ಗದಗ ನಗರದ ಪ್ರಮುಖ ಸುದ್ದಿಗಳು

Vijayavani-logo
Published on

ಅರ್ಜಿ ಆಹ್ವಾನ:-

ಗದಗ: ಪ್ರಸ್ತುತ ಸಾಲಿನ ತೋಟಗಾರಿಕೆ ಇಲಾಖೆಯಿಂದ ಕೇಂದ್ರ ಪುರಸ್ಕøತ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಬಾಳೆ, ಪೇರಲ, ಗೋಡಂಬಿ, ಅಂಜೂರ, ನೇರಳೆ, ಹುಣಸೆ ಹಣ್ಣುಗಳ ಪ್ರದೇಶ ವಿಸ್ತರಣೆ, ಹೈಬ್ರಡ್ ತರಕಾರಿ, ಮಾವು ಮತ್ತು ನಿಂಬೆ ಪುನಶ್ಚೇತನ ಕಾರ್ಯಕ್ರಮ, ಸಮುದಾಯ ಕೆರೆ ನಿರ್ಮಾಣ, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ನೆರಳು ಪರದೆ ನಿರ್ಮಾಣ ಘಟಕ, ಪ್ಯಾಕ ಹೌಸ್ ಘಟಕ, ಈರುಳ್ಳಿ ಶೇಖರಣ ಘಟಕ, ಹಣ್ಣು, ತರಕಾರಿ, ತಳ್ಳುವ ಗಾಡಿಗಳಿಗೆ ಸಹಾಯಧನಕ್ಕಾಗಿ  ಸೌಲಭ್ಯವಿದೆ. ಆಸಕ್ತ ರೈತರು ಸಂಬಂಧಿಸಿದ ತಾಲ್ಲೂಕು ತೋಟಗಾರಿಕೆ ಕಛೇರಿಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08372-295116 ಗೆ ಸಂಪರ್ಕಿಸಬಹುದಾಗಿದೆ.

ಹನಿ ನೀರಾವರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ:-

ಗದಗ: ಜಿಲ್ಲೆಯ ನೀರಾವರಿ ಸೌಲಭ್ಯಯುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ತೋಟಗಾರಿಕೆ ಬೆಳೆ ಬೆಳೆಯುವ ಹಾಗೂ ಆಸಕ್ತಿ ಇರುವ ರೈತರ ಜಮೀನಿಗೆ ಹನಿ ನೀರಾವರಿ ಅಳವಡಿಕೆಗೆ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಮೊದಲ ಎರಡು ಹೆಕ್ಟೇರ್ ಪ್ರದೇಶದವರಿಗೆ 90 % ರಷ್ಟು, ಎರಡು ಹೆಕ್ಟೇರ ಮೇಲ್ಪಟ್ಟು ಮೂರು ಹೆಕ್ಟೇರ್‍ವರೆಗೆ 45% ರಷ್ಟು,  ಸಾಮಾನ್ಯ ರೈತರಿಗೆ ಮೊದಲ ಎರಡು ಹೆಕ್ಟೇರ್ ಪ್ರದೇಶದವರಿಗೆ 75% ರಷ್ಟು, ಎರಡು ಹೆಕ್ಟೇರ ಮೇಲ್ಪಟ್ಟು ಮೂರು ಹೆಕ್ಟೇರ್‍ವರೆಗೆ 45% ರಷ್ಟು ಸಹಾಯಧನಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.

ಸೆಪ್ಟೆಂಬರ್ 23 ರಂದು ನಗರದಲ್ಲಿ ನೀರು ಪೂರೈಕೆ:

ಗದಗ: ಅವಳಿ ನಗರದ  ವಿವಿಧ ಭಾಗಗಳಿಗೆ ಸೆಪ್ಟೆಂಬರ್ 23 ರಂದು  ವಾರ್ಡ್ ನಂ 05ರಲ್ಲಿ. ನರಸಾಪೂರ ಆಶ್ರಯ ಕಾಲೋನಿಯ ಕೆಲವು ಭಾಗಗಳು, ವಾರ್ಡ ನಂ 7ರಲ್ಲಿ ಪುಲಿಕೇಶಿ ರಸ್ತೆ, ವಾರ್ಡ ನಂ 16, 21ರಲ್ಲಿ ಅಂಬೇಡ್ಕರ ನಗರ, ಅಬ್ಬಿಗೇರಿ ಲೈನ್, ಗುಡದೂರ ಸ್ವಾಮಿಯಮಠ ಎಡಭಾಗ, ಬಲಭಾಗ, ಕುಂಭೇಶ್ವರ ಭಾಗ-1,2,3,4 ಕುಷ್ಟರೋಗ ಕಾಲೋನಿಯ ಭಾಗ-1,2 ಸುಣ್ಣದ ಭಟ್ಟಿ ಭಾಗ-1,2 ಉಳಿದ ಕೆಲವು ಭಾಗಗಳು, ವಾರ್ಡ ನಂ 29 ಭಾಂಡಗೆ ಲೈನ್, ಗುಂಪಿನಮನೆ ಲೈನ್, ವಾರ್ಡ ನಂ 22ರಲ್ಲಿ ತಾಜನಗರ ಕೆಲವು ಭಾಗಗಳು, ವಾರ್ಡ ನಂ 29ರಲ್ಲಿ ರಾಜೀವಗಾಂಧಿನಗರ 9ನೇ ಕ್ರಾಸ್‍ನಿಂದ 5ನೇ ಕ್ರಾಸ್‍ವರೆಗೆ ನೀರು ಪೂರೈಕೆ ಮಾಡಲಾಗುವುದು. 

