

ಗದಗ: ಮಳೆಯಿಂದಾಗಿ ಮುಂಗಾರಿನ ಬೆಳೆ ಹಾನಿ ಮಧ್ಯಂತರ ಪರಿಹಾರ ನಿಡುವಂತೆ ನಗರದ ರೈತ ಹಿತಾಭಿವೃದ್ಧಿ ಸಂದಿಂದ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸಂಗದ ಕಾರ್ಯದಶಿರ್ ಪರಮೇಶ್ವರಪ್ಪ ಪರಪ್ಪ ಜಂತ್ಲಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮುಂಗಾರಿನ ಅಬ್ಬರ ಅಧಿಕವಾಗಿದೆ. ಸತತ 20 ದಿನಗಳಿಂದ ಮಳೆ ಸುರಿಯುತ್ತಿದೆ. ಮುಂಗಾರು ಬೆಳೆಗಳು ಹಾನಿಯಾಗುತ್ತಿವೆ. ಆದ್ದರಿಂದ ವಿಮಾ ಕಂಪನಿಯವರು ರೈತರಿಗೆ ಬೆಳೆ ವಿಮೆ ಹಾಗೂ ಮಧ್ಯಂತರ ಬೆಳೆ ವಿಮಾ ಹಣವನ್ನು ಪಾವತಿ ಮಾಡಲು ವಿಮಾ ಕಂಪನಿಗೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದರು.
ಹೆಸರು, ಗೋವಿನಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ, ಬಿಟಿ ಹತ್ತಿ ಸೇರಿದಂತೆ ಎಲ್ಲ ಬೆಳೆಗಳಿಗೆ ಮಳೆ ಹೆಚ್ಚಾದ ಪರಿಣಾಮ ಕೊಳೆರೋಗ ಬಂದು ಎಲೆ ಹಳದಿಯಾಗಿವೆ. ಗೋವಿನ ಜೋಳಕ್ಕೆ ಲದ್ದಿ ಹುಳುವಿನಿಂದ ಬೆಳೆಗಳು ರೋಗಕ್ಕೆ ತುತ್ತಾಗಿವೆ. ಹಾಗಾಗಿ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ರೈತರ ಕಷ್ಟಕ್ಕೆ ಅನುವು ಮಾಡಿಕೊಡಬೇಕು ಎಂದರು.
ಬಸಪ್ಪ ಕಲಬಂಡಿ, ಕಳಕಪ್ಪ ರೇವಡಿ, ಮಂಜುನಾಥ ಕೋಳಿವಾಡ, ಮುತ್ತಣ್ಣ ಜೆ.ಡಿ, ಮಂಜುನಾಥ ಹಿತ್ತಲಮನಿ, ವಿರೂಪಾಪ್ಪ ಅಕ್ಕಿ, ಈಶ್ವರಪ್ಪ ಗುಜಮಾಗಡಿ, ಬಸವರಾಜ ಕವಳಿಕಾಯಿ, ಕರಬಸಯ್ಯ ನಲ್ವಾತವಾಡಮಠ ಇತರರು ಇದ್ದರು.