30 ಗ್ರಾಂ ಚಿನ್ನಾಭರಣ ಇದ್ದ ಬ್ಯಾಗ್​ ಅನ್ನು ಸಂತ್ರಸ್ಥೆಗೆ ಮರುಕಳಿಸಿದ ನಿರ್ವಾಹಕಿ

26GDG05B
Published on

ಗದಗ: ಮೂವತ್ತು ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣ ಮತ್ತು 2160 ರೂ. ಇದ್ದ ಬ್ಯಾಗ್​ ಅನ್ನು ಸಂತ್ರಸ್ತೆಗೆ ಮರುಕಳಿಸಿ ಬಸ್​ ನಿರ್ವಾಹಕಿ ಓರ್ವವರು ಮಾನವೀಯತೆ ಮರೆದ ಟನೆ ಗದಗ ನಗರದಲ್ಲಿ ಶನಿವಾರ ನಡೆದಿದೆ. ನಿರ್ವಾಹಕಿಯ ಪ್ರಮಾಣಿಕ ಕರ್ತವ್ಯವನ್ನು ಸಾರ್ವಜನಕಿರು ಶ್ಲಾಘಿಸಿದ್ದಾರೆ.

ಗದಗ ಮಾರ್ಗವಾಗಿ ಹಾವೇರಿ ಜಿಲ್ಲೆ ಬ್ಯಾಡಗಿ ಯಿಂದ ಕೊಪ್ಪಳ ನಗರಕ್ಕೆ ಹೊರಟ್ಟಿದ್ದ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಗದಗ ತಾಲೂಕಿನ ಮುಳಗುಂದ ಪಟ್ಟಣದ ಶಕಿಲಾಬಾನು ಎಂಬ ಮಹಿಳೆ ಚಿನ್ನಾಭರಣ, ಬೆಳ್ಳಿ ಆಭರಣ ಇದ್ದ ಬ್ಯಾಗ್​ ಅನ್ನು ಮರೆತು ಗದಗ ಬಸ್​ ನಿಲ್ದಾಣದಲ್ಲಿ ಶನಿವಾರ ಇಳಿದಿದ್ದಾರೆ. ಬಸ್​ ನಲ್ಲಿ ಬ್ಯಾಗ್​ ಗಮನಿಸಿದ ನಿರ್ವಾಹಕಿ ಅನಸೂಯಾ ಅವರು ಗದಗ ಬಸ್​ ನಿಲ್ದಾಣದ ಅಧಿಕಾರಿ ಶಿವಾನಂದ ಸಂಗಣ್ಣವರ ಹಾಗೂ ಇತರೆ ಅಧಿಕಾರಿಗಳಿಗೆ ಬ್ಯಾಗ ತಲುಪಿಸಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಬ್ಯಾಗ್​ ತೆರೆದಿದ್ದಾರೆ. ಬ್ಯಾಗ್​ ನಲ್ಲಿರುವ ಪಾನ್​ ಕಾರ್ಡ ಮೂಲಕ ಬ್ಯಾಗ್​ ಕಳೆದುಕೊಂಡ ಮಹಿಳೆ ವಿಳಾಸ ಪತ್ತೆಹಚ್ಚಿದ್ದಾರೆ. ಬ್ಯಾಗ್​ ಕಳೆದುಕೊಂಡ ಸಂತ್ರಸ್ತೆ ಶಕಿಲಾಬಾನು ಅವರನ್ನು ಬೆಟಗೇರಿ ಬಡಾವಣೆ ಪೊಲೀಸ ಠಾಣೆಗೆ ಕರೆಯಿಸಿ ಬಸ್​ ನಿಲ್ದಾಣ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾಗ್​ ಮರುಕಳಿಸಿದ್ದಾರೆ. ನಿರ್ವಾಹಕಿ ಅನಸೂಯಾ ಹಾಗೂ ಚಾಲಕ ಸೊಲಂಕಿ ಅವರ ಮಾನವೀಯತೆಯ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net