ನೇರ ಸಂದರ್ಶನ:-

ಗದಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗದಗ ವತಿಯಿಂದ ಸೆಪ್ಟೆಂಬರ್ 26 ರಂದು  ಬೆಳಿಗ್ಗೆ 10  ರಿಂದ  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರೂಮ್ ನಂಬರ್-215, ಜಿಲ್ಲಾಆಡಳಿತ ಭವನ ಗದಗ. ಇಲ್ಲಿ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ ಸಂರ್ದಶನದಲ್ಲಿ  ಕ್ರೆಡಿಟ್ ಎಕ್ಸೆಸ್ ಗ್ರಾಮೀಣ ಕೋಟಾ ಲಿಮಿಟೆಡ್, ಕಿರಣ ಇನ್‍ಫೋಟೆಕ್ ಟ್ಯಾಲಿ ಎಕ್ಸಲೇಟರ್ ಕಂಪನಿಗಳು ಭಾಗವಹಿಸಲಿವೆ. ನೇರ ಸಂರ್ದಶನದಲ್ಲಿ ಪಾಲ್ಗೊಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮೆ(ಬಯೋಡಾಟಾ)ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್‍ನೊಂದಿಗೆ ಭಾಗವಹಿಸಬಹುದು. ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08372-220609, 6363330688 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು  ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದನಗಳ ಮಾಲೀಕರ ಗಮನಕ್ಕೆ:

ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ದನಗಳ ಮಾಲೀಕರಿಗೆ ತಿಳಿಯಪಡಿಸುವದೇನೆಂದರೆ ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬೀದಿ ದನಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವುದಾಗಿ ಸಾಕಷ್ಟು ಸಾರ್ವಜನಿಕ ದೂರುಗಳು ಸ್ವೀಕೃತವಾಗಿವೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿ ಠರಾವು ನಂ: 143 ದಿನಾಂಕ: 20-12-2022 ರಲ್ಲಿ ಸದರ ಬೀದಿ ದನಗಳನ್ನು ಹಿಡಿದು ಶಿವಯೋಗಿ ಮಂದಿರದ,  ಪಾಂಜರಪೋಳ ಪಶು ಪಾಲನಾ ಕೇಂದ್ರ ಇಲ್ಲಿ ಸ್ಥಳಾಂತರಿಸಲು ತೀರ್ಮಾನಿಸಿ ಠರಾವು ಪಾಸು ಮಾಡಲಾಗಿದ್ದು ಅದರಂತೆ ಗದಗ-ಬೆಟಗೇರಿ ನಗರಸಭೆ ವತಿಯಿಂದ ಟೆಂಡರ್ ಕರೆದು ಸದರಿ ಬೀದಿ ದನಗಳನ್ನು ಹಿಡಿದು ಸ್ಥಳಾಂತರಿಸಲು ತಿರ್ಮಾನಿಸಲಾಗಿದೆ. ಅದರಂತೆ ಸದರ ಕಾರ್ಯವನ್ನು ತುರ್ತಾಗಿ ಪ್ರಾರಂಭಿಸುವುದು ಇದ್ದು ಒಂದು ವೇಳೆ ದನಗಳ ಮಾಲೀಕರು ತಮ್ಮ ದನಗಳನ್ನು ಬೀದಿಯಲ್ಲಿ ಬಿಟ್ಟ ಪಕ್ಷದಲ್ಲಿ ಸದರಿ ದನಗಳನ್ನು ಸೆಪ್ಟೆಂಬರ್ 27 ರೊಳಗಾಗಿ  ತಮ್ಮ ತಾಬಾಕ್ಕೆ ತೆಗೆದುಕೊಳ್ಳತಕ್ಕದ್ದು ತಪ್ಪಿದ್ದಲ್ಲಿ ಮುಂದೆ ಆಗುವ ಹಾನಿಗಳಿಗೆ ಗದಗ-ಬೆಟಗೇರಿ ನಗರಸಭೆ ಜವಾಬ್ದಾರಿಯಾಗುವುದಿಲ್ಲ ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net