ಹುಲಕೋಟಿ ಜಿಸಿಟಿಎಂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರ್ಜುನ್ ಗೋಳಸಂಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸಮತಾ ಭಾರತ ನಿರ್ಮಾಣ ಆಗಬೇಕಿದೆ ಎಂದರು. ಅಂಬೇಡ್ಕರ್ ಅವರ ಬಾಲ್ಯ, ಶಿಕ್ಷಣದ ಕುರಿತು ಅವರು ಅನುಭವಿಸಿದ ಶೋಷಣೆಯ ಬಗ್ಗೆ, ಸಮಾಜದಲ್ಲಿ ಮೇಲು-ಕೀಳು ಬಡವ ಬಲ್ಲಿದ ಕುರಿತ ಶೋಷಣೆಗಳ ಬಗ್ಗೆ ವಿವರವಾಗಿ ತಿಳಿಸುವ ಮೂಲಕ, ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು