ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ ಮಾತನಾಡಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 330 ನೋಂದಣಿ ಘಟಕಗಳು, 367 ಉಪ ನೋಂದಣಿ ಘಟಕಗಳು ಹಾಗೂ ನಗರ ಪ್ರದೇಶಗಳಲ್ಲಿ 9 ನೋಂದಣಿ ಘಟಕ, 12 ಉಪ ನೋಂದಣಿ ಘಟಕಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಲೆಕ್ಕಿಗರು ನೊಂದಣಾಧಿಕಾರಿಯಾಗಿರುತ್ತಾರೆ. ಪಿಡಿಓ ಮತ್ತು ಸಿಎಚ್‌ಸಿ ಮುಖ್ಯಸ್ಥರು ಉಪನೋಂದಣಾಧಿಕಾರಿಗಳಾಗಿರುತ್ತಾರೆ. ನಗರ ಪ್ರದೇಶದಲ್ಲಿ ಆರೋಗ್ಯ ನಿರೀಕ್ಷಕರು ನೋಂದಣಾಧಿಕಾರಿಗಳಾಗಿದ್ದು, ಆಸ್ಪತ್ರೆಯ ಮುಖ್ಯಸ್ಥರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪ ನೋಂದಣಾಧಿಕಾರಿಗಳಾಗಿರುತ್ತಾರೆ. ನಮೂನೆ 1 – ಜನನ, ನಮೂನೆ 2 -ಮರಣ, ನಮೂನೆ 3 - ನಿರ್ಜೀವ ಜನನ ಇವುಗಳನ್ನು ಕಡ್ಡಾಯವಾಗಿ ಇ- ಜನ್ಮ ತಂತ್ರಾAಶದಲ್ಲಿ ಅಪ್ ಲೋಡ್ ಮಾಡಬೇಕು ಎಂದರು.