ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.

1761903059974
Published on
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿ ಬಿ ಎಸ್ ಇ  ಶಾಲೆಯ 7 ನೇ ತರಗತಿಯ ಕು. ಅಮೃತಾ ತಡಸದ ಈ ವಿದ್ಯಾರ್ಥಿನಿಯು ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ನಗರದ ಪ್ರಧಾನ ಅಂಚೆ ಕಚೇರಿ ವತಿಯಿಂದ ಸಮಾಜದ ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ಎಚ್ಚರಿಕೆಯ ಕ್ರಮಗಳು, ಜವಾಬ್ದಾರಿ ಹಾಗೂ ಜಾಗೃತೆಯ ಎಂಬ ವಿಷಯದ ಕುರಿತು ಪ್ರೌಢ ಶಾಲಾ ಮಕ್ಕಳಿಗೆ ಹಮ್ಮಿಕೊಂಡ ಆಶುಭಾಷಣ ಸ್ಪರ್ಧೆಯಲ್ಲಿ ವಿ.ಡಿ.ಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿ ಬಿ ಎಸ್ ಇ ಶಾಲೆಯ 7 ನೇ ತರಗತಿಯ ಕು. ಅಮೃತಾ ತಡಸದ ದ್ವಿತೀಯ ಸ್ಥಾನ ಪಡೆದಿದ್ದಾಳೆ ಹಾಗೂ 8 ನೇ ತರಗತಿಯ ವಿದ್ಯಾರ್ಥಿನಿ ಕು. ಸೃಷ್ಟಿ ಧರ್ಮಾಯತ ಪ್ರಸಂಶನಾ ಪ್ರಮಾಣ ಪತ್ರ ಪಡೆದಿದ್ದಾಳೆ.
ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಶ್ರೀಮತಿ ಮಂಜುಳಾ ಹಾಗೂ ಅಸಿಸ್ಟಂಟ್ ಪೋಸ್ಟ್ ಮಾಸ್ಟರ್ ಶ್ರೀ ಡಿ. ಪಿ. ಇಟಗಿ ರವರು ಕಾರ್ಯಕ್ರಮದ ಅತಿಥಿಗಳಾಗಿ, ನಿರ್ಣಾಯಕರಾಗಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸ್ಪರ್ಧೆಯ ನಂತರ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಯಿತು. ಅಂಚೆ ಕಚೇರಿಯ ಸಿಬ್ಬಂದಿಯವರಾದ ಶ್ರೀ ವೆಂಕಟೇಶ ಆಕಳವಾಡಿ ರವರು ನಿರೂಪಿಸಿ, ವಂದಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕಿಯರಾದ ಕು. ಗಾಯತ್ರಿ ಅಸುಂಡಿ ಅವರಿಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸರ್ವ ಸದಸ್ಯರು, ಆಡಳಿತ ಅಧಿಕಾರಿಗಳು, ಶೈಕ್ಷಣಿಕ  ಮಾರ್ಗದರ್ಶಕರು, ಪ್ರಾಚಾರ್ಯರು ಹಾಗೂ ಸಮಸ್ತ ಶಿಕ್ಷಕ/ಶಿಕ್ಷಕಿಯರು ಹಾಗು ಸಿಬ್ಬಂದಿ ವರ್ಗದವರು ಶಾಲಾ ವತಿಯಿಂದ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net