ನಗರ ಸಭೆಯ 2025-26ರ ಮುಂಗಡ ಪತ್ರಕ್ಕೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಲಹೆಗಳು

03GDG04
Published on

ಗದಗ: ನಗರ ಸಭೆಯ 2025-2026ನೇ ಸಾಲಿಗೆ ಆಯವ್ಯಯ ಸಭೆಯಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿAದ ಪಾಲ್ಗೊಂಡು ಈ ಕೆಳಗಿನವುಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅವಳಿ ನಗರವನ್ನು ಅಭಿವೃದ್ಧಿಯೊಂದಿಗೆ ಸೌಂದರ್ಯಕರಣಗೊಳಿಸಬೇಕೆAದು ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಉಪ ಸಮಿತಿ ಚೇರಮನ್ನರಾದ ಶ್ರೀ ಅರವಿಂದ ವ್ಹಿ. ಪಟೇಲ್ ಇವರು ಸಭೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆಗಳೊಂದಿಗೆ ಮಾನ್ಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಅವಳಿ ನಗರದಲ್ಲಿ ಇರುವಂತಹ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವುದು, ವ್ಯಾಪಾರಸ್ಥರಿಗೆ ಕೈಗಾರಿಕೋದ್ಯಮಿಗಳಿಗೆ ಹಾಗೂ ಹೊಟೇಲ್ ಉದ್ಯಮಿಗಳಿಗೆ ನೀಡುತ್ತಿರುವ ಟ್ರೇಡ ಲೈಸನ್ಸ (ಡಿ.ಓ.ಟಿ.) ಸರ್ಕಾರವು ರದ್ದು ಪಡಿಸಿದ್ದು, ಆದರೆ ನಗರ ಸಭೆಯವರು ಪುನಃ ಡಿ.ಓ.ಟಿ. ಲೈಸನ್ಸ ನೀಡುವಂತೆ ಸೂಚಿಸುತ್ತಿದ್ದಾರೆ. ಕಾರಣ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ವಿನಂತಿಸಿಲಾಯಿತು. ಅವಳಿ ನಗರದಲ್ಲಿ 24-7 ನೀರಿನ ಪೈಪ್‌ಲೈನ್ ಅಳವಡಿಸಿರುತ್ತಾರೆ.ಪ್ರತಿ ತಿಂಗಳು ನೀರಿನ ಬಿಲ್‌ಗಳನ್ನು ಕೋಡುತ್ತಾರೆ. ಆದರೆ ನೀರು ಪೂರೈಕೆ ಆಗುತ್ತಿಲ್ಲ ಆದ್ದರಿಂದ ಅವಳಿ ನಗರದಲ್ಲಿ 24-7 ನೀರಿನ ಸರಬರಾಜು ಸರಿಯಾಗಿ ಮಾಡುವುದು, ತುಂಗಭದ್ರಾ ನದಿಯಿಂದ ನೀರು 2-3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವುದು, ಅವಳಿ ನಗರದಲ್ಲಿ ಇರುವಂತಹ ಅನೇಕ ರಸ್ತೆಗಳನ್ನು ಸಿ.ಸಿ. ರಸ್ತೆಯನ್ನಾಗಿ ಪರಿವರ್ತಿಸಲು ಹಣ ಕಾಯ್ದಿರಿಸುವುದು, ಫಾರ್ಮ ನಂ:3 ನೀಡಲು ಸಾಕಷ್ಟು ವಿಳಂಭವಾಗುತ್ತಿದೆ. ಕಾರಣ ಶೀಘ್ರದಲ್ಲಿ ಫಾರ್ಮ ನಂ:3 ನೀಡಲು ಕ್ರಮ ಕೈಗೊಳ್ಳವುದು, ಭೀಷ್ಮಕೆರೆ ಸುತ್ತ ಮುತ್ತಲು ಆಸನ ವ್ಯವಸ್ಥೆ ಮತ್ತು ಸುತ್ತಲು ಬೇಲಿ ನಿರ್ಮಿಸುವುದು,

ಅವಳಿ ನಗರದಲ್ಲಿ ಈಗಾಗಲೇ ಬಣ್ಣ ಬಣ್ಣ ದೀಪಗಳನ್ನು ಅವಳಡಿಸಿದ್ದು, ಆದರೆ ಈಗ ಅವುಗಳು ಸಂಪೂರ್ಣವಾಗಿ ಹಾಳಾಗಿರುತ್ತವೆ. ಅವುಗಳನ್ನು ಪುನಶ್ಚೇತನಗೊಳಿಸಲು ಹಣ ಕಾಯ್ದಿರಿಸುವುದು, ಇನ್ನೂ ಮಹಾತ್ಮಾಗಾಂಧಿಜೀ ವೃತ್ತದಿಂದ ಹುಯಿಲಗೋಳ ನಾರಾಯಣ ವೃತ್ತ, ನಾಮಜೋಶಿ ರಸ್ತೆ, ಬ್ಯಾಂಕ ರೋಡಿನಲ್ಲಿ ಯಾವುದೇ ಶೌಚಾಲಯ ಇಲ್ಲದೇ ಪರ ಊರಿನಿಂದ ಬರುವಂತಹ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರ ತೊಂದರೆಯಾಗಿದೆ, ಕಾರಣ ಪ್ರಮುಖ ಸ್ಥಳಗಳಲ್ಲಿ ಮೂತ್ರಾಲಯ ಹಾಗೂ ಶೌಚಾಲಯ ನಿರ್ಮಾಣ ಮಾಡುವುದು, ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಸ್ವಚ್ಚತೆಯ ಬಗ್ಗೆ ಸಾಕಷ್ಟು ನಿರ್ಲಕ್ಷತೆ ಕಾಣುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಆದರಿಂದ ಅವಳಿ ನಗರಕ್ಕೆ ವ್ಯಾಕ್ಯೂಮ್ ಕ್ಲೀನರ ವಾಹನ ಖರೀದಿಸಿ ನಗರ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವುದು,

