ಚಲವಾದಿ ಹಾಗೂ ಚನ್ನದಾಸರ ಸಮುದಾಯಗಳ ಸಭೆ

05GDG03
Published on

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಯ ಒಳಮೀಸಲಾತಿ ಗಣತಿ ಕಾರ್ಯಕ್ಕೆ ಶ್ಲಾಘನೆ :

ಗದಗ ; ಕರ್ನಾಟಕ ಘನ ಸರ್ಕಾರವು ರಾಜ್ಯದಲ್ಲಿ ಒಳ ಮೀಸಲಾತಿಯಲ್ಲಿರುವ ಜಟಿಲ ಸಮಸ್ಯೆಗಳನ್ನು ಸೂಕ್ಷ÷್ಮ ವಾಗಿ ಪರಿಶೀಲಿಸಿ ನಿಖರ ಮತ್ತು ವೈಜ್ಞಾನಿಕವಾಗಿ ಸಮೀಕ್ಷೆಯನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ಪ್ರಮುಖ ರಾಜಕೀಯ ದಲಿತ ಮುಖಂಡರುಗಳಾದ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಸಚಿವ ಡಾ ಜಿ ಪರಮೇಶ್ವರ್ ಸಚಿವ ಮುನಿಯಪ್ಪ ರವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಗಣತಿ ಕಾರ್ಯವನ್ನು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಮತ್ತು ಸಾಮಾಜಿಕ ನ್ಯಾಯವನ್ನು ನೀಡುತ್ತಿರುವುದು ಸರ್ಕಾರದ ದಿಟ್ಟ ನಿರ್ಧಾರವಾಗಿದೆ ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಗದಗ್ ಜಿಲ್ಲಾ ಅಧ್ಯಕ್ಷರಾದ ಎಲ್ ನಾರಾಯಣಸ್ವಾಮಿ ಅವರು ಹೇಳಿದರು

ಗದಗ ಜಿಲ್ಲೆಯಲ್ಲಿ ಚಲವಾದಿ ಸಮುದಾಯ ಮತ್ತು ಚೆನ್ನ ದಾಸರ ಸಮುದಾಯದವರು ದಿನಾಂಕ 4 -5 -2025 ರಂದು ಗದುಗಿನ ಪ್ರವಾಸಿ ಮಂದರದಲ್ಲಿ ಸಭೆ ಸೇರಿ ಸಮೀಕ್ಷಾ ಕಾರ್ಯಕ್ಕೆ ಹರ್ಷ ವ್ಯಕ್ತಪಡಿ ಸರ್ಕಾರದ ನಿರ್ಧಾರ ಕ್ಕೆ ಶ್ಲಾಘಿಸಿದರು.

ಅವರು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಹಾಗೂ ಗದಗ್ ಜಿಲ್ಲಾ ಚೆನ್ನ ದಾಸರ ಸಮಾಜದ ಸಭೆಯಲ್ಲಿ ಮಾತನಾಡಿ ಈಡಿ ಭಾರತ ಕರ್ನಾಟಕ ಸರ್ಕಾರದ ಮಾದರಿಯಂತೆ ಮಾದರಿಯಂತೆ ಕಾರ್ಯ ನಿರ್ವಹಿಸುತ್ತಿರುವುದು ಹಾಗೂ ಪರಿಶಿಷ್ಟ ಜಾತಿ ಜನಾಂಗಕ್ಕೆ ವಿದ್ಯೆ ಆರ್ಥಿಕ ಸುಧಾರಣೆಗೆ ರಾಜಕೀಯ ಅಭಿವೃದ್ಧಿಯೊಂದಿಗೆ ಈ ಸಮೀಕ್ಷೆ ತುಂಬಾ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.

ಕರ್ನಾಟಕದ ಜಾತಿ ಜನಗಣತಿ 1991 ಪ್ರಕಾರ ಒಟ್ಟು 4 ಕೋಟಿ 49 ಲಕ್ಷ 7721 ರಷ್ಟು ಇದ್ದು ಪರಿಶಿಷ್ಟ ಜಾತಿಯವರು 73 ಲಕ್ಷದ 69, 2 79 ರಷ್ಟು ಇದ್ದರು ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಛಲವಾದಿ ಸಮುದಾಯದವರು 47 ಲಕ್ಷ 91ಸಾವಿರ 31 ಇದ್ದು .ಇದೇ ರೀತಿ ಮಾದಿಗ ಸಮುದಾಯ 25 ಲಕ್ಷ 79,247 ಅಧಿಕೃತವಾಗಿ ಕರ್ನಾಟಕ ಸರ್ಕಾರದ ಸಮೀಕ್ಷೆಯಲ್ಲಿ ಕಂಡುಬAದಿರುತ್ತದೆ. ಇದರಂತೆಯೇ ಕರ್ನಾಟಕ ಲೋಕಸೇವಾ ಆಯೋಗವು 1951 ರ ಮೇ 25 ಸ್ಥಾಪನೆಯಾ ದಾಗಿಂದ ಒಟ್ಟು 38 ವರ್ಷಗಳ ಕಾಲ ಇದರಲ್ಲಿ ಛಲವಾದಿ ಸಮುದಾಯದವರು 8 ವರ್ಷಗಳ ಕಾಲ ಮಾದಿಗ ಸಮುದಾಯದವರು 30 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುತ್ತಾರೆ ಎಂದು ಕಂಡುಬAದಿರುತ್ತದೆ .

ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ರಾಜ್ಯಾಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿಗಳಾದ ಸಿದ್ದಯ್ಯನವರು ಸರ್ಕಾರದ ಆದೇಶದಂತೆ ಪರಿಶಿಷ್ಟ ಜಾತಿಯ ಸಮೀಕ್ಷೆಯನ್ನು ಮಾಡಲು ಕರಪತ್ರಗಳನ್ನು ಎಲ್ಲ ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿಕೊಟ್ಟು ಮಾಹಿತಿಯನ್ನು ಒದಗಿಸಿರುತ್ತಾರೆ.ಅವರ ಆದೇಶದಂತೆ ಗದಗ ಜಿಲ್ಲೆಯಲ್ಲಿ ಮನೆ ಮನೆಗೆ ಭೇಟಿ ಮಾಡಲು ಬರುವ ಗಣತಿದಾರ ಸಮೀಕ್ಷಣಾಧಿಕಾರಿಗಳಿಗೆ ಸರಿಯಾದ ಮಾಹಿತಿಯನ್ನು ನೀಡಲು ಮತ್ತು ಸಹಕಾರ ನೀಡಿ ಜಾತಿ ಕಾಲಂ ನಲ್ಲಿ ಛಲವಾದಿ ಎಂದು ನಿಖರವಾಗಿ ಬರೆಸಲು ಸೂಚಿಸುತ್ತಾರೆ ಅವರಿಗೆ ಬೆಂಬಲ ನೀಡಲು ಪ್ರತಿ ಜಿಲ್ಲೆಯ ಒಂದು ಜಿಲ್ಲಾ ಕಮಿಟಿಯನ್ನು ರಚಿಸಿದ್ದು ಸದರಿ ಕಮಿಟಿಯವರು ಗಣತಿ ತಂಡಕ್ಕೆ ಸರಿಯಾಗಿ ಸಹಕಾರ ನೀಡಲು ಸೂಚಿಸುತ್ತಾರೆ.ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿದ್ದಪ್ಪ ಲಿಂಗದಾಳ ಪ್ರಕಾಶ್ ಕೆರೂರ್ ಸತೀಶ್ ಹೂಲಿ .ಕೆ ಹೆಚ್ ಬೇಲೂರು ರಮೇಶ್ ಬಾಳಮ್ಮನವರ ಬ¸ವರಾಜ ಈರಣ್ಣವರ ಸಂತೋಷ ಕಲ್ಯಾಣಿ ಹಾಗೂ ಮುಂತಾದ ಚನ್ನದಾಸ ಸಮುದಾಯದ ಗದಗ್ ಜಿಲ್ಲಾ ಶೇಷಗಿರಿ ರಾಮಣ್ಣ ಖ್ಯಾಡದ್ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ದಾಸರ ಮತ್ತು ಮೋಹನ್ ರತ್ನಾಕರ್ ಮಂಜು ಹುಬ್ಬಳ್ಳಿ ಭಾಗವಹಿಸಿದ್ದರು ಹನುಮಂತ ಸ್ವಾಗತಿಸಿದರು ಬಸವರಾಜ ಈಣ್ಣನವರ್ ಕೊನೆಯಲ್ಲಿ ವಂದಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net