

ವಿಜಯವಾಣಿ ಸುದ್ದಿಜಾಲ ಗದಗ
ನಗರದ ವಿವಿಧ ವಾರ್ಡ್ಗಳಲ್ಲಿ ಆನಂದಸ್ವಾಮಿ ಗಡ್ಡದೇವರ ಮಠ ಪರ ಸಚಿವ ಎಚ್.ಕೆ. ಪಾಟೀಲ ಪ್ರಚಾರ ನಡೆಸಿದರು.
ವಿವಿಧ ವಾರ್ಡ್ಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀವೆಲ್ಲರೂ ನಮ್ಮ ಪದ ಹಿತೈಷಿಗಳು. ನಿಮ್ಮ ಒಂದು ಮತ ಕಡಿಮೆಯಾದರೂ ನಮಗೆ ನೋವಾಗುತ್ತದೆ. ನಿಮ್ಮ ಕುಟುಂಬದ ತೊಂದರೆ, ವಾಡಿರ್ನ ತೊಂದರೆ, ಆರೋಗ್ಯ ತೊಂದರೆಗಳು ನಮ್ಮ ತೊಂದರೆ ಇದ್ದಂತೆ. ಆಶ್ರಯ ಕಾಲೋನಿ, ನೇಕಾರ ಕಾಲೋನಿ ನಿರ್ಮಾಣವಾಗಲು ಕೆ.ಎಚ್. ಪಾಟೀಲ ಹಾಗೂ ಡಿ.ಆರ್. ಪಾಟೀಲ ಅವರು ಕಾರಣರು. ಚುನಾವಣೆಗೆ ಬಂದಾಗ ನಮ್ಮನ್ನು ಹೊರಗಿಟ್ಟವರಿಗೂ ಈ ಬಾರಿ ತಿಳಿವಳಿಕೆ ಹೇಳಿ, ಮನೆ&ಮನೆಗೆ ಗ್ಯಾರಂಟಿ ಕಾರ್ಡ್ಗಳನ್ನು ತಲುಪಿಸಿ ಈ ಬಾರಿ ಕಾಂಗ್ರೆಸ್ ಅಭ್ಯಥಿರ್ಗೆ ರ್ಪೂಣ ಪ್ರಮಾಣದ ಆಶೀರ್ವಾದ ಮಾಡಬೇಕು. ಕನಿಷ್ಠ 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಲ್ಲಿ ಶ್ರಮ ವಹಿಸಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 1 ಲ ನೀಡುವುದಾಗಿ ಘೋಷಿಸಲಾಗಿದೆ. ಈ ಕುರಿತು ಗ್ಯಾರಂಟಿ ಕಾರ್ಡ್ ನೀಡುತ್ತಿದ್ದರೆ, ಗ್ಯಾರಂಟಿ ವಿರುದ್ಧ ಬಿಜೆಪಿ ಮುಖಂಡರು ಬಡವರಿಗೆ ಹಣ ಮುಟ್ಟಬಾರದು ಎನ್ನುವ ಉದ್ದೇಶದಿಂದ ಗ್ಯಾರಂಟಿ ವಿರುದ್ಧ ಕೋರ್ಟ್ ಮೆಟ್ಡಿಲೇರುತ್ತಿದ್ದಾರೆ. ಆದ್ದರಿಂದ ಬಡವರಿಗೆ ದ್ರೋಹ ಮಾಡುತ್ತಿರುವ ಬಿಜೆಪಿಗೆ ಮತ ನೀಡದೇ ಕಾಂಗ್ರೆಸ್ ಪದ ಅಭ್ಯಥಿರ್ಗೆ ಅಧಿಕ ಮತಗಳನ್ನು ನೀಡುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವಂತೆ ಆಶೀರ್ವದಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಈ ಬಾರಿ ಅಧಿಕ ಮತಗಳನ್ನು ನೀಡುವ ಮೂಲಕ ಕಾಂಗ್ರೆಸ್ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲುವಿಗೆ ಕಾರಣರಾಗಬೇಕು ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಅಶೋಕ ಬಣ್ಣದ ಮಾತನಾಡಿ, ನರಸಾಪೂರ ಆಶ್ರಯ ಕಾಲೋನಿ ನಿರ್ಮಾಣವಾಗಲು ಕೆ.ಎಚ್. ಪಾಟೀಲ ಹಾಗೂ ಡಿ.ಆರ್. ಪಾಟೀಲ ಮೂಲ ಕಾರಣರಾಗಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ. ಆಶ್ರಯ ಕಾಲೋನಿಯಲ್ಲಿ ವಿದ್ಯುತ್, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಪಕ್ಕೆ ಅಧಿಕ ಮತಗಳನ್ನು ನೀಡುವ ಮೂಲಕ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಪ್ರಭು ಬುರಬುರೆ, ನಾಗಲಿಂಗ ಐಲಿ, ಸುರೇಶ ಕಟ್ಟಿಮನಿ, ವೀರಪ್ಪ ನಾಯ್ಕರ, ಬಾಬು ನರಸಾಪೂರ, ಸಂಗಮೇಶ ಹಾದಿಮನಿ, ಬಾಲರಾಜ ಅರಬರ ಸೇರಿ ಹಲವರು ಇದ್ದರು.