ಹಿಂದೂ ಎನ್ನುವ ಶಬ್ದ ಪಂಚಮಸಾಲಿಗಳ ರಕ್ತದಲ್ಲಿ ಬಂದಿದೆ: ಸಿ. ಸಿ ಪಾಟೀಲ

IMG-20250921-WA0003
Published on
ಗದಗ: ಪಂಚಮಸಾಲಿ ಸಮದಾಯದವರು ಜಾತಿ ಸಮೀಕ್ಷೆಯಲ್ಲಿ 'ಧರ್ಮದ ಕಾಲಂ ನಲ್ಲಿ ಹಿಂದೂ, ಜಾತಿ ಕಾಲಂ ನಲ್ಲಿ ಲಿಂಗಾಯತ ಪಂಚಮಸಾಲಿ ಅಥವಾ ವೀರಶೈವ ಪಂಚಮಸಾಲಿ ಹಾಗೂ ಉಪಜಾತಿ ಕಾಲಂ ನಲ್ಲಿ ಪಂಚಮಸಾಲಿ ಎಂದು ನಮೂದಿಸಬೇಕು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನಗರದ ಪತ್ರಿಕ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದ ಅವರು,
ಪಂಚಮಸಾಲಿ ಕೋಡ್ ಸಂಖ್ಯೆ 0868. ಸಮಾಜ ಬಾಂಧವರಲ್ಲಿ ಯಾವುದೇ ಗೊಂದಲ ಬೇಡ. ನಮ್ಮ ಧರ್ಮ ಹಿಂದೂ. ಅನಾದಿ ಕಾಲದಿಂದ ಹಿಂದೂ ಅನ್ನುವ ಶಬ್ದ ಪಂಚಮಸಾಲಿಗಳ ರಕ್ತದಲ್ಲಿ ಬಂದಿದೆ. ನಮ್ಮ ಸಂಸ್ಕ್ರತಿಯನ್ನು ಕಾಪಾಡಬೇಕಿದೆ. ಕಾಂಗ್ರೆಸ್ ನ ವೀರಶೈವ ಲಿಂಗಾಯತ ಸಚಿವರು ಪ್ರಥಮ ಬಾರಿಗೆ ಲಿಂಗಾಯತರ ಪರವಾಗಿ ದ್ವನಿ ಎತ್ತಿದ್ದಾರೆ. ಸಚಿವ ಎಂ.ಬಿ ಪಾಟೀಲ ಟೇಬಲ್ ಗುದ್ದಿ ಮಾತನಾಡಿದ್ದಾರೆ. ಇನ್ನೂಳಿದಂತೆ ಈಶ್ವರ ಖಂಡ್ರೆ, ಎಸ್.ಎಸ್ ಮಲ್ಲಿಕಾರ್ಜುನ, ಎಚ್.ಕೆ ಪಾಟೀಲ ದ್ವನಿ ಎತ್ತಿದ್ದುˌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಿದ್ದರಾಮಯ್ಯನವರ ಸರ್ಕಾರದ ವಿರುದ್ದ ಅವರು ಸಮಾಜಕ್ಕಾಗಿ ದ್ವನಿ ಎತ್ತಿರುವುದಕ್ಕೆ ಸಂತಸವಿದೆ. ರಾಜಕಾರಣಕ್ಕಾಗಿ ಧರ್ಮ, ಸಂಸ್ಕ್ರತಿಯನ್ನು ಮಾರಿಕೋಳ್ಳಬಾರದು.
