

Gadag: ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಗಳ ವಾಷಿರ್ಕ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್. ಎಸ್. ಬುರಡಿ ಮಾತನಾಡಿ, ಇಲ್ಲಿ ಯಾರನ್ನೂ ದೊಡ್ಡವರು ಚಿಕ್ಕವರು, ಜಾತಿ * ಧರ್ಮ, ಭಾಷೆ, ಕರಿಯ &ಬಿಳಿಯನೆಂಬ, ಬೇಧ&ಭಾವ ಮಾಡದೇ ನಾವೆಲ್ಲರೂ ಒಂದೇ ಎನ್ನುವ ಮನೋಭಾವದಿಂದರಬೇಕು. ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ, ತರಬೇತಿ ನೀಡಿ, ಹೊರಸೂಸುವಂತೆ ಪ್ರತಿಯೊಬ್ಬ ಶಿಕರು ಮಾಡಬೇಕೆಂದರು.
*ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೆ* ಎನ್ನುವ ನುಡಿಯಂತೆ ಮಕ್ಕಳನ್ನು ಚಿಕ್ಕವರಿರುವಾಗಲೇ ಉತ್ತಮವಾದುದನ್ನು ಮಾತ್ರ ಕಲಿಸಿಕೊಟ್ಟಾಗ, ಮುಂದೆ ದೊಡ್ಡವರಾದಮೇಲೆ, ದೇಶಕ್ಕೆ ಕೊಡುಗೆ ಕೊಡುವಂತ ಸತಜೆಗಳಾಗಿ ಬೆಳೆಯುತ್ತಾರೆ.
ಸಂಸ್ಥೆಯ ಅಧ್ಯರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರೂ ಸಹ ಒಳ್ಳೆಯ ಸಂಸ್ಕಾರವಂತರೂ ತಮ್ಮ ಈರ್ವರೂ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿದ್ದಾರೆ. ಮಕ್ಕಳನ್ನಷ್ಟೇ ಅಲ್ಲದೆ ಇಡಿ ಕ್ಯಾಂಪಸ್ ಮಾದರಿಯನ್ನಾಗಿ ಬೆಳೆಸಿದ್ದಾರೆ. ಗದಗ ಜಿಲ್ಲೆಯಲ್ಲೇ ಅತ್ಯುತ್ತಮ ಶಾಲಾ&ಕಾಲೇಜು ಎನ್ನುವ ಕೀತಿರ್ಗೆ ಪಾತ್ರವಾಗಿದೆ.
ತಾವುಗಳೆಲ್ಲರೂ ಗಮನಿಸಬೇಕು ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿದಂತ ಚಿಕ್ಕಟ್ಟಿ ಶ್ರಾವ್ಯ, ಹಾರ್ಮೊನಿಯಂ ನುಡಿಸುತ್ತ ಹೇಳಿದ ವಚನಗಳನ್ನು ಕೇಳಿಸಿಕೊಂಡಾಗ ಕಂಠಪಾಠಮಾಡಿ ಹೇಳುವುದೇನು ದೊಡ್ಡ ವಿಷಯವಲ್ಲ ಅಂತ ಅನ್ನಿಸಬಹುದು. ಆದರೆ, ಚಿಕ್ಕ ವಯವಸ್ಸಿನಲ್ಲಿ ನಾವು ಕೊಡುವಂತ ಸಂಸ್ಕಾರ ಇದೆಯಲ್ಲ ಅದು ಮುಖ್ಯ. ಅಂತಹ ಸಂಸ್ಕಾರವನ್ನು ಮೆಗೂಡಿಸಿಕೊಂಡಿರುವ ಶ್ರಾವ್ಯಾಳಿಗೂ, ಅನುಕರಣೀಯ ಸಂಸ್ಕಾರವನ್ನು ಕಲಿಸಿಕೊಟ್ಟ ಶ್ರಾವ್ಯಾಳ ಪಾಲಕರಿಗೂ ನಾವು ಧನ್ಯವಾದ ಹೇಳಲೇಬೇಕು.
