ಕೃತಪುರ ಅರ್ಬನ್ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆ

1
Published on

ಕೃತಪುರ ಸಹಕಾರಿ ಸಂಘ ಪ್ರಗತಿಯಲ್ಲಿ ಮುನ್ನಡೆ : ಮಹೇಶ ಕೋಟಿ

ಗದಗ: ಗದುಗಿನ ಕೃತಪುರ ಅರ್ಬನ್ ಸೌಹಾರ್ದ ಪತ್ತಿನ ಸಹಕಾರಿ ನಿ., ಸಹಕಾರ ವರ್ಷದಲ್ಲಿ 2 ಕೋಟಿ 51 ಲಕ್ಷ 20 ಸಾವಿರ ರೂ.ಗಳ ವ್ಯವಹಾರ ನಡೆಸಿ 7 ಲಕ್ಷ 63 ಸಾವಿರ ರೂ.ಗಳ ನಿವ್ವಳ ಲಾಭ ಹೊಂದಿ ಶೇರುದಾರರಿಗೆ ಶೇ. 8 ರಷ್ಟು ಡಿವ್ಹಿಡೆಂಡ್ ವಿತರಿಸಲಾಗುವದು ಎಂದು ಅಧ್ಯಕ್ಷ ಮಹೇಶ ಕೋಟಿ ಹೇಳಿದರು.
ಅವರು ರವಿವಾರ ನಗರದ ಕಲ್ಯಾಣ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಜರುಗಿದ ಕೃತಪುರ ಅರ್ಬನ್ ಸೌಹಾರ್ದ ಪತ್ತಿನ ಸಹಕಾರಿ ನಿ., ಅಧ್ಯಕ್ಷತೆ ವಹಿಸಿ ಲೆಕ್ಕ ತಪಾಸಣಾ ವರದಿ, ಆಯ-ವ್ಯಯ ಪತ್ರಿಕೆಯನ್ನು ಸಾಧರಪಡಿಸಿ ಒಪ್ಪಿಗೆ ಪಡೆದುಕೊಂಡು ಮಾತನಾಡಿದರು.
ನಮ್ಮ ಸಹಕಾರಿ ಸಂಸ್ಥೆಯಲ್ಲಿ 743 ಸದಸ್ಯರಿದ್ದು ಸಂಸ್ಥೆಯೊAದಿಗೆ ಉತ್ತಮ ವ್ಯವಹಾರ ಬಾಂಧವ್ಯ ಹೊಂದಿದ್ದಾರೆ ಎಂದರಲ್ಲದೆ ಸಾಲ ಪಡೆದುಕೊಂಡವರು ಸರಿಯಾಗಿ ಮರು ಪಾವತಿ ಮಾಡಬೇಕು. ಸಾಲಕ್ಕೆ ಜಾಮೀನು ಆದವರು ಸಾಲ ಮರುಪಾವತಿ ಆಗುವವರೆಗೂ ಜವಾಬ್ದಾರರಾಗಿದ್ದು ಮರುಪಾವತಿಗೆ ಸಹಕಾರ ನೀಡಬೇಕೆಂದು ಹೇಳಿ ಪ್ರಗತಿಯ ಅಂಕಿಅAಶಗಳನ್ನು ಪ್ರಸ್ತುತಪಡಿಸಿದರು.
ಉಪಾಧ್ಯಕ್ಷ ಪ್ರೇಮನಾಥ ಬಣ್ಣದ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಹಕಾರಿ ಸಂಸ್ಥೆಯ ಬೈಲಾ ಪೋಟ್ ನಿಯಮದ ಪ್ರಕಾರ ಶೇರುದಾರರು ಮುದ್ಧತ್ ಠೇವು ಅಥವಾ ಸಾಲ ಪಡೆಯುವದರ ಮೂಲಕ ಪೋಟ್ ನಿಯಮ ಪಾಲಿಸಬೇಕೆಂದರು.
ವೇದಿಕೆಯ ಮೇಲೆ ನಿರ್ದೆಶಕರಾದ ಬಸವರಾಜ ರಾಮನಕೊಪ್ಪ, ಬಸವರಾಜ ಕೊರ್ಲಹಳ್ಳಿ, ಗಂಗಾಧರ ಮೇಲಗಿರಿ, ಶಂಭು ಕಾರಕಟ್ಟಿ, ತೋಂಟೇಶ ಮಾನ್ವಿ, ಶೈಲೇಶ್ ಬಾಗಮಾರ, ಸಿದ್ಧಲಿಂಗಪ್ಪ ವಾಲಿಶೆಟ್ಟರ, ಶ್ರೀಧರ ಪಿಳ್ಳಿ, ಸುಶೀಲಾ ಕೋಟಿ, ಸುರೇಖಾ ಪಿಳ್ಳಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಗಂಗಣ್ಣ ಕೋಟಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಎರಡು ನಿಮಿಷ ಮೌನ ಆಚರಿಸಲಾಯಿತು. ಶರಣಬಸವ ಮಠದ ಸ್ವಾಗತಿಸಿದರು ಶಂಭು ಕಾರಕಟ್ಟಿ ನಿರೂಪಿಸಿದರು ಕೊನೆಗೆ ರಮೇಶ ಪಿಳ್ಳಿ ವಂದಿಸಿದರು.
ಪ್ರಕಾಶ ಬೇಲಿ, ಕುಮಾರ ಶೆಲ್ಲಿಕೇರಿ, ಸಂಗಮೇಶ ಅಕ್ಕಿ, ಮಾಗುಂಡಪ್ಪ ಇಟಗಿ, ಸಂಧ್ಯಾ ಕೋಟಿ, ಶ್ರೀನಿವಾಸ ಹುಬ್ಬಳ್ಳಿ, ಜಯರಾಜ ಕೋಟಿ, ಹುಣಶೀಕಟ್ಟಿ, ಅಮರನಾಥ ಮಾನ್ವಿ, ಸಿಂಧೂರ, ಎಸ್.ಟಿ.ಪಾಟೀಲ ಸಭೆಯಲ್ಲಿ ಪಾಲ್ಗೋಂಡು ಸಲಹೆ ಸೂಚನೆ ನೀಡಿದರು.
= = = =
ಫೋಟೋ ಇದೆ : ಮಹೇಶ ಕೋಟಿ
= = =
ಸುದ್ದಿ ಪ್ರಕಟಣೆಯ ಕೃಪೆಗೆ / ರಮೇಶ ಪಿಳ್ಳಿ
= = =

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net