

ವಿಜಯವಾಣಿ ಸುದ್ದಿಜಾಲ ಗದಗ
ಪಾಕಿಸ್ತಾನದ ವಾಯುಸೇನಾ ನೆಲಗಳ ಮೇಲೆ ಭಾರತ ಪಣಿ ದಾಳಿ ನಡೆಸಿದ್ದರಿಂದ ಅಪಾರ ಹಾನಿ ಆಗಿದೆ ಎಂದು ಸ್ವತಃ ಪಾಕಿಸ್ತಾನದ ಪ್ರಧಾನಿ ಬಹಿರಂಗ ಹೇಳಿಕೆ ನೀಡಿದ್ದರೂ ಸಹ ಮಲ್ಲಿಕಾರ್ಜುನ ರ್ಖಗೆ, ಪ್ರಿಯಾಂಕ್ ರ್ಖಗೆ, ದಿನೇಶ ಗೂಂಡೂರಾವ, ಕೃಷ್ಣ ಬೈರೇಗೌಡ, ಸಂತೋಷ ಲಾಡ್ ಮತ್ತು ಕೊತ್ತುರು ಮಂಜುನಾಥ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕ, ಸಚಿವರು ಸಾ ಕೇಳುತ್ತಿದ್ದಾರೆ. ಇದೇನಾ ಕಾಂಗ್ರೆಸ್ಸಿಗರ ದೇಶಭಕ್ತಿ ಎಂದು ಮಾ ಸಚಿವ ಶಾಸಕ ಸಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಶಾಸಕ, ಸಚಿವರನ್ನು ನಿಯಂತ್ರಣ ಇಟ್ಟುಕೊಳ್ಳವ ಸಾಮರ್ಥ್ಯ ಇಲ್ಲದಂತಾಗಿದೆ ಅಥವಾ ಸಿದ್ದರಾಮಯ್ಯನವರೇ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಭಾರತೀಯ ಸೇನೆಯ ಬಲವನ್ನು ಕುಗ್ಗಿಸುವ ಹೇಳಿಕೆಗಳನ್ನು ಕಾಂಗ್ರೆಸ್ ಪ್ರತಿನಿಧಿಗಳು ನೀಡಬಾರದು ಎಂದು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನವರು ಆದೇಶ ನಿಡುತ್ತಿಲ್ಲ ಏಕೆ ಎಂದು ಪ್ರಶ್ನಿನಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ಸಿಕ್ಕರೆ ಭಾರತವನ್ನು ಪ್ರಾಂತವಾರು ಒಡೆದು ಮತ್ತೊಂದು ಪಾಕಿಸ್ತಾನವನ್ನು ಸೃಷ್ಟಿಸುತ್ತಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ನಾಯಕರ ಹೇಳೀಕೆಗಳನ್ನು ಭಾರತೀಯ ಜನತಾ ಪಕ್ಷ ಕಟುವಾಗಿ ಟೀಕಿಸುತ್ತದೆ ಎಂದರು.
ಕೊತ್ತುರು ಮಂಜುನಾಥ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಭಾಧ್ಯಕ್ಷ ಯು.ಟಿ, ಖಾದರ ಅವರು ಇತರೆ ಶಾಸಕರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಆದರೆ ತಮ್ಮದೇ ಶಾಸಕರು ಇಂತ ಹೇಳಿಕೆ ನೀಡಿದ್ದರು ಈ ವರೆಗೆ ಸುಮ್ಮನಿದ್ದಾರೆ. ಕೊತ್ತುರು ಮಂಜುನಾಥ ಅವರ ಶಾಸಕ ಸ್ಥಾನ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಟೆಂಡರ್ ಹಾಕಲಿ:
ಪಾಕಿಸ್ತಾನದಲ್ಲಿ 20 ಅಧಿಕ ವಾಯುಸೇನಾ ನೆಲಗಳ ಮೇಲೆ ಭಾರತ ಪಣಿಗಳು ದಾಳೀ ನಡೆಸಿದ್ದರಿಂದ ಸೇನಾ ನೆಲಗಳು ನಾಶ ಆಗಿವೆ. ಅವುಗಳ ದುರಸ್ತಿಗೆ ಅಲ್ಲಿನ ಸರ್ಕಾರ ಟೆಂಡರ್ ಕರೆದಿದೆ. ಇಲ್ಲಿನ ಕಾಂಗ್ರೆಸ್ ನಾಯಕರಿಗೆ ಭಾರತದ ಸೇನೆಯ ನೈತಿಕ ಬಲದ ಬಗ್ಗೆ ಅನುಮಾನ ಇದ್ದರೆ ಪಾಕಿಸ್ತಾನ ಕರೆದಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಟೆಂಡರ್ ಹಾಕಲಿ. ಆಗ ಜ್ವಲಂತ ಸಾ ದೊರೆಯುತ್ತದೆ. ಕಾಂಗ್ರೆಸ್ ನಾಯಕರ ತಮ್ಮ ಬೆಂಬಲಿಗರಿಂದ ಪಾಕಿಸ್ತಾನದಲ್ಲಿ ಟೆಂಡರ್ ಹಾಕಲು ಬಿಜೆಪಿ ವತಿಯಿಂದ ಅನೂಕಲ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಎಂದು ಸಿ.ಸಿ. ಪಾಟೀಲ ವ್ಯಂಗ್ಯ ಆಡಿದರು.
