ಚಿಕ್ಕಹಂದಿಗೋಳ : ನೂತನ ಎಸ್.ಡಿ.ಎಮ್.ಸಿ ರಚನೆ

SDMC PHOTO
Published on

ಗದಗ : ತಾಲ್ಲೂಕಿನ ಚಿಕ್ಕಹಂದಿಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್.ಡಿ.ಎಮ್.ಸಿಯನ್ನು ರಚನೆ ಮಾಡಲಾಯಿತು.

೨೦೨೪-೨೦೨೭ ರ ಅವಧಿಗೆ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮೀತಿಯ ಅಧ್ಯಕ್ಷರಾಗಿ ಶ್ರೀಮತಿ ಪಾರ್ವತಿ ಶರಣಯ್ಯ ಕಾಶಿಮಠ ಮತ್ತು ಉಪಾಧ್ಯಕ್ಷರಾಗಿ ಬಸವರಾಜ ಆಲೂರ ಸೇರಿದಂತೆ ಒಟ್ಟು ೧೬ ಜನ ಸದಸ್ಯರಾಗಿ ಕನಕಪ್ಪ ಪೂಜಾರ, ಮಂಜುಳಾ ಮಾದರ, ಪಕ್ಕೀರಪ್ಪ ಬೋರ್ಜಿ, ಅಲ್ಲಾಭಕ್ಷಿ ದುಂದೂರ, ರಮಜಾನಸಾಬ ಶಲವಡಿ, ಮಮತಾಜ ನದಾಫ, ರುಕ್ಸಾನಬಾನು ಶಲವಡಿ, ಸಂತೋಷ ಕುಂಬಾರ, ಪ್ರವೀಣ ಪೂಜಾರ, ವೀರನಗೌಡ ಗೌಡರ, ಗಿರಿಜಾ ವಿರಕ್ತಮಠ, ವಿಜಯಲಕ್ಷ್ಮಿ ಗುಡ್ಡಿಮಠ, ಶ್ರೀದೇವಿ ವಿರಕ್ತಮಠ, ರೇವತಿ ಪತ್ತಾರ, ಪ್ರಭಾವತಿ ಆಲೂರ ಇವರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಹಿಂದಿನ ಎಸ್.ಡಿ.ಎಮ್.ಸಿ ಸದಸ್ಯರಿಗೆ ಬಿಳ್ಕೋಟ್ಟು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಹುಚ್ಚಣ್ಣವರ ಸೇರಿದಂತೆ ಶಾಲಾ ಶಿಕ್ಷಕರು, ವಿಧ್ಯಾರ್ಥಿಗಳು ಹಾಗೂ ಗ್ರಾಮದ ಗುರುಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net