ಪಂಚಪೀಠ ಪ್ರಶ್ನಿಸಿದವರು ಉಳಿದಿಲ್ಲ, ಸ್ವಂತ ಪೀಠ ಸ್ಥಾಪಿಸಿದವರಿಗೆ ಅಸ್ತಿತ್ವವೂ ಇಲ್ಲ: ಕಳಕಪ್ಪ ಬಂಡಿ

123
Published on

Gadag: ಸಮಾಜದಲ್ಲಿ ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ಗೊಂದಲ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಈ ಹಿಂದೆ ಪ್ರತ್ಯೇಕ ಲಿಂಗಾತ ದರ್ಮ ಸೃಷ್ಟಿಸುವ ಗೊಂದಲದ ಸಮಯದಲ್ಲಿ ರಂಭಾಪುರಿ ಶ್ರೀಗಳು, ಈ ಭಾಗದ ಹಲವು ಮಠಗಳ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆದ ಪರಿಣಾಮ ವೀರಶೈವ ಲಿಂಗಾಯತ ಧರ್ಮ ಒಗ್ಗಟ್ಟಾಗಿದೆ ಎಂದು ಮಾಜಿ ಶಾಸಕ ಕಳಕಪ್ಪ ಬಂಡಿ ಹೇಳಿದರು.
ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆಯುತ್ತಿರುವ ರಂಭಾಪುರಿ ಜಗದ್ಗುರುಗಳ ದಸರಾ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಸ್ವಂತ ಪೀಠ ಕಟ್ಟಿಕೊಂಡು ದರ್ಮವನ್ನು ಪ್ರಶ್ನಿಸಿಸುತ್ತಿದ್ದಾರೆ. ಅಂತಹ ಪೀಠಕ್ಕೆ ಅಸ್ತಿತ್ವ ಇಲ್ಲ ಎಂದ ಅವರು, ಪಂಚಪೀಠವನ್ನು ಪ್ರಶ್ನಿಸಿದವರು ಭೂಮಿಯಿಂದ ಹೊರಟು ಹೋಗಿದ್ದಾರೆ. ಕೆಲವರು ಹೋಗಲು ಸಿದ್ಧತೆ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು. ಪಂಚಪೀಠಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿ, ಭಾರತಕ್ಕೆ, ವಿಶ್ವಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net