ಗದಗ ಮಾರುಕಟ್ಟೆಯಲ್ಲಿ  ಗ್ರಾಹಕರಿಗೆ ಮೋಸ

IMG-20250614-WA0014
Published on
ಗ್ರಾಹಕರೇ ಎಚ್ಚರ!  ಪ್ರತಿಷ್ಠಿತ ಬ್ರಾಂಡನ ಎಣ್ಣೆ ಪಾಕೀಟ್‌ನಲ್ಲಿ ನೀರು
ಗದಗ : ದಿನಪಯೋಗಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವದರಿಂದ ಸಾಮಾನ್ಯ ಜನರು ಹೈರಾಣಾಗಿದ್ದಾರೆ.  ಇಂತಹ ಸಂದರ್ಭದಲ್ಲಿ  ಪ್ರತಿನಿತ್ಯ ಎಲ್ಲರಿಗೂ ಬೇಕಾಗುವ ಅಡುಗೆ ಎಣ್ಣೆಯ ಪಾಕೀಟ್‌ನಲ್ಲಿ  ಎಣ್ಣೆಯ ಬದಲಾಗಿ ನೀರು ಇರುವದನ್ನು ನೋಡಿ ಗ್ರಾಹಕರಿಗೆ ಗಯದ ಮೇಲೆ ಬರೆ ಎಳೆದಂತಾಗಿದೆ.
ನಗರದ ಗಂಗಾಪೂರ ಪೇಟೆಯಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಿರುವ ಸೋಮು ಮೇಟಿ ಎಂಬುವರು ಮಾರುಕಟ್ಟೆಯಲ್ಲಿರುವ ಬಸವೇಶ್ವರ ಕಿರಾಣಿ ಸ್ಟೋರ್‌ನಲ್ಲಿ ಮಂಗಳವಾರ ಒಂದು ಬಾಕ್ಸ್ ಪ್ರತಿಷ್ಠಿತ ಬ್ರಾಂಡನ ಎಣ್ಣೆಯ ಪಾಕೇಟ್‌ಗಳನ್ನು ಖರೀದಿಸಿದ್ದಾರೆ. ನಂತರ ಅದನ್ನು ತಂದು ಮಾರಾಟ ಮಾಡುವ ಸಂದರ್ಭದಲ್ಲಿ ಗ್ರಾಹಕರೊಬ್ಬರು ಒಂದು ಪಾಕೇಟ್‌ನ್ನು ಪಡೆದು ಮನೆಗೆ ಹೋಗಿ ಒಡೆದು ನೋಡಿದಾಗ ಅದರಲ್ಲಿ ಬರಿ ನೀರು ಇರುವದು ಕಂಡು ಬಂದಿದೆ. ಈ ಬಗ್ಗೆ  ಗ್ರಾಹಕ ಸೋಮು ಅವರ ಗಮನ ಸೆಳೆದಾಗ ಅವರು ಎರಡು ಪಾಕೇಟ್ ಒಡೆದು ನೋಡಿದಾಗ ಅದರಲ್ಲಿಯೂ ಸಹ ನೀರು ಕಂಡು ಬಂದಿದೆ. ಇದರಿಂದ ಗಾಬರಿಗೊಂಡ ತಾನು ಖರೀಧಿಸಿದ  ಗ್ರೇನ್ ಮಾರ್ಕೇಟ್‌ನಲ್ಲಿರುವ ಬಸವೇಶ್ವರ ಕಿರಾಣಿ ಸ್ಟೋರ್  ಮಾಲೀಕರಲ್ಲಿ  ಕೇಳಿಕೊಂಡಾಗ ಈ ಬಗ್ಗೆ ನಿರ್ಲಕ್ಷವಹಿಸಿ ತನಗೂ ಇದಕ್ಕೂ ಸಂಬAದವಿಲ್ಲ ನಾನೂ ಕೂಡಾ  ರಾವಲ್  ಎಜೆನ್ಸಿ ಅವರಿಂದ ಪಡೆದುಕೊಂಡಿದ್ದಾನೆ ಎಂದು ಹೇಳಿದರು.
ನಂತರ ಸ್ಥಳಕ್ಕೆ  ಆಗಮಿಸಿದ  ಆಹಾರ ಸುರಕ್ಷತೆಯ ಇಲಾಖೆಯ ಅಧಿಕಾರಿಗಳು   ಈ ಬಗ್ಗೆ ಪ್ರಕರಣ ದಾಖಲಿಸಿ ಸಂಶಯಾಸ್ಪದವಾಗಿ ಕಂಡು ಬಂದ  ಆಹಾರ ಮಾದರಿಗಳನ್ನು ಪಡೆದು ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಹೆಚ್ಚಿನ ತನಿಖೆಗಾಗಿ ಕಳುಹಿಸಿಕೊಟ್ಟರು ಅಲ್ಲದೆ, ಇದೇ ಸಂದರ್ಭದಲ್ಲಿ  ಚಿಕ್ಕಮಕ್ಕಳು ತಿನ್ನುವ ಆಹಾರ ಪದಾರ್ಥಗಳು ಅವಧಿ ಮೀರಿದನ್ನು  ಕಂಡು ಬಂದಿದ್ದರಿAದ ಅವುಗಳನ್ನು ವಶಕ್ಕೆ ಪಡೆದರು.  ನಂತರ  ಅಧಿಕಾರಿಗಳು  ರಾವಲ್ ಎಜೆನ್ಸಿ ಅವರ ಕಚೇರಿಗೆ ತೆರಳಿ ಅಲ್ಲಿಯೂ ಹೋಗಿ ಆಹಾರ ಪದಾರ್ಥದ ಮಾದರಿಗಳನ್ನು ಪರಿಶೀಲಿಸಿ ವರದಿ ಪಡೆದುಕೊಂಡರು. ಆದರೆ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಈ ಬಗ್ಗೆಯೇ ನಿರಂತರ ಪೋನ್ ಕರೆಗಳು ಬಂದಿದ್ದನ್ನು ನೋಡಿದರೆ ಈ ಕೃತ್ಯದ ಹಿಂದೆ ದೊಡ್ಡ ಜಾಲವೆ ಇರಬಹುದು ಎಂದು ಸಂಶಯ ಬರುತ್ತಿದೆ.
 ಯಾರ ಭಯವಿಲ್ಲದೆ  ನಿರಾಳವಾಗಿ ನಡೆಯುತ್ತಿರುವ  ಇಂತಹ ಕೃತ್ಯಗಳಿಗೆ ಆಹಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ನಗರಸಭೆ, ಕಡಿವಾಣ ಹಾಕಬೇಕಿದೆ ಇಲ್ಲದಿದ್ದರೆ ಸಾಮಾನ್ಯ ಜನರಿಗೆ ಆಗುತ್ತಿರುವ ಶೋಷಣೆಗೆ ಯಾರು ಹೋಣೆ ಎನ್ನುವಂತಾಗಿದೆ. ಅಲ್ಲದೆ, ಇತೀಚಿನ ದಿನಗಳಲ್ಲಿ ಅವಳಿ ನಗರದಲ್ಲಿ ಕಲಬೇರಿಕೆ ಪ್ರಕರಣಗಳು ಎಗ್ಗಿಲ್ಲದೆ ಸಾಗುತ್ತಿರುವದರಿಂದ ಮುಂದಿನ ದಿನಗಳಲ್ಲಿ ಸಂಬAಧಪಟ್ಟವರು ಯವ ಕ್ರಮಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net