ಸಿಎಂ ಸಿದ್ದರಾಮಯ್ಯನವರು ಸಾಕಷ್ಟು ಅನುಭವ, ಅಧ್ಯಯನ ಮಾಡಿದ ರಾಜಕಾರಣಿಗಳಲ್ಲಿ ಒಬ್ಬರು. ತಮ್ಮ ಎರಡನೇ ಅವದಿಯಲ್ಲಿ ಅವರ ವಿಧ್ಯೆ ಹಾಗೂ ಅನುಭವ ರಾಜ್ಯಕ್ಕೆ ಉಪಯೋಗವಾಗುತ್ತಿಲ್ಲ. ಅಭಿವೃದ್ಧಿಯಿಂದ ರಾಜ್ಯ ವಂಚಿತವಾಗಿದೆ. ಇದನ್ನು ನಾವು ಆರೋಪ ಮಾಡಿದ್ರೆ ರಾಜಕೀಯ ಅಂತ ಹೇಳುತ್ತಾರೆ. ಆದರೆ, ರಾಜು ಕಾಗೆ, ನಾರಾಯಣಸ್ವಾಮಿ ಸೇರಿದಂತೆ ಅನೇಕ ಕಾಂಗ್ರೆಸ್ ನ ಹಿರಿಯರು ನಾವು ಅಸಹಾಯಕರಾಗಿದ್ದೇವೆ ಅಂತ ಹೇಳುತ್ತಿದ್ದಾರೆ. ಇದರಿಂದ ಜನರ ಅಭಿಪ್ರಾಯ, ಕಾಂಗ್ರೆಸ್ ಅಭಿಪ್ರಾಯ ನನ್ನ ನಾಯಕತ್ವದ ವಿರುದ್ದ ಎನ್ನುವ ಸಂಕಟ ಸಿದ್ದರಾಮಯ್ಯನವರಿಗೆ ಕಾಡುತ್ತಿದೆ ಎಂದು  ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಜಾತಿಗಣತಿ ಹೆಸರಿನಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆದರೆ, ಇದ್ಯಾವುದು ಶಾಶ್ವತ ಪರಿಹಾರವಲ್ಲ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ವಾರ್ದಾ ಜೇಬಿನಲ್ಲಿ ಸಂವಿಧಾನದ ಚೊಪ್ಡಿ ಇಟ್ಟಿರುತ್ತಾರೆ. ಸಂವಿಧಾನವನ್ನು ಗಾಳಿಗೆ ತೂರಿ ತುರ್ತುಪರಿಸ್ಥಿತಿ ಹೇರಿದ ಪಕ್ಷದವರು ಸಂವಿಧಾನ ಹಿಡಿದು ಓಡಾಡುತ್ತಿರುವುದು ವಿಪರ್ಯಾಸ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಇದ್ದಾಗ ಒಂದೂ ಗುಂಡಿ ಮುಚ್ಚಿಲ್ಲ  ಸಿಎಂ ಸಿದ್ದರಾಮಯ್ಯ ಗದಗದಲ್ಲಿ ಹೇಳಿಕೆ ನೀಡಿದ್ದರು. ನಾನು ಲೋಕೋಪಯೋಗಿ  ಸಚಿವನಾಗಿದ್ದಾಗ ಗದಗ ನಗರಕ್ಕೆ 10 ರಿಂದ 12 ಕೋಟಿ ಅನುದಾನ ನೀಡಿ ರಸ್ತೆ ಅಭಿವೃದ್ಧಿ ಪಡಿಸಿದ್ದೇನೆ. ಈಗಿರುವ ಸರ್ಕಾರಕ್ಕೆ ರಸ್ತೆಯಲ್ಲಿನ ಗುಂಡಿಯನ್ನೂ ಮುಚ್ಚಲು ಆಗುತ್ತಿಲ್ಲ. ಒಟ್ಚಾರೆಯಾಗಿ ಜಿಲ್ಲೆಗೆ ಅಂದಾಜು 2500 ಕೋಟಿ ಅನುದಾನ ಬಿಡುಗಡೆಗೋಳಿಸಿ ಅಭಿವೃದ್ಧಿ ಮಾಡಲಾಗಿದೆ ಎಂದರು.
ಈ ವೇಳೆ ಶಾಂತಣ್ಣ ಮುಳವಾಡ, ಸಿದ್ದಣ್ಣ ಪಲ್ಲೇದ, ಸಿ. ಕೆ ಮಾಳಶೇಟ್ಟಿ, ಅಯ್ಯಪ್ಪ ಅಂಗಡಿ, ಬಸವರಾಜ ಗಡ್ಡೆಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net