ಗದಗ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಜನ್ಮ ದಿನಾಚರಣೆ

20GDG04
Published on

ಗದಗ: ನಗರದ ದಿ. ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಮಂಗಳವಾರ ದಿ. ಪ್ರಧಾನಿ ಇಂದಿರಾ ಗಾಂಧಿ ಅವರ 107ನೇ ಜನ್ಮದಿನವನ್ನು ಆಚರಿಸಲಾಯಿತು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ನೀಲಮ್ಮ ಬೋಳನವರ ಮಾತನಾಡಿ, ಇಂದಿರಾ ಗಾಂಧಿ ಅವರು ಬಡವರಿಗಾಗಿ, ಮಹಿಳೆಯರಿಗಾಗಿ, ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದರು. ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಡವರ, ಶ್ರಮಿಕರ ಕಲ್ಯಾಣಕ್ಕಾಗಿ ಶ್ರಮಿಸಿದರು. ಇಂದಿರಾ ಗಾಂಧಿ ಅವರು ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯೆ ಸುಜಾತಾ ದೊಡ್ಡಮನಿ, ಮುಖಂಡರಾದ ಮುಸ್ಕಾನ ಸಯ್ಯದ್, ಶಕುಂತಲಾ ಅಕ್ಕಿ, ಲಲಿತ ಗೊಳಗೊಳಕಿ, ವಹೀದ ಖಲೀಫ್, ಜಾನಕಿ ಮಲ್ಲಾಪೂರ, ಸಾವಿತ್ರಿ ಹೂಗಾರ, ಪರವೀನಬಾನು ಮುಲ್ಲಾ, ರೇಖಾ ಬದಿ, ಸಹೀರಾಬಾನು ಬಳ್ಳಾರಿ, ದ್ರಾಕ್ಷಾಯಿಣಿ ಹಾಸಿಲಕರ, ಗೀತಾ ಹಬೀಬ, ಶೋಭಾ ಕೆರಕಲಮಟ್ಟಿ, ರಾಜೇಶ್ವರಿ ಮೇಗೂರ, ಲಕ್ಷ್ಮೀ ಜಾಲಿಕಟ್ಟಿ, ಚೇತನಾ ಸೀತಾರಹಳ್ಳಿ ಸೇರಿ ಹಲವರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net