ಲಕ್ಕುಂಡಿ ಮಾದರಿಯಲ್ಲೆ ರಾಜ್ಯದ ಎಲ್ಲ ಪ್ರಾಚ್ಯವಸ್ತು ಸಂಗ್ರಹಾಲ ಅಭಿವೃದ್ಧಿಗೊಳಿಸಲಾಗುವುದು ಎಂದ ಸಿಎಂ ಸಿದ್ದರಾಮಯ್ಯ, ಬಯಲು ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಲಕ್ಕುಂಡಿಯ ಶಿಲಾಶಾಸನಗಳು ಮತ್ತು ಅವಶೇಷಗಳ ಮೂಲಕ ಗತಕಾಲದ ವೈಭವವನ್ನು ಕಾಣಬಹುದು. ಈ ಐತಿಹಾಸಿಕ ತಾಣದ ಸಂರಕ್ಷಣೆಗಾಗಿ ಪ್ರಾಚ್ಯವಸ್ತು ಸಂಗ್ರಹಕ್ಕೆ ವಿಶೇಷ ಅನುದಾನವನ್ನು ನೀಡಲಾಗುವುದು. ಹಿಂದಿನ ಕಾಲದಲ್ಲಿ ರಾಜರ ಆಡಳಿತವಿತ್ತು. ಆಗ ರಾಜರನ್ನು ಪ್ರತ್ಯಕ್ಷ ದೇವರೆಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಪ್ರಜೆಗಳ ಕಾಲ. ಜನರೇ ದೇವರು. ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವ ವ್ಯವಸ್ಥೆಯೇ ಪ್ರಜಾಪ್ರಭುತ್ವ. ಶಿಲಾಯುಗದ ಕಾಲವಲ್ಲದಿದ್ದರೂ, ಇಂದಿನ ಅವಶೇಷಗಳ ಮೂಲಕ ಹಿಂದಿನ ಆಡಳಿತ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬಹುದು ಎಂದರು.