ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವಹಿಸಿದ್ದ ಶ್ರೀಮತಿ ರಶ್ಮಿ ಪಾಟೀಲ್ ಸಹ ಪ್ರಾಧ್ಯಾಪಕರು ಶುಶ್ರೂಷ ವಿಜ್ಞಾನ ಸಂಸ್ಥೆ, ಗದಗ ಇವರು ಮಾತನಾಡಿ ಉಪಯುಕ್ತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಧನ್ಯವಾದವನ್ನು ತಿಳಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಸ್ಕಿಝೋಫ್ರೀನಿಯಾ ಖಾಯಿಲೆ ಮತ್ತು ಚಿಕಿತ್ಸೆ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ತಿಳಿಸಿದರು.
ಡಾ ಪ್ರೀತ್ ಖೋನಾ ತಾಲೂಕಾ ಆರೋಗ್ಯ ಅಧಿಕಾರಿಗಳು, ಗದಗ, ಮಾತನಾಡಿ ಸ್ಕಿಝೋಫ್ರೀನಿಯಾ ಖಾಯಿಲೆ ಕುರಿತು ಮಾಹಿತಿ ನೀಡಿ ಚಿಕಿತ್ಸೆಗಳ ಬಗ್ಗೆ ವಿವರಿಸಿದರು, ಮಾನಸಿಕ ಅಸ್ವಸ್ಥರಿಗೆ ಸಮಾಜದ ಕಾಳಜಿ ಅತ್ಯವಶ್ಯವಾಗಿದೆ ಎಂದು ತಿಳಿಸಿ ಭಾರತ ಸರ್ಕಾರವು ಪ್ರಾರಂಭಿಸಿರುವ ಟೆಲಿ-ಮನಸ್ ಉಚಿತ ಸಹಾಯವಾಣಿ ಸಂಖ್ಯೆ 14416 ಗೆ ಕರೆ ಮಾಡಿ ಆಪ್ತ ಸಮಾಲೋಚನೆ ಸೇವೆ ಪಡೆಯಬಹುದು ಎಂದು ತಿಳಿಸಿದರು ಹಾಗೂ ಪ್ರತಿಯೊಬ್ಬರಿಗೂ ಮಾನಸಿಕ ಆರೊಗ್ಯ ಅತ್ಯವಶ್ಯಕವಿದ್ದು ಮಾನಸಿಕ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜಾಗೃತಿ ಮೂಡಿಸುವದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ವಿದ್ಯಾಬ್ಯಾಸದ ಜೊತೆಗೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಹಾಗೂ ಸಮಾಜವು ಮಾನಸಿಕ ಖಾಯಿಲೆ ಇದ್ದ ವ್ಯಕ್ತಿಗೆ ಕಾಳಜಿ ವಹಿಸಿ ಚಿಕಿತ್ಸೆ ಕೊಡಿಸಲು ಮುಂದಾಗಬೇಕೆAದು ಕರೆ ನೀಡಿ ಉಪನ್ಯಾಸ ಮಾಡಿದರು.
ಅತಿಥಿಯಾಗಿ ರೂಪಸೇನ ಚವ್ಹಾಣ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಗದಗ ಇವರು ಉಪಸ್ಥಿತರಿದ್ದರು.