

ಪ್ರವಾಸಿ ಮಂದಿರದ ನಿರ್ವಹಣೆ ಮತ್ತು ಗುತ್ತಿಗೆ ನೌಕರರಿಗೂ ಸಂಬಳ ಇಲ್ಲ
ಶಿವಾನಂದ ಹಿರೇಮಠ ಗದಗ
ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ವ್ಯಯಿಸುತ್ತಿರುವ ರಾಜ್ಯ ಸರ್ಕಾರ, ರಾಜ್ಯದ, ಜಿಲ್ಲೆಯ ವಿವಿಧ ಕಾಮಗಾರಿಗಳ ಅಭಿವೃದ್ಧಿಗೆ ಮತ್ತು ಅಭಿವೃದ್ಧಿ ಪಡಿಸಿದ ಬಾಕಿ ಬಿಲ್ ಪಾವತಿಗೆ ಗ್ಯಾರಂಟಿ ನೀಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಬಿಟ್ಟಿ ಭಾಗ್ಯಗಳ ಮೂಲಕ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎನ್ನುವ ಆರೋಪ ಚಾಲ್ತಿಯಲ್ಲಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ವ್ಯಯಿಸುತ್ತಿರುವ ಕಾರಣ ರಾಜ್ಯ ಸರ್ಕಾರದಿಂದ ಗುತ್ತಿಗೆದಾರರ ಸಾವಿರಾರು ಕೋಟಿ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲೂ ಬಿಲ್ ಪಾವತಿಸುವಂತೆ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆ ಪ್ರತಿನಿತ್ಯ ಅಲೆದಾಡುತ್ತಿದ್ದಾರೆ. ಇಲಾಖೆಗೆ ಸೂಕ್ತ ಪ್ರಮಾಣದಲ್ಲಿ ಅನುದಾನ ಮಂಜೂರಾಗದ ಹಿನ್ನೆಲೆ ಇಲಾಖೆ ಅಧಿಕಾರಿಗಳೂ ಗುತ್ತಿಗೆದಾರರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಅತೀವೃಷ್ಟಿ, ಜಿಲ್ಲಾ ಮತ್ತು ರಾಜ್ಯ ಹೆದ್ದಾರಿ, ಮೇಲ್ಸೆತುವೆ ಸೇರಿದಂತೆ ಜಿಲ್ಲೆಯಾದ್ಯಂತ ಲೊಕೋಪಯೋಗಿ ಇಲಾಖೆಯಿಂದ ಮಂಜೂರಾದ ವಿವಿಧ ಕಾಮಗಾರಿಗಳ ಒಟ್ಟು 448 ಬಿಲ್ಗಳು 2022 ಜೂನ್ ನಿಂದಲೂ ಬಾಕಿ ಇವೆ. ಜಿಲ್ಲೆಗೆ ಈ ವರೆಗೆ ಒಟ್ಟು 230 ಕೋಟಿ ರೂ. ಗುತ್ತಿಗೆದಾರರ ಬಾಕಿ ಬಿಲ್ ಬರಬೇಕಿದೆ. ಕಾಮಗಾರಿ ಕೆಲಸಗಳಿಗೆ ಬಡ್ಡಿ ಆಧಾರದಲ್ಲಿ ಸಾಲ ಪಡೆದಿದ್ದ ಗುತ್ತಿಗೆದಾರರು ಬಿಲ್ ಪಾವತಿ ವಿಳಂಬ ಹಿನ್ನೆಲೆ ತಮ್ಮ ಮನೆ, ಗದ್ದೆ ಅಡವಿಟ್ಟು ಸಾಲ ಪಾವತಿಸುವಂತಹ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ.
