ರಾಮರಾಜ್ಯ ಕನಸು ಕಂಡವರು ಗಾಂಧೀಜಿ: ಎಸ್​. ವಿ. ಸಂಕನೂರ

Published on

ವಿಜಯವಾಣಿ ಸುದ್ದಿಜಾಲ ಗದಗ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್​ಬಹದ್ದೂರ ಶಾಸ್ತ್ರೀಜಿಯವರು ದೇಶಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ವಿಧಾನ ಪರಿಷತ್​ ಶಾಸಕ ಎಸ್​. ವಿ. ಸಂಕನೂರ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸತ್ಯ, ಅಹಿಂಸೆ ಹಾಗೂ ಪ್ರೇಮ ಎಂಬ ಮೂರು ಅಸ್ತ್ರಗಳಿಂದ ಹೋರಾಡಿ ನಮ್ಮ ದೇಶಕ್ಕೆ ಸ್ವತಂತ್ರ ತಂದುಕೊಟ್ಟರು. ತಮ್ಮ ಇಡೀ ಜೀವನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಸಮಾಜದ ಅಭಿವೃದ್ಧಿಗಾಗಿ ಮುಡಿಪಿಟ್ಟ ಮಹಾತ್ಮರು. ಯಾವುದೇ ಆಸೆ ಆಕಾಂೆಗಳನ್ನು ಹೊಂದದೇ ತಮ್ಮನ್ನು ತಾವು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡರು. ಸ್ವಾತಂತ್ರ್ಯ ನಂತರ ಈ ದೇಶವನ್ನು ಸುಂದರ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸಿದರು ಎಂದರು.
ಸಮಾಜದಲ್ಲಿ ಇರುವ ಅಸಮಾನತೆ ಹೋಗಲಾಡಿಸುವುದು, ಸ್ತ್ರೀ ಸ್ವಾತಂತ್ರ್ಯ, ಸ್ವದೇಶಿ ವಸ್ತುಗಳ ಬಳಕೆ, ಹರಿಜನರ ಅಭಿವೃದ್ಧಿ, ಮದ್ಯಪಾನ ನಿಷೇಧ, ಗೋಹತ್ಯೆ ನಿಷೇಧಕ್ಕಾಗಿ ಗಾಂಧೀಜಿ ಹೋರಾಡಿದರು. ಗಾಂಧೀಜಿಯವರು ಸ್ವಾತಂತ್ರ್ಯ ನಂತರ ರಾಮರಾಜ್ಯದ ಕನಸು ಕಂಡವರು. ಪ್ರಾಮಾಣಿಕ ಕೆಲಸ, ಭ್ರಷ್ಟಾಚಾರ ನಿರ್ಮೂಲನೆ ಇವೆಲ್ಲವುಗಳು ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆಯಾಗಿದ್ದವು. ಅವರ ಸಂದೇಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶ್ರಮ ಇಲ್ಲದ ಸಂಪತ್ತು, ಪ್ರಜ್ಞೆ ಇಲ್ಲದ ಸಂತೋಷ, ತತ್ವವಿಲ್ಲದ ರಾಜಕೀಯ, ಬುಡ ಇಲ್ಲದ ಶಿಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ವಿಜ್ಞಾನ, ತ್ಯಾಗ ಇಲ್ಲದ ಪೂಜೆ ಇವೆಲ್ಲವುಗಳು ನಿರರ್ಥಕ. ಗಾಂಧೀಜಿಯವರ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಎಸ್​.ವಿ. ಸಂಕನೂರು ಸಲಹೆ ನೀಡಿದರು.
ಉಪನ್ಯಾಸ ನೀಡಿದ ಸಾಹಿತಿ ಐ. ಕೆ. ಕಮ್ಮಾರ, ಮನುಷ್ಯನ ವಿಚಾರಧಾರೆಗೂ ನಿಲುಕಲಾರದ ಅನೇಕ ಸಾಧನೆಗಳನ್ನು ಗಾಂಧೀಜಿ ಮತ್ತು ಲಾಲ್​ಬಹದ್ದೂರ ಶಾಸ್ತ್ರೀಜಿ ಮಾಡಿದ್ದಾರೆ. ಈಗಿನ ಯುವಕರು ಅವರನ್ನು ಮಾದರಿಯಾಗಿ ಜೀವನಶೈಲಿ ಅಳವಡಿಸಕೊಳ್ಳಬೇಕು. ಅಂದಾಗ ಮಾತ್ರ ಸ್ವಾತಂತ್ರ್ಯ ದೇಶದ ಋಣ ತೀರಿಸಿದಂತಾಗುತ್ತದೆ. ದೇಶಪ್ರೇಮಿಗಳ ಸಂದೇಶಗಳನ್ನು ಸಾರುವ ಕೆಲಸವಾಗಬೇಕು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಭಷ್ಟಾಚಾರ ಮುಕ್ತ ದೇಶವನ್ನಾಗಿಸುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಅಪರ ಜಿಲ್ಲಾಧಿಕಾರಿ ಅನ್ನರ್ಪೂಣ ಎಂ, ಜಿಪಂ ಸಿಇಓ ಭರತ್​ ಎಸ್​, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಎಂ. ಬಿ. ಸಂಕದ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೋತದಾರ, ತಹಶೀಲ್ದಾರ ಶ್ರೀನಿವಾಸ ಕುಲಕಣಿರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್​, ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net