ಸಂಸ್ಥೆಗಳು ಸಮಾಜಕ್ಕೆ ಮಾದರಿ ಆಗಬೇಕು : ಪದ್ಮಾರಯ್ಯ ತಾತನವರು

16GDG02
Published on

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಹರ್ಲಾಪೂರ ಗ್ರಾಮದ ಬಸವಾನಂದ ಸೇವಾ ಸಂಸ್ಥೆಯು ಐದು ವರ್ಷಗಳ ಕಾಲ ಸಾಮಾಜಿಕ, ಧಾಮಿರ್ಕ, ಆಧ್ಯಾತ್ಮಿಕ, ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಈಗ ವಾಷಿರ್ಕೋತ್ಸವ ಆಚರಿಸಿಕೊಳ್ಳುತ್ತಿದೆದೆ ಎಂದು ಪದ್ಮಾರಯ್ಯ ತಾತನವರು ಹೇಳಿದರು.
ಹರ್ಲಾಪೂರ ಗ್ರಾಮದಲ್ಲಿ ಮಂಗಳವಾರ ಜರುಗಿದ ಬಸವಾನಂದ ಸಾಂಸತಿಕ ಸೇವಾ ಸಂಸ್ಥೆಯ ಆರನೇ ವಾಷಿರ್ಕೋತ್ಸವದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಈ ಸೇವಾ ಸಂಸ್ಥೆಯು ಸಸಿ ನೆಡುವಂತಹ ಕಾರ್ಯಕ್ರಮ, 1008 ಮುತೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಭಾರತಮಾತೆಯ ಸೇವೆಗೈದ ಮತ್ತು ಸೇವೆ ಸಲ್ಲಿಸುತ್ತಿರುವ ವೀರ ಯೋಧರಿಗೆ ಗೌರವ, ಸಮಾಜದ ಸಂಸ್ಕಾರದ ಪ್ರಕಾರವಾಗಿ ದೀೆ ಅಯ್ಯಾಚಾರ ಕಾರ್ಯಕ್ರಮ ನಡೆಸುತ್ತ ಬಂದಿದೆ. ಈ ನಾಡಿನ ಹಲವಾರು ಮಠಾಧೀಶರನ್ನು ಕರೆಯಿಸಿ ಧಾಮಿರ್ಕ ಧರ್ಮದ ಜಾಗೃತಿ ಕಾರ್ಯಕ್ರಮ ನಡೆಸಿದೆ. ಈ ಸಂಸ್ಥೆಯ ಸಾಮಾಜಿಕ ಕಾರ್ಯಗಳು ಹೀಗೆಯೇ ಮುಂದುವರೆಯಬೇಕು ಎಂದರು.
ಮಾಜಿ ಸೈನಿಕ ಶರಣಯ್ಯ ಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಸವರಾಜ ಸ್ವಾಮಿ, ಸದಾನಂದ ಶಾಸ್ತ್ರಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net