ದಲಿತ ಯುವ ಕಾವ್ಯ ಕಮ್ಮಟದ ಸಮಾರೋಪ

01GDG05
Published on

ಅನ್ಯಾಯದ ವಿರುದ್ಧ ಸಿಡಿದೇಳುವ ಶಕ್ತಿ ಕನ್ನಡ ದಲಿತ ಕಾವ್ಯಕ್ಕಿದೆ: ದೊಡ್ಡಣ್ಣ ಭಜಂತ್ರಿ

ವಿಜಯವಾಣಿ ಸುದ್ದಿಜಾಲ ಗದಗ

ಕಾವ್ಯ ಎಂದರೆ ಜೀವನ ಪ್ರೀತಿ. ಕಾವ್ಯ ಎಂದರೆ ಅಂತಕರಣ. ಕಾವ್ಯ ಎಂದರೆ ಮನುಷ್ಯತ್ವ. ಅದರ ಒಳಗಡೆ ಆಗಾಧವಾದ ಶಕ್ತಿ ಸಾಮರ್ಥ್ಯವಿದೆ. ಶೋಷಣೆಯುಕ್ತ ಸಮಾಜದ ದೌರ್ಜನ್ಯ, ಅನ್ಯಾಯದ ವಿರುದ್ಧ ಸಿಡಿದೇಳುವ ಶಕ್ತಿ ಕನ್ನಡ ದಲಿತ ಕಾವ್ಯಕ್ಕಿದೆ ಎಂದು ಕವಿಗಳಾದ ದೊಡ್ಡಣ್ಣ ಭಜಂತ್ರಿ ಹೇಳಿದರು.

ತಾಲೂಕಿನ ಹುಲಕೋಟಿಯ ಕೆ. ಎಚ್​. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಲಿತ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಸಹಕಾರ ರೇಡಿಯೋ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಜ್ಯಮಟ್ಟದ ದಲಿತ ಯುವ ಕಾವ್ಯಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದಲಿತ ಕಾವ್ಯದಲ್ಲಿ ಜೀವಪರ ಕಾಳಜಿಯ ಚಿಂತನೆಯಿದೆ. ಡಾ. ಸಿದ್ಧಲಿಂಗಯ್ಯ, ಅರವಿಂದ ಮಾಲಗತ್ತಿ, ಸುಬ್ಬು ಹೊಲೆಯಾರ, ಡಾ. ಸತ್ಯಾನಂದ ಪಾತ್ರೋಟ, ಮುಡ್ನಾಕೂಡು ಚಿನ್ನಸ್ವಾಮಿ ಮುಂತಾದ ಕವಿಗಳ ಕಾವ್ಯಗಳಲ್ಲಿ ಮನುಷ್ಯ ಕೇಂದ್ರಿತ ಚಿಂತನೆಗಳಿವೆ. ದಲಿತ ಯುವ ಕಾವ್ಯಕಮ್ಮಟ ಮುಂದಿನ ತಲೆಮಾರಿನ ಬರಹಗಾರರಿಗೆ ದಿಕ್ಸೂಚಿಯಾಗಲಿ ಎಂದರು.

ಕರ್ನಾಟಕದ ವಿವಿಧ ಜಿಲ್ಲೆಗಳ 50ಕ್ಕೂ ಹೆಚ್ಚು ಯುವ ಕವಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು. ಹುಲಕೋಟಿಯ ಮುಕ್ತಿವನದಲ್ಲಿ ಆಯ್ದ ದಲಿತ ಕಾವ್ಯ ಓದು ಚರ್ಚೆಯನ್ನು ಏರ್ಪಡಿಸಿದ್ದು ವಿಶೇಷತೆಯಾಗಿತ್ತು.

ಕಮ್ಮಟದ ನಿರ್ದೇಶಕ ಡಾ. ಸದಾಶಿವ ದೊಡ್ಡಮನಿ, ಸಹ ನಿರ್ದೇಶಕ ಡಾ. ಲಕ್ಷಿ$್ಮ ನಾರಾಯಣಸ್ವಾಮಿ, ಡಾ. ಸೋಮಕ್ಕ ಎಂ, ಡಾ. ವೈ. ಎಂ. ಭಜಂತ್ರಿ, ಖಜಾಂಚಿ ಡಾ. ಎಚ್​. ಬಿ ಕೋಲ್ಕಾರ, ರಾಜ್ಯಾಧ್ಯ ಡಾ. ಅರ್ಜುನ ಗೊಳಸಂಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net