ಸಹಕಾರ ಕ್ರೇತ್ರ ಪ್ರಾರಂಭವಾದಾಗಿನಿAದ ರೈತರಿಗೆ, ಕಾರ್ಮಿಕರಿಗೆ, ಆರ್ಥಿಕವಾಗಿ ಅಬಲರಾದ ಜನರಿಗೆ ನೆರವಾಗಲು ತಾನೇ ರಚಿಸಿಕೊಂಡು ತಾನೇ ಮುನ್ನೆಡೆಸುವ ಉದ್ದೇಶದಿಂದ ಪ್ರಾರಂಭಗೊAಡಿದೆ. ಇಂದು ಸಹಕಾರ ಕ್ಷೇತ್ರ ಪ್ರವೇಶಿಸದ ಯಾವುದೇ ವಲಯವಿಲ್ಲ ಅಷ್ಟರಮಟ್ಟಿಗೆ ಸಹಕಾರ ಕ್ಷೇತ್ರ ವಿಸ್ತಾರವಾಗಿ ಬೆಳೆದು ನಿಂತಿದೆ. ಸಹಕಾರ ಕ್ಷೇತ್ರವು ಎಲ್ಲಾ ವರ್ಗದ ಎಲ್ಲಾ ಜನರ ಆಶೋತ್ತರಗಳನ್ನು ಪೂರೈಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಾ ಒಂದು ಆರ್ಥಿಕ ಶಕ್ತಿಯಾಗಿ ರೂಪಿತವಾಗಿದೆ. ಅದು ಕಾರ್ಮಿಕ ಕ್ಷೇತ್ರವಾಗಿರಬಹುದು, ವ್ಯವಸಾಯ, ಹಾಲು ಉತ್ಪಾದನೆ ಕ್ಷೇತ್ರವಾಗಿರಬಹುದು ಹೀಗೆ ಕೈಗಾರಿಕೆ, ವಾಣಿಜ್ಯ, ಉತ್ಪಾದನಾ, ಮಾರಾಟ ಕ್ಷೇತ್ರಗಳನ್ನೂಳಗೊಂಡು “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ಗಾದೆ ಮಾತಿನಂತೆ ಸಹಕಾರ ಕ್ಷೇತ್ರ ವ್ಯಾಪಕ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.