ಕಾನೂನು ವ್ಯವಸ್ಥೆ ಹದಗೆಟ್ಟಿದೆ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸಲು ಗೃಹ ಸಚಿವ ಜಿ. ಪರಮೇಶ್ವರ ಅವರು ಅಸಮರ್ಥ ಆಗಿದ್ದಾರೆ. ಶನಿವಾರ ಸಂಜೆ ತಹಸೀಲ್ದಾರ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಉಪ ತಹಸೀಲ್ದಾರ ಸೇರಿ ಓರ್ವ ವ್ಯಕ್ತಿಯನ್ನು ಥಳಿಸಿರುವ ಟನೆ ನಡೆದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿಎ. ಉಪ ತಹಸೀಲ್ದಾರ ಖುಚಿರ್ ಎತ್ತಿ ಓರ್ವ ವ್ಯಕ್ತಿಯನ್ನು ಥಳಿಸಲು ಹೋಗಿದ್ದಾರೆ. ಸಂಜೆ 8 ಗಂಟೆಗೆ ಈ ಟನೆ ನಡೆದಿದ್ದು, ಕಾಂಗ್ರೆಸ್ ಪ್ರಭಾವಿ ನಾಯಕರಿಗೆ 8 ಗಂಟೆ ನಂತರ ತಹಸೀಲ್ದಾರ ಕಚೇರಿಯಲ್ಲಿ ಏನು ಕೆಲಸ ಎಂದು ಪ್ರಶ್ನಿಸಿದರು. ಉಪತಹಸೀಲ್ದಾರ ಅವರನ್ನು ಅಮಾನತ್ತಿನಲ್ಲಿ ಇಡಲು ಆದೇಶಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಆದರೆ, ಗುಂಡಾ ವರ್ತನೆ ತೋರಿದ ಉಪ ತಹಸೀಲ್ದಾರ ಅವರನ್ನು ಕೆಲಸದಿಂದ ಖಾಯಂ ಅಮಾನತ್ತು ಮಾಡಬೇಕು ಎಂದು ಸಿ.ಸಿ. ಪಾಟೀಲ ಒತ್ತಾಯಿಸಿದರು. ಕಾಂಗ್ರೆಸ್ ನಾಯಕರು ಮತ್ತು ಉಪತಹಸೀಲ್ದಾರ ದುರ್ನಡತೆ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ದೂರು ಸಲ್ಲಿಸಿದ್ದೇವೆ ಎಂದು ಸಿ. ಸಿ. ಪಾಟೀಲ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಶಾಸಕರಾದ ಎಸ್.ವಿ. ಸಂಕನೂರು, ಚಂದ್ರು ಲಮಾಣಿ, ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಸ್. ಕರೀಗೌಡರ್, ಉಷಾ ದಾಸರ, ಎಂ. ಎಂ. ಹಿರೇಮಠ ಇತರರು ಇದ್ದರು.
ದೇಶದಲ್ಲಿ ಪಾಕಿಸ್ತಾನಕ್ಕೆ ಎರಡು ದೂತವಾಸ ಕಚೇರಿಗಳಿವೆ. ಒಂದು ಅಧಿಕೃತ ಕಚೇರಿ ಇದೆ. ಮತ್ತೊಂದು ಕಾಂಗ್ರೆಸ್ ಪಕ್ಷದ ದಿಲ್ಲಿಯ ಕೇಂದ್ರ ಕಚೇರಿ ಅನಧಿಕೃತ ಕೇಂದ್ರ ಕಚೇರಿ ಆಗಿದೆ. ದೇಶ ಪ್ರೇಮದ ಪಾಠವನ್ನು ಕಾಂಗ್ರೆಸ್ ಮುಖಂಡರು ಅವರ ಶಾಸಕರಿಗೆ ಹೇಳಿ ಕೊಡಬೇಕಿದೆ.
ಸಿ. ಸಿ. ಪಾಟೀಲ, ಶಾಸಕ