

ಗದಗ: ಗಣಿತ ವಿಷಯವನ್ನು ಅತ್ಯಂತ ಸರಳವಾಗಿ ಕಲಿಯಲು ಸರಕಾರಿ ಪ್ರೌಢಶಾಲೆ ಸಿದ್ಧಲಿಂಗ ನಗರದಲ್ಲಿ ಸ್ಥಾಪಿಸಿದ ಶ್ರೀಮತಿ ಹೇಮಲತಾ ಬಸವರಾಜ ಹೊರಟ್ಟಿ ಗಣಿತ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರ ವಿದ್ಯಾರ್ಥಿಗಳಿಗೆ ಸರಳವಾಗಿ ಗಣಿತ ಕಲಿಯಲು ಅತ್ಯಂತ ಉಪಯುಕ್ತವಾಗಿದೆ ಎಂದು ಗದಗ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ಹೇಳಿದರು.
ಅವರು ಸರ್ಕಾರಿ ಪ್ರೌಢಶಾಲೆ ಸಿದ್ಧಲಿಂಗ ನಗರದಲ್ಲಿ ನಡೆದ ಸರ್ಕಾರದ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಹಾತ್ವಾಂಕಾಕ್ಷಿ ಯೋಜನೆಯಾದ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಶ್ರೀಮತಿ ಹೇಮಲತಾ ಬಸವರಾಜ ಹೊರಟ್ಟಿ ಗಣಿತ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ವೀಕ್ಷಿಸಿ ಮಾತನಾಡಿದ ಅವರು ಸರಕಾರಿ ಪ್ರೌಢಶಾಲಾ ಹಂತದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಗಣಿತ ಪ್ರಯೋಗಾಲಯ ಇದಾಗಿದ್ದು ಕೇಳಿ ಸಂತಸವಾಗಿದೆ. 120ಕ್ಕೂ ಹೆಚ್ಚು ಮಾದರಿಗಳು ಇಲ್ಲಿ ಇದ್ದು, ಅವುಗಳ ಮೂಲಕ ಸರಳ ಗಣಿತ ಕಲಿಕೆಗೆ ಸಹಕಾರಿಯಾಗಿದೆ. ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ.ವೀರಣ್ಣ ಬೋಳಿಶೆಟ್ಟಿ ಇವರ ಸಹಕಾರದೊಂದಿಗೆ ನಿರ್ಮಾಣಗೊಂಡ ಈ ಗಣಿತ ಪ್ರಯೋಗಾಲಯ ಅತ್ಯಂತ ಉತ್ಕೃಷ್ಟ ಮಟ್ಟದ ಪ್ರಯೋಗಾಲಯ ಇದಾಗಿರುವುದರಿಂದ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಹೆಚ್ಚೆಚ್ಚು ಮಾಡಿಕೊಳ್ಳಬೇಕೆಂದು ಹೇಳಿದರು.
ಸಾ.ಶಿ.ಇಲಾಖೆ ಉಪನಿರ್ದೇಶಕ ಆರ್.ಎಸ್.ಬುರಡಿ ಗಣಿತ ಪ್ರಯೋಗಾಲಯ ಕುರಿತು ಮಾಹಿತಿ ನೀಡಿ ಈ ಶಾಲೆಯ ಸಂಪೂರ್ಣ ಅಭಿವೃದ್ಧಿಗೆ ಬಸವರಾಜ ಹೊರಟ್ಟಿಯವರೊಂದಿಗೆ ಅವರ ಧರ್ಮಪತ್ನಿಯವರಾದ ಶ್ರೀಮತಿ ಹೇಮಲತಾ ಹೊರಟ್ಟಿಯವರು ಕೂಡಾ ಅವ್ವ ಸೇವಾ ಟ್ರಸ್ಟ ಮೂಲಕ ಎಲ್ಲ ರೀತಿಯಿಂದ ಸಹಕಾರ ಮಾಡಿ ಈ ಗಣಿತ ಪ್ರಯೋಗಾಲಯ ಬರಲು ಅವರ ಸಹಕಾರ ದೊಡ್ಡದು. ಹೀಗಾಗಿ ಸಾ.ಶಿ.ಇಲಾಖೆ ಪರವಾಗಿ ಅವರಿಗೆ ಮೊದಲು ಅಭಿನಂದಿಸುವುದಾಗಿ ಹೇಳಿದರು. ಇಲ್ಲಿಯ ಮಾದರಿಗಳು ರಾಜ್ಯಮಟ್ಟದ ಗಣಿತ ಪರಿಣಿತರಿಂದ ಪರೀಕ್ಷಿಸಿ ಇಲ್ಲಿ ಸ್ಥಾಪಿಸಲಾಗಿದೆ. ಅತ್ಯಂತ ಉಪಯುಕ್ತವಾದ ಈ ಮಾದರಿಗಳು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಸಹಕಾರಿಯಾಗಿವೆ.
ಶಾಲಾ ಉಸ್ತುವಾರಿ ಡಾ.ಬಸವರಾಜ ಧಾರವಾಡ ಮಾತನಾಡಿ ಬಸವರಾಜ ಹೊರಟ್ಟಿ ದಂಪತಿಗಳಿAದ ಎಲ್ಲ ರೀತಿಯ ಸಹಕಾರ ಈ ಶಾಲೆಗೆ ಸಿಕ್ಕಿದೆ ಇದೊಂದು ಮಾದರಿ ಶಾಲೆಯಾಗಿ ಬೆಳೆಯುತ್ತಿರುವುದರಿಂದ ಅದರ ಸದುಪಯೋಗವನ್ನು ಇಲ್ಲಿನ ವಿದ್ಯಾರ್ಥಿಗಳು ಮಾಡಿಕೊಳ್ಳಲು ವಿನಂತಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ವ್ಹಿ. ಶೆಟ್ಟೆಪ್ಪನವರ, ನಗರಸಭೆ ಸದಸ್ಯಿಣಿ, ಶ್ರೀಮತಿ ವಿದ್ಯಾ ಗಡಗಿ, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ನಂದಾ ಖಟವಟೆ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಾದ ಶ್ರೀಮತಿ ಸರಸ್ವತಿ ಕನವಳ್ಳಿ, ರವಿಪ್ರಕಾಶ, ಎಂ.ಎಸ್.ಕAಬಳಿ, ಶಿವಕುಮಾರ ಕುರಿ, ಅರವಟಗಿ, ಶಂಕರ ಹಡಗಲಿ, ಎಸ್.ಡಿ.ಪ್ರಭಯ್ಯನಮಠ, ಶ್ರೀಮತಿ ಜೆ.ಬಿ.ಅಣ್ಣಿಗೇರಿ, ಬಿ.ಎಸ್.ಯರಗುಡಿ ಮುಂತಾದವರು ಉಪಸ್ಥಿತರಿದ್ದರು.