ಮಕ್ಕಳ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮ

1700219312307
Published on

ಗದಗ: ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಹರ ವಲಯದ ಕ್ಲಸ್ಟರ್ ಸಂಖ್ಯೆ -04 ರ ವ್ಯಾಪ್ತಿಯ ಸರಕಾರಿ ಶಾಲೆಗಳಾದ 4 ನೇ ನಂಬರ್, 05 ನೇ ನಂಬರ್ ಮತ್ತು 10 ನೇ ನಂಬರ್ ಶಾಲೆಗಳ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಮುಖ್ಯ ವಾಹಿನಿಗೆ ಕರೆ ತರುವ ಉದ್ದೇಶದಿಂದ ಹಾಗೂ ಮಾದಕ ವಸ್ತು ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕ ಎಂಬ ಅರಿವನ್ನು ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಗದಗ ನಗರದ ಬಸವೇಶ್ವರ ನಗರದಲ್ಲಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬಸವೇಶ್ವರ ನಗರದ ಸರಕಾರಿ ಪ್ರಾಥಮಿಕ ನಾಲ್ಕನೇ ನಂಬರ್ ಶಾಲೆಯ ಮಕ್ಕಳು ಮಹಾತ್ಮ ಗಾಂಧೀಜಿ, ಡಾ. ಬಿ. ಆರ್. ಅಂಬೇಡ್ಕರ್, ಚಾಚಾ ನೆಹರು, ಸುಭಾಷ್ ಚಂದ್ರ ಬೋಸ್, ವಿಶ್ವಗುರು ಬಸವೇಶ್ವರರು, ಅಕ್ಕಮಹಾದೇವಿ, ಸಂಗೋಳಿ ರಾಯಣ್ಣ, ಕಿತ್ತೂರಾಣಿ ಚೆನ್ನಮ್ಮ, ಒನಕೆ ಓಬವ್ವ, ಪೊಲೀಸ್ ವೇಷ, ಸೈನಿಕರ ವೇಷ, ಜಾನಪದ ಕಲೆಗಳ ವೇಷ ಹಾಗೂ ಭಾರತೀಯ ಸಂಸ್ಕೃತಿ ಬಿಂಬಿಸುವ ರಂಗು ರಂಗಿನ ವೇಷ ಭೂಷಣವನ್ನು ಹಾಕಿಕೊಂಡು ಮಕ್ಕಳು ಘೋಷವಾಕ್ಯಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಿದರು.

ಈ ಜಾತ ಕಾರ್ಯಕ್ರಮದಲ್ಲಿ ಶಹರ ವಲಯದ ಬಿ ಆರ್ ಪಿ ಶ್ರೀಮತಿ ಟಿ. ಎಸ್. ಹೂಗಾರ, ಸಿ ಆರ್ ಪಿ ಗಳಾದ ಶ್ರೀ ರವಿ. ಎಂ. ಹೆಬ್ಬಳ್ಳಿ, ಬಿ ಐ ಆರ್ ಟಿ  ಶ್ರೀಮತಿ  ಎ. ಡಿ. ಹುಗ್ಗೆಣ್ಣವರ್, ಮುಖ್ಯೋಪಾಧ್ಯಯರಾದ  ಶ್ರೀ ಎಸ್. ಕೆ. ಮಂಗಳಗುಡ್ಡ, ಶ್ರೀ ಎಫ್. ಎ. ನಮಾಜಿ, ಶ್ರೀ ಆಯ್. ವಿ. ಕಟ್ಟಿಮನಿ, ಶ್ರೀ ಎಂ. ಆರ್. ಡೊಳ್ಳಿನ, ಶ್ರೀ ಆಯ್. ಟಿ. ಹೊಸಮನಿ, ಮೂರು ಶಾಲೆಗಳ ಸಮಸ್ತ ಶಿಕ್ಷಕ/ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net