

ಅಂಬೇಡ್ಕರ ಅವರಿಗೆ ಭಾರತ ರತ್ನಕೊಟ್ಟಿದ್ದು ವಾಜಪೇಯಿ: ಎಸ್. ವಿ. ಸಂಕನೂರು
ವಿಜಯವಾಣಿ ಸುದ್ದಿಜಾಲ ಗದಗ
ಸರ್ವ ಜನಾಂಗವನ್ನು ಸಮದೃಷ್ಟಿಯಿಂದ ನೋಡುವ ಸಂವಿಧಾನವನ್ನು ಅಂಬೇಡ್ಕರ ರಚಿಸಿ ಕೊಟ್ಟರು. ಜತೆಗೆ ನಮ್ಮ ಕರ್ತವ್ಯ ನಮಗೆ ಸೂಚಿಸಿದರು. ಸ್ವಾತಂತ್ರ್ಯ ಸಿಕ್ಕು 75 ವರ್ಷ ಗತಿಸಿದರೂ ಸಹ ಅಂಬೇಡ್ಕರ ಅವರ ಆಶಯ ಈಡೇರಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ ಎಂಬುದು ನನ್ನ ಭಾವನೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 134ನೇ ಜಯಂತಿ ಹಾಗೂ ಬಾಬು ಜಗಜೀವನರಾಂ ಅವರ 118ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಆಶಯಗಳು ಇಂದಿನ ಕಾಲದಲ್ಲಿ ಸಾಕಾರ ಗೊಂಡಿವೆಯಾ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಅಸ್ಪ--ೃಶ್ರತೆಯಿಂದ ಅಂಬೇಡ್ಕರ ನೋವು ಉಂಡಿದ್ದರು. ದೇಶದಲ್ಲಿ ಇದ್ದ ಅನಿಷ್ಟ ಪದ್ದತಿ ಹೋಗಲಾಡಿಸಲು ಸತತ ಓದು, ಅಧ್ಯಯನ ಮಾಡಿ ಸಂವಿಧಾನ ರಚಿಸಿದರು. ಸಮಾನತೆ, ಸಮಬಾಳಿನಿಂದ ಬದುಕುಲು ತಿಳಿಸಿದರು. ಆದರೆ, ಕಳೆದ 75 ವರ್ಷದಿಂದ ನಾವು ಸಮಾನತೆಯಿಂದ ಬದುಕುತ್ತಿದ್ದೇವೆಯೇ? ಎಂದರು.
ರಾಜಕೀಯದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲಾಗಿದೆ. ಆದರೆ ಸಾಮಾಜಿಕ ಅಸ್ಪೃಶ್ಯತೆ ಇನ್ನೂ ಬೇರೂರಿದೆ. ಗ್ರಾಮಗಳಲ್ಲಿ ಈ ಪರಿಸ್ಥಿತಿ ಇನ್ನೂ ಇದೆ. ಸಾಮಾಜಿಕ ತೀವ್ರ ಸುಧಾರಣೆ ಪ್ರಸ್ತುತ ಅತ್ಯಂತ ಅವಶ್ಯವಿದೆ. ಸುಧಾರಣೆಗೆ ಹೋರಾಟ ಅವಶ್ಯವಿದೆ. ದಲಿಯ ಸಮುದಾಯ ಆಥಿರ್ಕ ಸುಧಾರಣೆಗೂ ಪ್ರಾಮುಖ್ಯತೆ ನೀಡಬೇಕು ಎಂದರು.
ಹಿಂದುಳಿದ ಸಮುದಾಯಕ್ಕೆ ಸರ್ಕಾರ ಅನೇಕ ಸೌಲಭ್ಯ ನೀಡಿದೆ. ಶಿಕ್ಷಣ, ಪುಸ್ತಕ, ವಸತಿ ಸೇರಿದಂತೆ ನೇಕ ಸೌಲಭ್ಯ ನೀಡಿದೆ. ವಿದ್ಯಾಥಿರ್ ವೇತನ ಸರ್ಕಾರ ನೀಡುತ್ತದೆ. ಎಲ್ಲ ಸೌಲಭ್ಯ ಪಡೆದು ಮಕ್ಕಳನ್ನು ಆಸ್ತಿಯನ್ನಾಗಿಸಿಬೇಕು. ನಿಮ್ಮ ಬೆಳವಣೀಗೆಗೆ ನೀವೇ ಕಾರಣ ಆಗಬೇಕು ಎಂದರು.
