ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ:  ವಿವಿಧ ಕ್ರೀಡಾಕೂಟ

02GDG05
Published on
ಗದಗ:  ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಆರಂಭವಾಗಿ ೫೦ ವಸಂತಗಳನ್ನು ಪೂರೈಸಿ, ‘ಸುವರ್ಣ ಮಹೋತ್ಸವ’ದ ಸಂಭ್ರಮದಲ್ಲಿದ್ದು, ಅದರ ಅಂಗವಾಗಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಉತ್ಸವ ನಡೆಸುತ್ತಿದ್ದು, ಅದರ ಭಾಗವಾಗಿ ಆ.೩ ರಂದು  ಸಂಸ್ಥೆಯ ಸದಸ್ಯರಾಗಿರುವ ವ್ಯಾಪಾರಸ್ಥರಿಗಾಗಿಯೇ ‘ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಲಾಗಿದೆ ಎಂದು ಕ್ರೀಡಾ ಉಪಸಮಿತಿಯ ಚೇರಮನ್ ಶರಣು ಗದಗ
 ಹೇಳಿದರು.
 ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ   ನಡೆದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ನಡೆಯುವ ಈ ಟೂರ್ನಾಮೆಂಟ್‌ನಲ್ಲಿ  ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸದಸ್ಯರಾಗಿರುವ ವ್ಯಾಪಾರಸ್ಥರ ಒಟ್ಟು ನಾಲ್ಕು ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಇದು ಹಾರ್ಡ್ ಟೆನ್ನಿಸ್ ಕ್ರಿಕೆಟ್ ಟೂರ್ನಿಯಾಗಿದ್ದು, ನಾಕೌಟ್ ಮಾದರಿ ಪಂದ್ಯಗಳು ನಡೆಯಲಿವೆ. ಒಟ್ಟು ೧೨ ಓವರ್‌ನ ಟೂರ್ನಿ ಇದಾಗಿದೆ. ಗೆದ್ದ ತಂಡಕ್ಕೆ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಅವರು ವಿವರಿಸಿದರು.
 ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸದಸ್ಯರಾಗಿರುವ ವ್ಯಾಪಾರಸ್ಥರ ಈ ಕ್ರಿಕೆಟ್ ಟೂರ್ನಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ  ಚಾಲನೆ ನೀಡುವರು. ಅಲ್ಲದೇ, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ, ತರಬೇತಿದಾ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಸುನೀಲ ಜೋಶಿ ಸಹ ಭಾಗವಹಿಸಲಿದ್ದಾರೆ.
 ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ  ಪಾಟೀಲ, ಮೂತ್ರರೋಗ ತಜ್ಞ ಡಾ.ಶರಣ ಆಲೂರ, ಖ್ಯಾತ ಕ್ರಿಕೆಟ್ ತರಬೇತಿದಾರ ಪ್ರೊ.ಎಸ್.ಎಲ್. ಗುಳೇದಗುಡ್ಡ ಆಗಮಿಸುವರು.
 ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ತಾತನಗೌಡ  ಪಾಟೀಲ ಹಾಗೂ  ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಹಿಳಾ ಘಟಕದ ಅಧ್ಯಕ್ಷೆ  ನಂದಾ  ಬಾಳಿಹಳ್ಳಿವ್ಮಠ  ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದರು‌.
ಸುದ್ದಿಗೋಷ್ಠಿಯಲ್ಲಿ  ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ಅಶೋಕಗೌಡ  ಪಾಟೀಲ, ಉಪಾಧ್ಯಕ್ಷರ ಶಿವಯ್ಯ ನಾಲ್ವತವಾಡಮಠ, ಕೋಶಾಧ್ಯಕ್ಷ ಸಜಯ ಬಾಗಮಾರ, ಸಹ ಗೌರವ ಕಾರ್ಯದರ್ಶಿ ಸೋಮನಾಥ  ಜಾಲಿ, ರಾಘವೇಂದ್ರ ಕಾಲವಾಡ, ಸಂಸ್ಥೆಯ ಸದಸ್ಯ ನಾಗರಾಜ ನರಗುಂದ, ರಾಜು ಮುಧೋಳ, ಧೀರಜ ಜೈನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net