ಅತೀವೃಷ್ಟಿ ಹಾನಿ, 40 ಕೋಟಿ ಬಾಕಿ:
2021&22ರ ಅವಧಿಯಲ್ಲಿ ಅತೀವೃಷ್ಟಿಯಿಂದ ಹಾಳಾದ ರಸ್ತೆ, ಮೇಲಸ್ಸೇತುವೆ ಸೇರಿದಂತೆ ಇತರೆ ಕಾಮಗಾರಿಗಳ ನಡೆಸಿದ 35 ಕೋಟಿ ಬಿಲ್ ಬಾಕಿ ಇದೆ. ಆ ಅವಧಿಯಲ್ಲಿ ಜಿಲ್ಲೆಯ 235ಕ್ಕೂ ಅಧಿಕ ಕಿಮೀ ರಸ್ತೆ ಹಾಳಾಗಿತ್ತು. ಕೆಲವಡೆ ಮೇಲ್ಸೇತುವೆಗಳಿಗೆ ಭಾಗಶಃ ಹಾನಿ ಉಂಟಾಗಿತ್ತು. ಪ್ರಸಕ್ತ ಸಾಲಿನಲ್ಲಿ ಅತೀವೃಷ್ಟಿಯಿಂದ ಹಾಳಾದ ರಸ್ತೆ ಅಭಿವೃದ್ಧಿಗೆ ಅಂದಾಜು 5 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಬಳಿ ಅನುದಾನ ಇಲ್ಲದ್ದರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಇಲಾಖೆ ಮೂಲಗಳು ತಿಳಿಸಿವೆ.
ಜಿಲ್ಲಾ ರಸ್ತೆ, 150 ಕೋಟಿ ಬಾಕಿ:
ಕಳೆದ ಎರಡೂ ವರ್ಷಗಳಿಂದ ಜಿಲ್ಲೆಯ ಪ್ರಮುಖ ರಸ್ತೆ ಕಾಮಗಾರಿಯ 150 ಕೋಟಿ ಬಿಲ್ ಪಾವತಿ ಬಾಕಿ ಇದೆ. ಗದಗ ಹೊಸ ಬಿಸ್ ನಿಲ್ದಾಣ ಮುಂಭಾಗದ ಗದಗ ಮುಂಡರಗಿ ರಸ್ತೆ, ಮುಳಗುಂದ&ಯಳವತ್ತಿ, ಹೊಳೆಯಾಲೂರು&ಬನಹಟ್ಟಿ&ಅರಹುನಸಿ. ವರವಿ&ಚಬ್ಬಿ&ಬಟ್ಟೂರು, ಅಬ್ಬಿಗೇರಿ&ಯರೇಬೇಲೆರಿ&ಗಜೇಂದ್ರಗಡ ಸೇರಿದಂತೆ ಪ್ರಮುಖ ರಸ್ತೆಗಳ ಬಿಲ್ ಬರಬೇಕಿದೆ.
ರಾಜ್ಯ ಹೆದ್ದಾರಿ:
ಜಿಲ್ಲಾ ರಸ್ತೆಗಳ ಜತೆಗೆ ರಾಜ್ಯ ಹೆದ್ದಾರಿ ಉನ್ನತಿಕರಿಸಿದ ಬಿಲ್ 11 ಕೋಟಿ ರೂ. ಮತ್ತು ಇತರೆ ಕಾಮಗಾರಿಗಳ ಬಿಲ್ 40 ಕೋಟಿ ಬಾಕಿ ಇದೆ. ಜತೆಗೆ ಕಾರವಾರ&ಕೈಗಾ&ಇರಕಲ್(ರಾಹೆ06), ಮುನವಳ್ಳಿ&ಕೊಟಮುಚಗಿ(ರಾಹೆ63) ಪ್ರಮುಖ ರಸ್ತೆಗಳ ಬಿಲ್ ಕಳೆದ ಎರಡು ವರ್ಷದಿಂದ ಬಾಕಿ ಇದೆ.
ಶೇ.5 ರಷ್ಟು ಮಾತ್ರ ಬಿಡುಗಡೆ:
ಪ್ರತಿ ತಿಂಗಳು ಬಾಕಿ ಬಿಲ್ ಕುರಿತು ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆ ಆದರೂ ಕೂಡ ರಾಜ್ಯ ಸರ್ಕಾರದಿಂದ ಮೂರು ತಿಂಗಳಿಗೊಮ್ಮೆ ಶೇ.5 ರಿಂದ ಶೇ. 10 ರಷ್ಟು ಅನುದಾನ ಮಾತ್ರ ಬಿಡುಗಡೆ ಆಗುತ್ತಿದೆ. ಟ್ರಾಫಿಕ್ ಮತ್ತು ಇತರೆ ಕಾರಣಗಳಿಂದ ಬಿದ್ದಿರುವ ತಗ್ಗು ಗುಂಡಿ ಮುಚ್ಚಲು ಅನುದಾನದ ಕೊರತೆ ಉಲ್ಭಣಿಸಿದೆ.