ಎಲ್. ಇ. ಡಿ ಸ್ಕ್ರೀನ್ ಉದ್ಘಾಟಕರಾಗಿ ಆಗಮಿಸಿದ ಶೀಮತಿ ಸುನೀತಾ, ಆರ್, ಬುರಡಿ (ಕಿರಿಯ ಅಕಾರಿಗಳು) ಮಾತನಾಡುತ್ತ, ಪಾಲಕರಾದ ನಾವು ನಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನೀಯರ್, ಆಗುವಂತೆ ಒತ್ತಾಯಿಸದೇ ಅವರಿಗೆ ಯಾವ ವಿಷಯದಲ್ಲಿ ಹೆಚ್ಚಿಗೆ ಆಸಕ್ತಿಯಿದೆಯೆಂಬುದನ್ನು ನಾವು ಮೊದಲು ತಿಳಿದುಕೊಂಡು ಅದೇ ವಿಷಯವನ್ನು ಹೆಚ್ಚಿನ ರೀತಿಯಲ್ಲಿ ತರಬೇತಿ ಕೊಟ್ಟರೆ ಪ್ರತಿಯೊಬ್ಬನು ಸರಳವಾಗಿ ಗ್ರಹಿಸಿಕೊಂಡು ಬುದ್ದಿವಂತನಾಗುತ್ತಾನೆ.
ನನ್ನನ್ನೇ ಉದಾಹರಣೆಯಾಗಿ ಹೇಳುವುದಾದರೆ, ನನ್ನ ಧ್ವನಿ ಸರಿಯಾಗಿಲ್ಲ, ನಾನು ಗಾಯಕಿಯಾಗಬೇಕೆಂದು ಬಯಸಿದರೆ ಅದು ನನ್ನ ತಪ್ಪಾಗುತ್ತೆ, ಮೊದಲು ನಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದೇ ವಿಷಯದಲ್ಲಿ ಏನೆಲ್ಲ ಸಾಧನೆ ಮಾಡಬಹುದೋ, ಆ ವಿಷಯ ಆಯ್ಕೆಮಾಡಿಕೊಂಡು ಸತತ ಅಭ್ಯಾಸ ಮಾಡಿದರೆ ಪ್ರತಿಯೊಬ್ಬ ವಿದ್ಯಾಥಿರ್ಯೂ ಸಾಧಕನಾಗುತ್ತಾನೆ ಎಂದು ತಿಳಿಸಿದರು.
ಸಕ್ಸಸ್ ಎನ್ನುವುದು ಬೇರೆಲ್ಲೂ ಇಲ್ಲ, ಅದು ನಮ್ಮೊಳಗೆ, ನಮ್ಮ ನಡೆ&ನುಡಿಯಲ್ಲಿದೆ, ಯಾರೆಲ್ಲ ಸಂತೋಷವಾಗಿದ್ದಾರೋ ಅವರೆಲ್ಲರೂ ಸಕ್ಸಸ್ ಪಡೆದವರು ಅಂತ ಹೇಳಬಹುದು. ಜೀವನದಲ್ಲಿ ಹಣ ಸಂಪಾದನೆಮಾಡಿ ಕೋಟ್ಯಾಪತಿಯಾಗುವುದೇ ಸಕ್ಸಸ್ಲ್ಲ. ಆ ಹಣ ನಮ್ಮ ಬೆವರಿನ ಪ್ರತಿಲದಿಂದ ಬಂದಿದ್ದರೆ, ಅದು ನಿಜವಾದ ಸಕ್ಸಸ್. *ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿಯೇ ನೋಡು* ಎನ್ನುವಂತೆ ಚಿಕ್ಕವಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ಕುಮಾರಿ ಶ್ರಾವ್ಯ ಸದಾಶಿವ ಚಿಕ್ಕಟ್ಟಿ, ಇಂಡಿಯಾ ಬುಕ್ ಆ್ ರೆಕಾರ್ಡ 2020ರ ಅವಾರ್ಡ ಪಡೆದಿರುತ್ತಾಳೆ. ಇಂಗ್ಲೀಷ್ ಅಲಾಬೆಟ್ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಕಂಠಪಾಠವಾಗಿ ಹೇಳಿ, ಭಾರತ ದೇಶದ ರಾಜ್ಯಗಳ ಹಾಗೂ ರಾಜಧಾನಿಗಳ ಹೆಸರುಗಳನ್ನು ನಿರರ್ಗಳವಾಗಿ ಹೇಳಿ, ಕರ್ನಾಟಕದ ಎಲ್ಲ ಜಿಲ್ಲೆಗಳ ಹೆಸರುಗಳನ್ನೂ ಸಹ ತಿಳಿಸಿ, ನಮ್ಮ ದೇಶದ ಅನ್ನದಾತರಾದ ರೆತರ ಕುರಿತು, ಸ್ವಾಮಿ ವಿವೇಕಾನಂದರ ಕುರಿತು ಭಾಷಣ ಮಾಡಿದಳು, ಸ್ವತಃ ಹಾರ್ಮೊನಿಯಂ ನುಡಿಸುತ್ತಾ ಕೇಳುಗಳೆಲ್ಲರೂ ಮಂತ್ರಮುಗ್ಧರಾಗುಂತೆ ಶೀ ಜಗಜ್ಯೋತಿ ಬಸವೇಶ್ವರರ ವಚನಗಳನ್ನು ಸ್ವರ ಬದ್ದವಾಗಿ ಹಾಡಿದಳು.
ಸಂಸ್ಥೆಯ ಅಧ್ಯರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಮಾತನಾಡುತ್ತ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಅಣ್ಣನವರಾದ ಶೀ ಅಪ್ಪಾಸಾಬ ಚಿಕ್ಕಟ್ಟಿ ಹಾಗೂ ಶೀಮತಿ ಕಾಶಿಬಾಯಿ ಚಿಕ್ಕಟ್ಟಿಯವರು ನಾನು ಚಿಕ್ಕವನಿರುವಾಗಿನಿಂದ ಎಮ್.ಎಸ್.ಸಿ ಪದವಿಯವೆರೆಗೂ ಶ್ರಮವಹಿಸಿ ನನ್ನನ್ನು ಓದಿಸಿದ್ದರಿಂದ ನಾನು ಕಲಿತು ಕಲಿಸುತ್ತಿರುವೆ, ನನ್ನನ್ನು ಈ ಹಂತಕ್ಕೆ ಬೆಳೆಸಿದ ಅಣ್ಣ&ಅತ್ತಿಗೆಗೆ ಗೌರವ ಸರ್ಮಪಿಸಿ ಸನ್ಮಾನಿಸಲಾಯಿತು. ಹಾಗೂ ನಮ್ಮ ಕರೆಗೆ ಓಗೊಟ್ಟು ತಮ್ಮ ಬಿಡುವಿಲ್ಲದ ಸಮಯದಲ್ಲೂ ಸಹ ಬಿಡುವು ಮಾಡಿಕೊಂಡು ಬಂದಿರುವ ಗೌರವಾನ್ವಿತ ಮುಖ್ಯ ಅಥಿತಿಗಳಾಗಿ ಆಗಮಿಸಿದ ಶೀ ಆರ್. ಎಸ್. ಬುರುಡಿ(ಉಪನಿರ್ದೇಶಕರು)ಯವರಿಗೆ ಹಾಗೂ ಅವರ ಧರ್ಮಪತ್ನಿಯಾದ ಎಲ್. ಇ. ಡಿ ಸ್ಕ್ರೀನ್ ಉದ್ಘಾಟಕರಾಗಿ ಆಗಮಿಸಿದ ಶೀಮತಿ ಸುನಿತಾ. ಆರ್. ಬುರುಡಿಯವರಿಗೂ ಸನ್ಮಾನಿಸಲಾಯಿತು. ಅಥಣಿ ಚಿಕ್ಕಟ್ಟಿ ಶಾಲೆಯ ಕಾರ್ಯದಶಿರ್ಗಳಾದ ಶೀ ಸದಾಶಿವ ಚಿಕ್ಕಟ್ಟಿ ಅವರ ಪತ್ನಿ ಶೀಮತಿ ಕೋಮಲ ಚಿಕ್ಕಟ್ಟಿ ದಂಪತಿಗಳಿಗೂ ಸನ್ಮಾನಿಸಲಾಯಿತು. ಹಾಗೂ ಕುಮಾರಿ ಶ್ರಾವ್ಯಾ ಎಸ್. ಚಿಕ್ಕಟ್ಟಿ ಅವರಿಗೂ ಚಿಕ್ಕಟ್ಟಿ ಸಂಸ್ಥೆಯ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಬಿ.ಸಿ.ಎ ಕಾಲೇಜು ಪ್ರಾಚಾರ್ಯರಾದ ಶೀ ಬಿಪಿನ್ ಎಸ್. ಚಿಕ್ಕಟ್ಟಿ ಸ್ವಾಗತಿಸಿದರು, 8ನೇ ತರಗತಿಯ ವಿದ್ಯಾಥಿರ್ನಿಯರಾದ ಅದಿಬಾನಾಜ್ ಅಬ್ದುಲ್ಗಣಿ ಕೊತ್ವಾಲ್, ಪಲ್ಲವಿ ಜೆ. ನಿರಾಲಾ, ಶ್ರೇಯಾ ಮುಳಗುಂದಮಠ ಹಾಗೂ ಪ್ರತಿಾ ದೊಡ್ಡಮನಿ ನಿರೂಪಿಸಿದರು. ಅರಾ ಎಮ್. ಆಡೂರು, ಪ್ರತಿಾ ಬಿ. ಕಳಸದ, ಶ್ರೇಯಾ ಸಾಸನೂರು, ಶಿವಾನಿ ಆಸಂಗಿ, ನಯನಾ ಕೆ. ಚಿಲವೇರಿ ಹಾಗೂ ತನುಶೀ ವಿ. ಸೊಪ್ಪಿನ, ಗಣ್ಯಮಾನ್ಯರ ಪರಿಚಯ ಮಾಡಿದರು. ಆಡಳಿತಾಕಾರಿಗಳಾದ ಶೀಮತಿ ಕಲಾವತಿ ಕೆಂಚರಾಹುತ ವಂದನೆ ಸಲ್ಲಿಸಿದರು.
ಮಕ್ಕಳು, ಸ್ವಾತಂತ್ರ್ಯ ಹೋರಾಟಗಾರರ ವಿವಿಧ ವೇಷ ಭೂಷಣಗಳನ್ನು ಧರಿಸಿ ಬಂದಿರುವುದು ಹಾಗೂ ರ್ಯಾಂಪ್ ವಾಕ್ ನೋಡುಗರ ಮನಸೆಳೆಯುಂತಿದ್ದವು. ಕಾಂತಾರದ ವರಹ ರೂಪಂ ಎನ್ನುವ ಹಾಡಿಗೆ ಹಾಗೂ ಶಿವತಾಂಡವ ಈಶ್ವರ ನತ್ಯ ಅತ್ಯದ್ಭುತವಾಗಿ ನೋಡುಗರ ಮನಸೆಳೆಯುವಂತಿದ್ದವು. ಶಾಲೆಯ ಶಿಕಿಯರು ಹಾಗೂ ಮಕ್ಕಳ ತಾಯಂದಿರೂ ಸಹ ನತ್ಯ ಪ್ರದರ್ಶನ ಮಾಡಿದರು.
ವಾಯ್. ಎನ್. ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಪ್ರಾಚಾರ್ಯರಾದ ಶೀಮತಿ ಶೋಭಾ ಭಟ್, ವಿನಯ್ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಪ್ರಾಚಾರ್ಯರಾದ ಶೀಮತಿ ಪುಷ್ಪಲತಾ ಬೆಲೇರಿ ಹಾಗೂ ಎಸ್. ವಾಯ್. ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಪ್ರಾಚಾರ್ಯರಾದ ಶೀಮತಿ ಅನುಶೀ ವಸ್ತ್ರದ ಉಪಸ್ಥಿತರಿದ್ದರು.