

ಗದಗ: ಸಾರ್ವಜನಿಕ ಜೀವನದಲ್ಲಿ ಶಾಂತಣ್ಣ ಮುಳವಾಡ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಶಾಂತಣ್ಣನವರ ಬಗ್ಗೆ ನಮಗೆ ಬಹಳ ಪ್ರೀತಿ, ವಿಶ್ವಾಸ ಇದೆ. ಸಮಾಜ ಖುರ್ಚಿ, ಅಧಿಕಾರ ನೋಡುವುದಿಲ್ಲ. ಬದಲಾಗಿ ಕಷ್ಟದಲ್ಲಿ ಕೈ ಹಿಡಿಯುವ ಹೃದಯವನ್ನು ನೋಡುತ್ತದೆ. ಶಾಂತಣ್ಣನವರಿAದ ಪಾಠ ಕಲಿಯುವುದು ಬಹಳಷ್ಟಿದೆ. ಬುಳ್ಳಾ ಪ್ಲಾಟಿನಲ್ಲಿ ಯಾವುದೇ ಸಮಸ್ಯೆ ಆದರೂ ಶಾಂತಣ್ಣ ಸ್ಪಂದಿಸುತ್ತಾರೆ. ನಮ್ಮ ಕುಟುಂಬದ ಮೇಲೆ ಅಲ್ಲಿನ ಜನ ಅಪಾರ ಪ್ರೀತಿ, ಅಭಿಮಾನ ಹೊಂದಿದ್ದಾರೆ ಎಂದು ಮಾಜಿ ಶಾಸಕ ಡಿ. ಆರ್ ಪಾಟೀಲ್ ಹೇಳಿದರು.
ನಗರದ ಕೆ. ಎಚ್ ಪಾಟೀಲ್ ಸಭಾಭವನದಲ್ಲಿ ಕೆ ಎಸ್ ಆರ್ ಟಿ ಸಿ ಸ್ಟಾಪ್ ವರ್ಕರ್ಸ್ ಫೆಡರೆಷನ್ ಗದಗ ವಿಭಾಗದ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷ ಶಾಂತಣ್ಣ ಅ. ಮುಳವಾಡರವರ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಲ್ಲರೂ ನಮ್ಮವರು ಎನ್ನುವ ಭಾವವನ್ನು ಶಾಂತಣ್ಣ ಮುಳವಾಡ ಹೊಂದಿದ್ದಾರೆ. ಅವರ ಸೇವಾ ಅವಧಿಯಲ್ಲಿನ ಅಧಿಕಾರಿಗಳಿಗೂ ಅವರು ಅಚ್ಚು-ಮೆಚ್ಚಾಗಿದ್ದರು. ಶಾಂತಣ್ಣನವರು ನಮ್ಮಂತ ರಾಜಕಾರಣಿಗಳಿಗೆ ಪ್ರೇರಣೆ ಆಗಿದ್ದಾರೆ. ಅವರ ಹಾಗೂ ನನ್ನ ನಡುವೆ ಅವಿನಾಭಾವ ಸಂಬAದವಿದ್ದು, ಈ ಸಂಬAದ ಜೀವನದ ಕೊನೆಯವರೆಗೂ ಮುಂದುವರಿಯಲಿ ಎಂದು ಪುಟ್ಟರಾಜ ಗವಾಯಿಗಳಲ್ಲಿ ಪ್ರಾರ್ಥಿಸುತ್ತೇನೆ. ಅವರು ಶತಾಯುಷಿ ಆಗುವುದರಲ್ಲಿ ಸಂದೇಹವಿಲ್ಲ. ಸಮಾಜಕ್ಕೆ ಸೇವೆ ಸಲ್ಲಿಸುವ ಹಂಬಲ ಅವರಲ್ಲಿ ಇನ್ನೂ ಇದ್ದು ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಉನ್ನತ ಹುದ್ದೆ ನೀಡುವ ಜವಾಬ್ದಾರಿ ನನ್ನದು ಎಂದು ಡಿ. ಆರ್ ಪಾಟೀಲ್ ಭರವಸೆ ನೀಡಿದರು.
ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಶಾಂತಣ್ಣ ಮುಳವಾಡ ಅವರು ಮಾತನಾಡಿ, ನನ್ನ ಅಧಿಕಾರದ ಅವದಿಯಲ್ಲಿ ಅನೇಕ ಅಡೆ-ತಡೆಗಳನ್ನು ಎದುರಿಸಿದ್ದೇನೆ. ೮-೯ಬಾರಿ ಅಧಿಕಾರಿಗಳು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಿದ್ದರು. ಆದರೆ, ಡಿ.ಆರ್ ಪಾಟೀಲ್ ಹಾಗೂ ಹೆಚ್. ಕೆ ಪಾಟೀಲರು ಒಂದೇ ದಿನದಲ್ಲಿ ಮತ್ತೆ ಗದಗದಲ್ಲೇ ಸೇವೆ ಸಲ್ಲಿಸುವಂತೆ ಮಾಡಿದ್ದಾರೆ. ಇದರ ಪರಿಣಾಮ ಸತತ ೨೮ವರ್ಷಗಳ ಕಾಲ ಗದಗದಲ್ಲೇ ಸೇವೆ ಸಲ್ಲಿಸಲು ಅವಕಾಶ ಸಿಕ್ಕಂತಾಯಿತು. ಕಾರ್ಮಿಕರ ಸಮಸ್ಯೆಯ ವಿರುದ್ದವಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ನೂರಾರು ಕಾರ್ಮಿಕರು ಸಹಕಾರ ನೀಡಿದರು. ಇದರಿಂದ ನಾನು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಸಹೋದರ ಸಮಾನರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಶಾಂತಣ್ಣ ಅ. ಮುಳವಾಡ ಭಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿ ನಿರಂಜನ್ ಮೂರ್ತಿ, ಸಿ. ವಿ ಚಂದ್ರಶೇಖರ್, ಡಿ. ಎಮ್ ದೇವರಾಜ್, ಆರ್ ಎಪ್ ಕವಳಿಕಾಯಿ, ಜಿ. ವಿ ಬಳಗಾನೂರ, ಗುರುರಾಜ್ ಬಳಗಾನೂರ, ಪ್ರಭು ಬುರಬುರೆ, ಬಸವರಾಜ ಅಸೂಟಿ, ಮೋಹನ್ ಮಾಳಶೇಟ್ಟಿ, ಟಿ. ಎನ್ ಆಸಂಗಿ, ಅಸ್ಲಾಂ ನರೆಗಲ್, ವಿದ್ಯಾಧರ್ ದೊಡ್ಡಮನಿ, ಶರಣಪ್ಪ ಗುಡಿಮನಿ, ಶೇಖಣ್ಣ ಮುಳವಾಡ, ಚನ್ನವೀರಪ್ಪ ಮಳಗಿ, ಎಮ್ ಐ ನವಲಗುಂದ, ಎಮ್ ವಿ ಭಗವತಿ, ಗೋಪಾಲ್ ರಾಯ್, ಪರಶುರಾಮ್ ನಾಯ್ಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.