ಜೀವಿತಾವಧಿಯಲ್ಲಿ ಮನುಷ್ಯನಾದವನು ಸಮಾಜಕ್ಕೆ ಏನನ್ನಾದರೂ ನೀಡಿದರೆ ಮಾತ್ರ ಜೀವನ ಸಾರ್ಥಕ: ಎಂ. ಎ. ರಡ್ಡೇರ

31GDG04
Published on

ವಿಜಯವಾಣಿ ಸುದ್ದಿಜಾಲ, ಗದಗ
ಮಾನವ ಜನ್ಮ ಅತ್ಯಂತ ಶ್ರೇಷ್ಠವಾಗಿದೆ. ಜೀವಿತಾವಧಿಯಲ್ಲಿ ಮನುಷ್ಯನಾದವನು ಸಮಾಜಕ್ಕೆ ಏನನ್ನಾದರೂ ನೀಡಿದರೆ ಮಾತ್ರ ಜೀವನ ಸಾರ್ಥಕ ಎಂದು ಉಪನಿರ್ದೇಶಕ ಎಂ. ಎ. ರಡ್ಡೇರ ಹೇಳಿದರು.
ಸೇವಾ ನಿವೃತ್ತಿ ಹೊಂದಿದ ನಿಮಿತ್ಯ ನಗರದ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬದುಕನ್ನು ಸವಿಯಬೇಕೆ ವಿನಃ ಸವೆಸಬಾರದು. ಸಾಧಿಸಬೇಕೆ ಹೊರತು ರೋಧಿಸಬಾರದು. ಸಂತಸ ಪಡಬೇಕೆ ಹೊರತು ಸಂಕಟಪಡಬಾರದು. ಅಂದಾಗಲೇ ಬದುಕು ಸಂಭ್ರಮ ಇಲ್ಲವಾದರೆ ಸಂಗ್ರಾಮವೇ ಆಗುತ್ತದೆ. ಸಾಧಿಸುವ ತನಕ ಕಿವುಡನಾಗು ಸಾಧಿಸಿದ ಬಳಿಕ ಮೂಕನಾಗು. ಈ ನಿಟ್ಟಿನಲ್ಲಿ ಜೀವನ ಸಾಗಿದರೆ ಜನ್ಮ ಸಾರ್ಥಕವಾಗುತ್ತದೆ. ಅಂಥಹ ಸಾರ್ಥಕ ಬದುಕನ್ನು ಕಳೆಯಲು ಗದಗ ಜನತೆ ನನಗೆ ನೀಡಿದ್ದಾರೆ. ಹೀಗಾಗಿ ನಾನು ನನ್ನ ಕುಟುಂಬ ಸದಾಕಾಲ ಚಿರಋಣಿ ಆಗಿರುತ್ತೇವೆ ಎಂದು ಹೇಳಿದರು.
ಡಾ. ಬಸವರಾಜ ಧಾರವಾಡ ಮಾತನಾಡಿ ದಣಿವರಿಯದ ಸದಾಕಾಲ ಶಿಣದ ಗುಣಮಟ್ಟಕ್ಕಾಗಿ ಚಿಂತನೆಯ ಮೂಲಕ ಗದಗ ಶೈಣಿಕ ಪರಿಸರದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಎಂ.ಎ.ರಡ್ಡೇರ್​ ಅವರ ಸೇವೆಯನ್ನು ಗದಗ ಶೈಣಿಕ ಪರಿಸರ ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ಅವರ ಸುಧೀರ್ ಶೈಣಿಕ ಸೇವಾವಧಿಯಲ್ಲಿ ಯಾವುದೇ ಕಳಂಕವನ್ನು ಮೈಗೆ ಅಂಟಿಸಿಕೊಳ್ಳದೇ ಕಳಂಕರಹಿತ ಸಾರ್ಥಕ ಜೀವನ ಕಳೆದಿದ್ದಾರೆ ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಪ್ರಭಾರಿ ಮುಖ್ಯೋಪಾಧ್ಯಾಯ ಜಯಲಕ್ಷಿ$್ಮ ಅಣ್ಣಿಗೇರಿ ಮಾತನಾಡಿ, ಎಂ. ಎ. ರಡ್ಡೇರ ಅವರ ಮಾರ್ಗದರ್ಶನ ಸಹಕಾರದಿಂದ ನಮ್ಮ ಶಾಲೆ ಜಿಲ್ಲೆಯಲ್ಲಿಯೇ ಒಂದು ಮಾದರಿ ಶಾಲೆಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಅವರ ಸೇವೆ ಮತ್ತು ಮಾರ್ಗದರ್ಶನವನ್ನು ಮುಂದೆಯೂ ನಮ್ಮಶಾಲೆ ಪಡೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂ. ಎ. ರಡ್ಡೇರ ದಂಪತಿಗಳಿಗೆ ಸನ್ಮಾನಿಸಲಾಯಿತು. ಎಚ್​. ಬಿ. ರಡ್ಡೇರ, ಎಸ್​. ಎಂ. ಅಗಡಿ, ಎಂ. ಎಚ್​. ಪೂಜಾರ, ಎಸ್​. ಜಿ. ಕೋಲ್ಮಿ, ಶಂಕ್ರಮ್ಮ ಹನಮಗೌಡ್ರು, ಎಂ. ಐ. ಶಿವನಗೌಡ್ರು, ಮಂಜುಳಾ ಸಾಮ್ರಾಣಿ, ಶಶಿಕಲಾ ಗುಳೇದವರ, ಸುಮಂಗಲ ಪತ್ತಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net