ಕ್ಯಾನ್ಸರ ಹಾಗೂ ಚರ್ಮ ಸುರತೆ ಕುರಿತು ಜಾಗೃತಿ ಕಾರ್ಯಕ್ರಮ

18GDG03
Published on

ವಿಜಯವಾಣಿ ಸುದ್ದಿಜಾಲ ಗದಗ

ಸದೃಢ ಯುವಕರಿಂದ ಸದೃಢ ದೇಶ ನಿರ್ಮಾಣಗೊಳ್ಳಲು ಸಾಧ್ಯ. ವಿದ್ಯಾಥಿರ್ಗಳು ದುಶ್ಛಟಗಳಿಂದ ದೂರವಿದ್ದು ಆರೋಗ್ಯಕರ ಹವ್ಯಾಸಗಳನ್ನು ರೂಢೀಸಿಕೊಳ್ಳಬೇಕು ಎಂದು ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ಡಾ. ಸಂಜೀವ ಕುಲಕಣಿರ್ ಹೇಳಿದರು.

ಲಯನ್ಸ್​ ಶಾಲೆಯ ಸಭಾಂಗಣದಲ್ಲಿ ಬುಧವಾರ ಕ್ಯಾನ್ಸರ ಹಾಗೂ ಚರ್ಮ ಸುರತೆ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾಥಿರ್ಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಧೂಮಪಾನ, ತಂಬಾಕು ಜಗಿಯುವದು ಹಾಗೂ ಮದ್ಯಪಾನ ಕ್ಯಾನ್ಸರಗೆ ಪ್ರಮುಖ ಕಾರಣಗಳಾಗಿವೆ. ಯುವಕರು ಅದರಲ್ಲೂ ವಿಶೇಷವಾಗಿ ಹೈಸ್ಕೂಲ್​ ಕಾಲೇಜ್​ ವಿದ್ಯಾಥಿರ್ಗಳು ಉತ್ತಮ ಹವ್ಯಾಸಗಳನ್ನು ರೂಢೀಸಿಕೊಳ್ಳಬೇಕು. ಪೌಷ್ಠಿಕ ಮತ್ತು ಸಾತ್ವಿಕ ಆಹಾರ ಸೇವನೆ, ವಾಯು ವಿಹಾರ, ಯೋಗ, ಧ್ಯಾನ, ಆಧ್ಯಾತ್ಮಿಕತೆಯಿಂದ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡರೆ ಜೀವನ ಸನ್ಮಾರ್ಗದಲ್ಲಿ ಹಾಗೂ ಸದೃಢ ಆರೋಗ್ಯದಲ್ಲಿ ಸಾಗುವದು ಎಂದರು.

ಡಾ. ಸುಪ್ರೀತ್​ ಮಾತನಾಡಿ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್​ ಕಾರಣಗಳು, ಅಪಾಯಕಾರಿ ಅಂಶಗಳು, ಲಣಗಳು ಮತ್ತು ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ವಿದ್ಯಾಥಿರ್ಗಳಿಗೆ ಮಾಹಿತಿ ನೀಡಿದರು. ಡಾ. ತುಕಾರಾಂ ಸೋರಿ, ರಾಜು ವೇರ್ಣೆಕರ, ರಾಜಣ್ಣ ಮಲ್ಲಾಡದ, ರೇಣುಕಪ್ರಸಾದ ಹಿರೇಮಠ, ರಮೇಶ ಶಿಗ್ಲಿ, ಮಂಜುನಾಥ ವೀರಲಿಂಗಯ್ಯನಮಠ, ವೀರಣ್ಣ ಪಟ್ಟಣಶೆಟ್ಟಿ, ಶ್ಯಾಮ್​ ಮಿಸ್ಕಿನ್​, ಪೂಜಾ ಪಾಟೀಲ, ಸುರೇಖಾ ಮಲ್ಲಾಡದ, ವೀಣಾ ಸುಲಾಖೆ, ಅನುರಾಧಾ ಮಿಸ್ಕಿನ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net