ನಿರ್ವಹಣೆ ಮತ್ತು ಸಂಬಳಕ್ಕೆ ಹಣವಿಲ್ಲ:
ಲೋಕೋಪಯೋಗಿ ಇಲಾಖೆಯಿಂದ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ, ಎಲ್ಲ ತಾಲೂಕೀನ ನಿರೀಕ್ಷಣಾ ಮಂದಿರ ನಿರ್ವಹಣೆಗೆ ಅನುದಾನ ಬಿಡುಗಡೆ ಆಗುತ್ತಿಲ್ಲ. ಪ್ರತಿ ತಿಂಗಳು ಗದಗ ಜಿಲ್ಲೆ ಸೇರಿದಂತೆ ಎಲ್ಲ ನಿರೀಕ್ಷಣ ಮಂದಿರಗಳ ಸ್ವಚ್ಚತೆ, ನೀರು, ವಿದ್ಯುತ್ ಬಿಲ್ ಸೇರಿದಂತೆ ನಿರ್ವಹಣೆಗೆ 5 ಲಕ್ಷ ರೂ. ಅಗತ್ಯವಿದೆ. ಮತ್ತು 40 ಜನ ಗುತ್ತಿಗೆ ನೌಕರ ಸಂಬಳ ಪಾವತಿಗೆ ಪ್ರತಿ ತಿಂಗಳು 8 ಲಕ್ಷ ಅಗತ್ಯವಿದೆ. ಕಳೆದ ಏಪ್ರಿಲ್ ತಿಂಗಳಿನಿದಲೂ ನಿವರ್ಹಣೆ ಮತ್ತು ಸಂಬಳ ನೀಡಲು ಅನುದಾನ ಬಿಡುಗಡೆ ಆಗಿಲ್ಲ.
ಬಿಲ್ ಬಾಕಿ:
ಅರಬಾವಿ& ಚಳ್ಳಕೇರಿ, ಅಳಗವಾಡಿ&ತಿರ್ಲಾಪುರ&ಬ್ಯಾಹಟ್ಟಿ, ಗಜೇಂದ್ರಗಡ ಮತ್ತು ಸೊರಟೂರು ರಸ್ತೆ ಮೇಲ್ಸೇತುವೆ, ವೆಂಕಟಾಪೂರು&ಮದಗಾನೂರು, ಗದಗ&ಬಳಗಾನೂರು&ಲಿಂಗದಾಳ, ನಾಗಸಮುದ್ರ&ನರಸಾಪುರ, ಹೊಸಳ್ಳಿ&ಕುರ್ತಕೋಟಿ&ನೀಲಗುಂದ ಸೇರಿದಂತೆ ವಿವಿಧ ರಸ್ತೆಗಳ ಕಾಮಗಾರಿ ರ್ಪೂಣಗೊಂಡಿವೆ. ಬಿಲ್ ಮಾತ್ರ ಇದೆ.
ಕೋಟ್:
ಇಲಾಖೆಗೆ ಮತ್ತು ಸರ್ಕಾರಕ್ಕೆ ಹಲವು ಬಾರಿ ಬಾಕಿ ಮೊತ್ತ ಬಿಡುಗಡೆಗೆ ಮನವಿ ಮಾಡಲಾಗಿದೆ. ಕಳೆದೆರೆಡೂ ವರ್ಷದಿಂದಲೂ ಗುತ್ತಿಗೆದಾರರು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಕಾಮಗಾರಿಗಳ ಕೆಲಸಕ್ಕೆ ಕೆಲವರು ಮನೆ ಅಡವಿಟ್ಟಿದ್ದಾರೆ. ಕೆಲವರು ಹೊಲ ಗದ್ದೆ ಅಡವಿಟ್ಟು ಸಾಲ ತಮದು ಕಾಮಗಾರಿ ನಡೆಸಿದ್ದಾರೆ. ಬಿಲ್ ಪಾವತಿ ಆಗದ ಹಿನ್ನೆಲೆ ಎರಡೂ ವರ್ಷದಿಂದ ಬಡ್ಡಿ ಪಾವತಿ ಮಾಡುವಂತಾಗಿದೆ. ಇನ್ನಷ್ಟು ಹೊರೆ ಆಗಿದೆ.
& ಸಿದ್ದು ಪಾಟೀಲ, ಗುತ್ತಿಗೆದಾರ ಸಂದ ಜಿಲ್ಲಾ ಅಧ್ಯಕ್ಷ