ಸೈಬರ್​ ಕೆಂ ಬಗ್ಗೆ ಹೆಚ್ಚಿನ ಮಾಹಿತಿ ಅವಶ್ಯ: ಎ. ಪ್ರಕಾಶ

06GDG06
Published on

ವಿಜಯವಾಣಿ ಸುದ್ದಿಜಾಲ ಗದಗ

ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿರಬೇಕು ಮತ್ತು ವ್ಯವಹಾರ ಮಾಡುವಾಗ ಬ್ಯಾಂಕಿನ ಜೊತೆಗೆ ಉತ್ತಮ ಬಾಂಧ್ಯವನ್ನು ಹೊಂದಬೇಕು. ಇದರಿಂದ ಸಾಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ ಸಿನಿಯರ ರಿಜಿನಲ್​ ಮ್ಯಾನೇಜರ್​ ಎ. ಪ್ರಕಾಶ ಹೇಳಿದರು.

ಗದಗ ಚೇಂಬರ್​ ಆ್​ ಕಾಮರ್ಸ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಿಳೆಯರ ಆಥಿರ್ಕ ಅಭಿವೃದ್ಧಿಯಲ್ಲಿ ಬ್ಯಾಂಕಿನ ಮಹತ್ವ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪುರುಷರಿಗೆ ಸಿಗುವ ಸೌಲಭ್ಯದಷ್ಟೇ ಮಹಿಳೆಯರಿಗೂ ಸೌಲಭ್ಯ ಸಿಗುತ್ತವೆ. ನಮ್ಮ ಬ್ಯಾಂಕದಿಂದ ಬ್ಯೂಟಿಪಾರ್ಲರ್​, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಗೆ, ಸಣ್ಣ ಪ್ರಮಾಣದ ತರಬೇತಿಗಳನ್ನು ನೀಡುವ ಕಾರ್ಯಗಾರ ಮಾಡುತ್ತಿದ್ದೇವೆ. ತರಬೇತಿ ನಂತರ ಅವರಿಗೆ ಸ್ವಯಂ ಉದ್ಯೋಗ ಮಾಡಲು ಸಾಲ ಸೌಲಭ್ಯಗಳು ನೀಡಲಾಗುತ್ತದೆ ಎಂದರು.

ಮಹಿಳೆಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ 10 ಲದವರೆಗೆ ಯಾವುದೇ ರೀತಿಯ ಭದ್ರತೆ ಇಲ್ಲದೆ ಸಾಲವನ್ನು ಪಡೆಯಬಹುದು. ಮಹಿಳೆಯರಿಗೆ ಸರ್ಕಾರವು ಸಾಕಷ್ಟು ಯೋಜನೆಗಳ ಜತೆಗೆ ಸೌಲಭ್ಯಗಳನ್ನು ತಂದಿರುತ್ತದೆ. ಎಸ್​ಸಿ, ಎಸ್​ಟಿ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.

ಬ್ಯಾಂಕ್​ ಮ್ಯಾನೇಜರ್​ ಅನಂತ ಪ್ರಸಾದ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರನ್ನು ಸ್ವಾಲಂಭಿಗಳನ್ನಾಗಿ ಮಾಡಲು ಸಾಕಷ್ಟು ಶ್ರಮಿಸುತ್ತಿವೆ. ಬ್ಯಾಂಕುಗಳಲ್ಲಿ ವೈಯಕ್ತಿಕವಾಗಿ ಯಾವುದೇ ರೀತಿಯಿಂದ ದೂರವಾಣಿ ಮುಖಾಂತರ ಮಾಹಿತಿಯನ್ನು ಕೇಳುವುದಿಲ್ಲ. ಆದ್ದರಿಂದ ಮೊಬೈಲ್​ನಲ್ಲಿ ಮಾಹಿತಿ ಬಗ್ಗೆ ಕರೆಗಳು ಬಂದರೆ, ಅವುಗಳಿಗೆ ಸ್ಪಂದಿಸಬಾರದು ಮತ್ತು ಮೊಬೈಲ್​ಗಳಲ್ಲಿ ಲಿಂಕಗಳಿಗೆ ತಮ್ಮ ವಿವರಗಳನ್ನು ಹಾಕಬಾರದು. ಹೂಡಿಕೆಯಲ್ಲಿ ಅನೇಕ ರೀತಿಯಿಂದ ಮೋಸವಾಗುವುದು ಸಹಜ. ಅನಾಮಿಕ ಲಿಂಕಗಳು ಮೊಬೈಲ್​ಗೆ ಬರುವುದರಿಂದ ತಿಳಿಯದೇ ಲಿಂಕಗಳಿಗೆ ತಮ್ಮ ಮಾಹಿತಿ ನೀಡಬಾರದು. ಇದರಿಂದ ಸಾಕಷ್ಟು ಜನರು ತೊಂದರೆಯನ್ನು ಎದುರಿಸುತ್ತಿದ್ದಾರೆ. ಖಾತೆಯಲ್ಲಿ ಇರುವಂತಹ ಹಣವನ್ನು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ನಂದಾ ಚಂದ್ರು ಬಾಳಿಹಳ್ಳಿಮಠ, ಶಿವಲೀಲಾ ಹಿರೇಮಠ, ಸುವರ್ಣಾ ಮದರಿಮಠ, ಜ್ಯೋತಿ ರಾಮನಗೌಡ ದಾನಪ್ಪಗೌಡ್ರ, ಸುಜಾತಾ ಗುಡಿಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net