಳಿಗೆ ವೃದ್ಧ ಬಲಿಯಾಗಿರುವ ಘಟನೆ ಬುಧವಾರ ಬೆಳಗ್ಗೆ ಬೆಟಗೇರಿ ಪಟ್ಟಣದಲ್ಲಿ ನಡೆದಿದೆ.ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಶಂಕರಪ್ಪ ಹೊಳಿ (70) ವರ್ಷದ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಟಗೇರಿಯ ಸರಕಾರಿ ಪ್ರಾಥಮಿಕ ಶಾಲೆ ನಂಬರ್ 7ರ ಹತ್ತಿದ ಬಿಡಾಡಿ ಗೂಳಿ ಇತರೆ ದನಗಳೊಂದಿಗೆ ಗುದ್ದಾಡುತ್ತಿರುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನಿಗೆ ರಭಸವಾಗಿ ಗುದ್ದಿದೆ. ಪರಿಣಾಮ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕುರಿತು ಬೆಟಗೇರಿ ಪಿಎಸ್ಐ ಲಕ್ಷ್ಮಣ ಆರಿ ಮಾತನಾಡಿ, ಈಗಾಗಲೇ ನಗರಸಭೆಗೆ ಬಿಡಾಡಿ ದನಗಳ ಹಾವಳಿ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪತ್ರ ಬರೆಯಲಾಗಿತ್ತು. ಈಗ ಮತ್ತೆ ನಗರಸಭೆಗೆ ಬಿಡಾಡಿ ದನಗಳ ಸ್ಥಳಾಂತರ ಮಾಡುವಂತೆ ಸೂಚಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.