ಗುಡ್ಡಾಪೂರ ದಾನಮ್ಮತಾಯಿಯ ತೊಟ್ಟಿಲೋತ್ಸವ, ನಾಮಕರಣ

25GDG07
Published on

ವಿಜಯವಾಣಿ ಸುದ್ದಿಜಾಲ ಗದಗ

ಮಕ್ಕಳಿಗೆ ಒಳ್ಳೆ ಸಂಸ್ಕಾರ, ಸಂಸತಿ ನೀಡುವ ಮೂಲಕ ಅವರಿಗೆ ಉತ್ತಮ ಶಿಣ ನೀಡಿ ಧರ್ಮ ಮಾರ್ಗದಲ್ಲಿ ಮುನ್ನಡೆಸಲು ಪಾಲಕರು ಮುಂದಾಗಬೇಕು ಎಂದು ಬೆಳ್ಳಟ್ಟಿಯ ಕ್ಕೀರೇಶ್ವರ ಶಾಸ್ತ್ರೀಗಳು ಹಿರೇಮಠ ಹೇಳಿದರು.

ಬಸವೇಶ್ವರ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ದಾನಮ್ಮದೇವಿಯ 18ನೇ ವರ್ಷದ ಪುರಾಣ ಪ್ರವಚನ ಮಾಲಿಕೆಯಲ್ಲಿ ಶರಣೆ ದಾನಮ್ಮತಾಯಿ ತೊಟ್ಟಿಲು ಮತ್ತು ನಾಮಕರಣ ಸಮಾರಂಭ ನೆರವೇರಿಸಿ ಮಾತನಾಡಿದರು.

ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಹವ್ಯಾಸಗಳನ್ನು ರೂಢೀಸಬೇಕು. ಟಿ. ವಿ, ಮೊಬೈಲ್​ ಹುಚ್ಚು ತಪ್ಪಿಸಿ ಓದಿನ ಕಡೆ ಗಮನ ಹರಿಸುವಂತೆ ಮಾಡಬೇಕು. ಒಳ್ಳೆ ಶಿಣದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಲಲಿತಾ ತಡಸದ, ಸಾವಿತ್ರಿ ಬೇವಿನಮರದ, ಪುಷ್ಪಾವತಿ ಬಳ್ಳಾರಿ, ವಿಜಯಲಕ್ಷಿ$್ಮ ಬೆಂಗಳೂರು, ಸುರೇಖಾ ಪಿಳ್ಳಿ, ಮಹಾನಂದ ಯಂಡಿಗೇರಿ, ಶಾರದಾ ಹಚಡದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net