ಭಾರತ ಸುಭದ್ರ:
ಭಾರತ ದೇಶದ ಸುತ್ತಮುತ್ತಲಿನ ದೇಶಗಳಲ್ಲಿ ಅಭದ್ರತೆ ಮೂಡಿದೆ. ಎಲ್ಲ ದೇಶಗಳು ಸಾಮಾಜಿಕ, ಆಥಿರ್ಕವಾಗಿ ದಿವಾಳಿಯಾಗಿವೆ. ಆದರೆ ಭಾರತ ದೇಶದಲ್ಲಿ ಸಂವಿಧಾನ ಇರುವ ಕಾರಣ ಸುಭದ್ರವಾಗಿದೆ. ಇಂಧಿರಾ ಗಾಂಧಿ ಅವರ ಹತ್ಯೆ ನಂತರವು ಅಧಿಕಾರ ಹಸ್ತಾಂತರದಲ್ಲಿ ತೊಂದರೆ ಆಗಲಿಲ್ಲ. ಅದಕ್ಕೆ ಮೂಲಕ ಕಾರಣ ನಮ್ಮ ದೇಶದಲ್ಲಿ ಇರುವ ಗಟ್ಟಿ ಪ್ರಜಾಪ್ರಭುಬುತ್ವವೇ ಆಗಿದೆ. ಸಂವಿಧಾನ ಪರಿರ್ಪೂಣ, ಸಕಾರಾತ್ಮಕ ಬಳಕೆ ಆಗದಿದ್ದರೂ ಉದ್ದೇಶ ಈಡೇರುವುದಿಲ್ಲ. ಸಂವಿಧಾನ ಉತ್ತಮ್ಮರ ಕೈಯಲ್ಲಿ ಇರಬೇಕು. ಅಧಮರ ಕೈಗೆ ಸಿಕ್ಕರೆ ದೇಶ ನಾಶವಾಗುತ್ತದೆ ಎಂದು ಸಚಿವರು ಹೇಳಿದರು.
ಬಾಬು ಜಗಜೀವನರಾಂ ಅವರು ಸ್ವಾತಂತ್ರ$್ಯ ನಂತರ ಸಂವಿಧಾನವನ್ನು ಅಚ್ಚುಕಟ್ಟಡು ಜಾರಿಗೊಳಿಸುವಲ್ಲಿ ಶ್ರಮಿಸಿದರು. ಅವರು ಹೊಂದಿದ್ದ ಸಂಸತ ಪಾಂಡಿತ್ಯವನ್ನು ಬ್ರಾಹ್ಮಣರು ನಾಚುವಂತಿತ್ತು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ:
ಅಂಬೇಡ್ಕರ್ ಅವರ ಆತ್ಮಕ್ಕೆ ಶಾಂತಿ ಸಿಕಿಲ್ಲ ಎಂದು ನನ್ನ ಅಭಿಪ್ರಾಯ. ಅಂಬೇಡ್ಕರ್ ನೀಡಿದ ಸಂವಿಧಾನ ಸಂದೇಶ ಪರಿರ್ಪೂಣ ಆಗಿಲ್ಲವಲ್ಲ ಎಂದು ಅಂಬೇಡ್ಕರ್ ಆತ್ಮ ಇನ್ನೂ ನೋವು ಅನುಭವಿಸುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಎಚ್.ಕೆ. ಪಾಟೀಲ ಹೇಳಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ ಅವತ ಕವಿತೆಗಳ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋತೆದಾರ ಭಿಮ ಗೀತೆ ಹಾಡುವ ಮೂಲಕ ಜಾಗೃತಿಗೊಳಿಸಿದರು. ಅಂಬೇಡ್ಕರ್ ಕವಿತೆ ಸಂಪಾದಕ ಮಂಡಳಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್. ನೇಮಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋತೆದಾರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಕೃಷ್ಣ ಪರಾಪುರೆ, ಬಿ.ಬಿ. ಅಸೂಟಿ, ಬಸವರಾಜ ಕಡೆಮನಿ, ರವಿ ಗುಂಜೀಕರ ಇತರರು ಇದ್ದರು.
ನಿರ್ದೇಶನ:
ಅಂಬೇಡ್ಕರ್ ಭವನ ಪಕ್ಕದಲ್ಲಿ ಇರುವ ಉದ್ಯಾನವ ಸಮಾಜ ಕಲ್ಯಾಣ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಮುಂದಿನ ಕಾರ್ಯಕ್ರಮ ಒಳಗಾಗಿ ಉದ್ಯಾನವನ ಅಭಿವೃದ್ಧಿ ಪಡಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋತೆದಾರ ಅವರಿಗೆ ನಿರ್ದೇಶನ ನೀಡಿದರು.
========
ಅಂಬೇಡ್ಕರ ಅವರಿಗೆ ಭಾರತ ರತ್ನ ನೀಡಿದ್ದು BJP ಸರ್ಕಾರ: ಸಂಕನೂರು
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರು, ಅಂಬೇಡ್ಕರ ಮತ್ತು ಬಾಬು ಜಗಜೀವನರಾಂ ಅವರ ತಮ್ಮ ವೈಯಕ್ತಿಕ ಅಭಿವೃದ್ಧಿಗೆ ಬದುಕದೇ ಸಾಮಾಜಿಕ ಅಭಿವೃದ್ಧಿಗೆ ಬದುಕಿದವರು. ಈ ಇಬ್ಬರು ಮಹನೀಯರು ಲಕ್ಷಿ$್ಮ ಪುತ್ರರಲ್ಲ. ಸರಸ್ವತಿ ಪುತ್ರರು ಆಗಿದ್ದರು. ಅಂಬೇಡ್ಕರ್ ಅವರ ಸಾಧನೆ ಪರಿಗಣಿಸಿ ಅಂದಿನ ಪ್ರಧಾನಿ ವಾಜಪೇಯಿ ಅವರು ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಅದೇ ರೀತಿ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 5 ಕ್ಷೇತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪಂಚ ತೀರ್ಥ ಸ್ಥಳಗಳನ್ನಾಗಿ ಅಭಿವೃದ್ಧಿ ಪಡಿಸಿದರು. ಸೂರ್ಯ ಚಂದ್ರರು ಇರುವರೆಗೂ ಸಂವಿಧಾನವನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಸಂಕನೂರು ಹೇಳಿದರು.