

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಉತ್ಸವವನ್ನು ಆ.15 ರಿಂದ ಆ. 19 ರ ವರೆಗೆ ನಗರದ ಸ್ವಾಮಿ ವಿವೇಕಾನಂದ ಸಭಾ ಭವನ ಮತ್ತು ಕೆ.ಎಚ್. ಪಾಟೀಲ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಾಣಿಜ್ಯೋದ್ಯಮ ಸಂಸ್ಥೆಯ ಉತ್ಸವ ಸಮಿತಿ ಚೇರಮನ್ ಆನಂದ ಪೊತ್ನೀಸ ಹೇಳಿದರು.
ನಗರದ ಬನಪ್ಪ ಸಂಕಪ್ಪ ಸಂಕಣ್ಣವರ ಸಭಾ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ ಸಭೆಯಲ್ಲಿ ವಸ್ತು ಪ್ರದರ್ಶನದ ಮಳಿಗೆ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಿಲ್ಲಾ ಕೈಗಾರಿಕಾ ಕೇಂದ್ರ ಆಶ್ರಯದಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಉತ್ಸವ &2025ನ್ನು ಆಯೋಜಿಸಲಾಗಿದೆ. ಈ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಗುಡಿ ಕೈಗಾರಿಕೆಗಳು, ಸಣ್ಣ ಉದ್ಯಮದಾರರು ಉತ್ಪಾದಿಸಿದಂತಹ ವಸ್ತುಗಳಾದ ಸಿದ್ದ ಉಡುಪುಗಳು, ನವೀನ ಮಾದರಿಯ ಇಲೆಕ್ಟ್ರಾನಿಕ್ಸಗಳು, ಸಾವಯವ ಕೃಷಿ ಬೀಜಗಳ ಮಾಹಿತಿ, ಹೊಸ ಟ್ರಾ$್ಯಕ್ಟರಗಳು, ಕೃಷಿ ಉಪಕರಣಗಳು, ಸೋಲಾರ ಎನಜಿರ್ ಪರಿಕರ, ಅತ್ಯಾಕರ್ಷಕ ಫಿಠೋಪಕರಣಗಳು, ಅಲಂಕಾರಿ ವಸ್ತುಗಳು, ಗೊಂಬೆಗಳು, ಸೀರೆ ಬೆಡಶಿಟ್ ಸೇರಿದಂತೆ ವೈವಿದ್ಯರ್ಪೂಣ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತವೆ ಎಂದರು.
ಸ್ಥಳಿಯ ಕಲಾವಿದರನ್ನು ಪ್ರೊತ್ಸಾಹಿಸುವ ಉದ್ದೇಶದಿಂದ ಮತ್ತು ಕಲಾ ಪರಂಪರೆಯನ್ನು ಬಿಂಬಿಸುವ ಸಲುವಾಗಿ ಪ್ರತಿದಿನ ಸಾಯಂಕಾಲ ಸಾಂಸತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲು ಹಾಗೂ ಮಳಿಗೆಯನ್ನು ಕಾಯ್ದಿರಿಸಲು ಮತ್ತು ಆಸಕ್ತ ಕಲಾವಿದರು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಕಚೇರಿ ಸಂಪಕಿರ್ಸಬೇಕು ಎಂದು ತಿಳಿಸಿದರು.
ಸದಾಶಿವಯ್ಯ ಮದರಿಮಠ, ನಂದಾ ಚಂದ್ರು ಬಾಳಿಹಳ್ಳಿಮಠ, ತಾತನಗೌಡ ಪಾಟೀಲ, ಅಶೋಕಗೌಡ ಪಾಟೀಲ ಇತರರು ಇದ್ದರು.