ರಾಜೀನಾಮೆ ಭಯದಿಂದ ಜಾತಿಗಣತಿಯ ಗಾಳ: ಬಿ.ವೈ. ವಿಜಯೇಂದ್ರ

yediyurappa-son-vijayendra-1699622083
Published on

ವಿಜಯವಾಣಿ ಸುದ್ದಿಜಾಲ ಗದಗ
ಸಿಎಂ ರಾಜೀನಾಮೆ ಕೊಡುವ ಪರಿಸ್ಥಿತಿ ಸೃಷ್ಟಿ ಆಗಿದೆ. ಆ ಭಯದಿಂದ ಜಾತಿಗಣತಿ ಗಾಳ ಉರುಳಿಸುವ ಪ್ರಯತ್ನವನ್ನು ಸಿದ್ಧರಾಮಯ್ಯ ಮಾಡಿದ್ದಾರೆ. ಆದರೆ ಸಿಎಂ ಸ್ಥಾನ ಉಳಿಯಲು ಸಾಧ್ಯವೇ ಇಲ್ಲ. ಕೆಲವೇ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ನಡೆಯಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ. ವೈ. ವಿಜಯೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಂದರ್ಭದಲ್ಲಿದ್ದಾರೆ. ಕಾಂಗ್ರೆಸ್​ ಹೈಕಮಾಂಡ್​ ಕೂಡಾ ನಿರ್ಧಾರ ಮಾಡಿಯಾಗಿದೆ. ಬಿಜೆಪಿ -ಜೆಡಿಎಸ್​ ಪಾದಯಾತ್ರೆ ಪರಿಣಾಮ ಸಿಎಂ ರಾಜೀನಾಮೆ ಕೊಡುತ್ತಿದ್ದಾರೆ. ಮುಡಾದಲ್ಲಿ ಹಗರಣ ಆಗಿದೆ ಎಂದು ಸಿಎಂ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಸೈಟ್​ ಕೂಡಾ ಮರಳಿ ಕೊಟ್ಟಿದ್ದಾರೆ ಎಂದು ಪುರುಚ್ಚರಿಸಿದರು.
ಭಂಡತನ ಮುಂದುವರೆಸಲು ಬಹಳ ದಿನ ಸಾಧ್ಯವಿಲ್ಲ. ಕಾಂಗ್ರೆಸ್​ ನಲ್ಲಿರುವ ಆಕಾಂಕ್ಷಿಗಳು ಚಾತಕ ಪಕ್ಷಿಯಂತೆ ಸಿಎಂ ಕಾಯುತ್ತಿದ್ದಾರೆ. ಸಿಎಂ ರಾಜೀನಾಮೆ ನೀಡುವುದು ಸತ್ಯ, ಅತಿ ಶ್ರೀದಲ್ಲೇ ನಿಮಗೆಲ್ಲಾ ಮಾಹಿತಿ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಸಚಿವ ಸತೀಶ್​ ಜಾರಕಿಹೊಳಿ ಭೇಟಿ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಿಜೆಪಿ ರಾಜ್ಯಾಧ್ಯಕ್ಷ ಅನ್ನುವುದು ಎಷ್ಟು ಸತ್ಯವೋ ಶಿಕಾರಿಪುರ ಶಾಸಕ ಅನ್ನುವುದು ಅಷ್ಟೆ ಸತ್ಯ. ನಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ತಾಲೂಕಿನಿಂದ ಬಂದ ನಿಯೋಗ ತೆಗೆದುಕೊಂಡು ಭೇಟಿ ಆಗಿದ್ದೇನೆ. ಆದರೆ ನಾವು ವಿರೋಧ ಪಕ್ಷದಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ್ದೇವೆ ಎನ್ನುವ ಸಂತೋಷ ನಮಗಿದೆ ಎಂದರು.

ಸಿಎಂ ಖುಷಿ ಪಡಿಸುವ ಕೆಲಸ:
ಸಿದ್ದರಾಮಯ್ಯ ಅವರನ್ನು ಖುಷಿ ಪಡೆಸಿದರೆ ಸಿಎಂ ಸ್ಥಾನಕ್ಕೆ ನನ್ನ ಹೆಸರನ್ನು ಹೇಳುತ್ತಾರೆ ಎನ್ನುವ ಕಾರಣಕ್ಕಾಗಿ ಸಿಎಂ ಸಿದ್ಧರಾಮಯ್ಯ ಅವರೇ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಹಲವರು ಹೇಳುತ್ತಿದ್ದಾರೆ. ಅವರಲ್ಲಿ ಯಾರಲ್ಲೂ ಪ್ರಾಮಾಣಿಕತೆ ಇಲ್ಲ. ಸಿಎಂ ಕೆಳಗಿಳಿಯುವುದನ್ನೇ ಎಲ್ಲರೂ ಕಾಯುತ್ತಿದ್ದಾರೆ. ಯಾರ ಬಳಿ ಎಷ್ಟು ಜನ ಇದ್ದಾರೆ ಎಂದು ತೋರಿಸುವ ಸಾಹಸವನ್ನು ಕೆಲವು ಕಾಂಗ್ರೆಸ್​ ನಾಯಕರು ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net