

ಗದಗ:
ಹಿಂದುಳಿದ ವರ್ಗದ ಆಯೋಗ ಪ್ರಕಟಿಸಿದ್ದ ಜಾತಿ ಪಟ್ಟಿಗಳಲ್ಲಿ ವಿವಿಧ ಒಳಪಂಗಡಗಳ ಜತೆ ಸೇರಿಕೊಂಡಿದ್ದ ಕ್ರಿಶ್ಚಿಯನ್ ಪದಗಳನ್ನು ತೆಗೆಯಲು ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಾಮಾಜಿಕ, ಶೈಕ್ಷಣಿಕ ಸಮೀೆಯಲ್ಲಿ ಇದ್ದ ಗೊಂದಲಗಳನ್ನು ಸಚಿವ ಸಂಪುಟ ಸಭೆಯಲ್ಲಿ ನಿವಾರಿಸಲಾಗಿದೆ. ಜನರಲ್ಲಿ ಆತಂಕ ಬೇಡ. ತಮ್ಮ ಧರ್ಮ, ಜಾತಿ ಗಳನ್ನು ಸರಿಯಾಗಿ ನಮೂಡಿಸಬೇಕು. ಸಮಾಜದ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಈ ಸಮೀೆ ಅತ್ಯಂತ ಪ್ರಮುಖವಾಗಿದೆ ಎಂದರು.
ಬಾಕ್ಸ್:
ಕುರುಬ ಎಂದಷ್ಟೇ ಬರೆಸಬೇಕು: ಸಿಎಂ
ಸಾಮಾಜಿಕ ಶೈಕ್ಷಣಿಕ ಜಾತಿಗಣತಿ ಸಂದರ್ಭದಲ್ಲಿ ಸಮಾಜದವರು 'ಕುರುಬ' ಎಂದಷ್ಟೇ ಬರೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಕನಕ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಕನಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕುರುಬರಲ್ಲಿ ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ, ಹಾಲುಮತ ಎಂದು ಇನ್ನೂ ಹಲವು ಒಳಪಂಗಡಗಳಿವೆ. ಆದರೆ, ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿಯಲ್ಲಿ ಕುರುಬ ಎಂದಷ್ಟೇ ಬರೆಸಬೇಕು. ಇನ್ನಾವುದನ್ನು ಬರೇಸಬೇಡಿ ಎಂದು ಸಿಎಂ ಹೇಳಿದರು.