

ತರಾತುರಿ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಏನಿತ್ತು?
ವಿಜಯವಾಣಿ ಸುದ್ದಿಜಾಲ ಗದಗ
ಆರ್ಸಿಬಿ ಕ್ರಿಕೆಟ್ ತಂಡಕ್ಕೆ ಕೋಟ್ಯಂತರ ಅಭಿಮಾನಿಗಳ ಪಡೆ ಇದೆ. ಅವರೆಲ್ಲರ ಮೆಚ್ಚುಗೆ ಪಡೆಯುವ ಏಕೈಕ ಉದ್ದೇಶದಿಂದಲೇ ರಾಜ್ಯ ಸರ್ಕಾರ ತರಾತುರಿಯಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿ ಅಮಾಯಕರ ಜೀವ ಬಲಿ ಪಡೆದಿದೆ. ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಶಾಸಕ ಸಿ.ಸಿ.ಪಾಟೀಲ ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಾಸ್ತವದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸುವ ಅವಶ್ಯಕತೆಯೇ ಇರಲಿಲ್ಲ. ಆರ್ಸಿಬಿ ತಂಡವೇನು ದೇಶಕ್ಕಾಗಿ ಆಡಿಲ್ಲ. ಐಪಿಎಲ್ ಅಂದರೆ ದುಡ್ಡಿನ ಜಾತ್ರೆ. ಅದರಲ್ಲಿ ಭಾಗವಹಿಸುವ ಆಟಗಾರರೆಲ್ಲರೂ ಕೋಟ್ಯಂತರ ರೂಪಾಯಿಗೆ ಹರಾಜಾಗಿರುತ್ತಾರೆ. ಆರ್ಸಿಬಿ ತಂಡವನ್ನು ಅಭಿನಂದಿಸಬೇಕಿದ್ದರೆ ಪೂರ್ವ ನಿಯೋಜಿತ ಸಭೆ ಆಗಬೇಕಿತ್ತು. ತರಾತುರಿಯಲ್ಲಿ ಏಕೆ ಕಾರ್ಯಕ್ರಮ ನಡೆಸಲಾಯಿತು ಎಂದು ಪ್ರಶ್ನಿಸಿದರು.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಅವರ ಸಂಬಂಧಿಕರಿಗೆ ಮಾತ್ರ ಆಹ್ವಾನ ಇತ್ತು. ಅಭಿನಂದನಾ ಕಾರ್ಯಕರಮವನ್ನು ಕಾಂಗ್ರೆಸ್ ಪಕ್ಷದ ಕುಟುಂಬದ ಕಾರ್ಯಕ್ರಮವನ್ನಾಗಿ ಮಾಡಿದ್ದಾರೆ. ಅಧಿಕಾರಿಗಳು ತುರ್ತು ಕಾರ್ಯಕ್ರಮ ಬೇಡ ಎಂದರೂ ಸಹ ಆಟಗಾರರನ್ನು ಅಭಿನಂದಿಸಲು ಕಾರ್ಯಕ್ರಮ ಮಾಡಿ 11 ಜನರ ಸಾವಿಗೆ ಸರ್ಕಾರ ಕಾರಣ ಆಗಿದೆ. ಬಂದ ಅಭಿಮಾನಿಗಳ ಪೈಕಿ ಕಾಲ್ತುಳಿತಕ್ಕೆ ಸಿಕ್ಕು 11 ಮಂದಿ ಸತ್ತಿದ್ದಾರೆ. ಆದರೆ, ಆರ್ಸಿಬಿ ಆಟಗಾರರಿಗೆ ಈ ಬಗ್ಗೆ ಕಿಂಚಿತ್ತು ಕೂಡ ನೋವು, ಆಘಾತ ಆದಂತೆ ಕಾಣಿಸುತ್ತಿಲ್ಲ. ಕನಿಷ್ಠ ಪಕ್ಷ 11 ಮಂದಿ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಕೋರಿ ಮೇಣದಬತ್ತಿ ಹಚ್ಚಿ ವಿಷಾದ ವ್ಯಕ್ತಪಡಿಸಬಹುದಿತ್ತು ಎಂದರು.
ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಬಾರದು ಎಂದು ಯಾವ ಅಧಿಕಾರಿಗಳೂ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ದರೆ ಈ ಟನೆಗೆ ಯಾರು ಹೊಣೆ? ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದಾಗ ಗುಪ್ತಚರ ಇಲಾಖೆ ವೈಲ್ಯದಿಂದ ಪಹಲ್ಗಾಮ್ ಟನೆ ಆಯಿತು ಎಂದು ಕಾಂಗ್ರೆಸ್ ಮುಖಂಡರು ಬಾಯಿಬಡಿದುಕೊಂಡರು. ಪುಷ್ಪ2 ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಥಿಯೇಟರ್ನಲ್ಲಿ ನೂಕು ನುಗ್ಗಲಾಗಿ ಅಭಿಮಾನಿಯೊಬ್ಬ ಸತ್ತಾಗ ಇವರದ್ದೇ ಸರ್ಕಾರ ನಟ ಅಲ್ಲು ಅರ್ಜುನ್ ಅವರನ್ನು ಜೈಲಿಗಟ್ಟಿತು. ಈಗ ಯಾವುದೇ ಪೂರ್ವ ತಯಾರಿ ಇಲ್ಲದೇ ಮಾಡಿದ ಕಾರ್ಯಕ್ರಮದಿಂದ 11 ಮಂದಿ ಸತ್ತಿದ್ದಾರೆ. ಇದಕ್ಕೆ ಯಾರನ್ನು ಜೈಲಿಗೆ ಹಾಕುತ್ತೀರಿ ಎಂದು ಪ್ರಶ್ನಿಸಿದರು.
ಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ಸಾಲುವುದಿಲ್ಲ. ಅವಕಾಶ ಇದ್ದರೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಇಲ್ಲವಾದರೆ, ಸಿಬಿಐಗೆ ವಹಿಸಬೇಕು. ಆರ್ಸಿಬಿ ತಂಡದ ಬಳಿ ಹಣಕ್ಕೇನು ಕೊರತೆ ಇಲ್ಲ. ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಎಂ. ಎಸ್. ಕರಿಗೌಡ್ರ, ವಿನಾಯಕ ಮಾನ್ವಿ, ರಾವೇಂದ್ರ ಯಳವತ್ತಿ, ಸಿದ್ದು ಪಲ್ಲೇದ, ಉಷಾ ದಾಸರ, ವಿಜಯಲಕ್ಷಿ$್ಮ ಮಾನ್ವಿ, ಎಂ. ಎಂ. ಹಿರೇಮಠ ಇದ್ದರು.