ಗದಗ ಬೆಟಗೇರಿ ಅವಳಿ ನಗರದಲ್ಲಿ ಒಳಚರಂಡಿ ಕಾಮಗಾರಿಯನ್ನು 10-12 ವರ್ಷಗಳ ಹಿಂದೆ ಕೈಗೊಂಡಿದ್ದು, ಆದರೆ ಇದೂವರೆಗೂ ಪೂರ್ಣಗೊಂಡಿರುವುದಿಲ್ಲ, ಕಾಮಗಾರಿ ತೀವೃಗತಿಯಲ್ಲಿ ಪೂರ್ಣಗೊಳಿಸಲು ಹಣವನ್ನು ಕಾಯ್ದಿರಿಸುವುದು, 2005-2006ನೇ ಹಣಕಾಸು ವರ್ಷದಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಆಕರಣೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ.ಅದನ್ನು ಇನ್ನು ಮುಂದೆ ಕಡಿಮೆ ಮಾಡುವುದು, ಸ್ವಂತ ವಸತಿ ಆಸ್ತಿ ಹೊಂದಿರುವವರಿಗೆ ಶೇ, 50 ರಷ್ಟು ತೆರಿಗೆ ಆಕರಣೆಯಲ್ಲಿ ರಿಯಾಯತಿ ಇರುವಂತೆ ಸ್ವಂತ ನಿವೇಶದಲ್ಲಿ ವಾಣಿಜ್ಯ, ಉದ್ದಿಮೆ ಹಾಗೂ ವ್ಯಾಪಾರ ಸಲುವಾಗಿ ಕಟ್ಟಡ ಹೊಂದಿದವರಿಗೂ ಕೂಡ ಈ ರಿಯಾಯತಿ ಅನ್ವಯವಾಗಬೇಕು. ಈಗಾಗಲೇ ಬೆಂಗಳೂರ ಮಹಾನಗರ ಪಾಲಿಕೆಯಲ್ಲಿ ಅಳವಡಿಸಲಾಗಿದೆ. ಅದನ್ನು ಗದಗ ನಗರದಲ್ಲಿ ಕಡಿಮೆ ಮಾಡುವುದು, ಸ್ವಯಂ ಘೋಷಿತ ಆಸ್ತಿ ತೆರಿಗೆ ಪರಿಷ್ಕರಣೆ ಪ್ರತಿ ಮೂರು ವರ್ಷಕ್ಕೆ ಶೇ, 15 ರಿಂದ 30 ರಷ್ಟು ಹೆಚ್ಚಳ ಮಾಡುತ್ತಾ ಬಂದಿರುತ್ತಾರೆ. ಅದನ್ನು ಮುಂಬರುವ ದಿನಗಳಲ್ಲಿ ಸ್ವಂತ ವಸತಿ-ನಿವೇಶನ ಹೊಂದಿರುವವರಿಗೆ ಶೇ, 5 ಹಾಗೂ ವಾಣಿಜ್ಯ ಕಟ್ಟಡಕ್ಕೆ ಶೇ, 10 ರಷ್ಟು ಹೆಚ್ಚಳ ಮಾಡುವುದು ಸೂಕ್ತವಾಗಿದೆ. ಜವಳ ನಾಲಾ ಮೇಲೆ ಈಗಾಗಲೇ ಸ್ಲಾö್ಯಬ್ ಹಾಕಿದ್ದು, ಅಲ್ಲಿ ಸಾರ್ವಜನಿಕರ ವಾಹನ ನಿಲುಗಡೆಗೆ ಅವಕಾಶ ಮಾಡಬೇಕು ಇದರಿಂದ ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಕಳೆದ ಸಾಲಿನ ಮುಂಗಡ ಪತ್ರದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಮನವಿಯನ್ನು ನೀಡಿದ್ದು ಅವುಗಳ ಇದುವರೆಗೂ ಕರ‍್ಯರೂಪಕ್ಕೆ ಬಂದಿರುವುದಿಲ್ಲ. ಕಾರಣ ಶೀಘ್ರದಲ್ಲಿ ಕರ‍್ಯರೂಪಕ್ಕೆ ತರಬೇಕೆಂದು ಒತ್ತಾಯಿಸಿದರು.

ಅವಳಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕರ‍್ಯಗಳು ಆಗಬೇಕಾಗಿದ್ದು, ಅವುಗಳನ್ನು ಶೀಘ್ರದಲ್ಲಿ ಕರ‍್ಯರೂಪಕ್ಕೆ ತಂದು ಇಡೀ ರಾಜ್ಯದಲ್ಲಿಯೇ ಗದಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ತಾತನಗೌಡ ಎಸ್.ಪಾಟೀಲ ಇವರು ಮನವಿ ಮಾಡಿರುತ್ತಾರೆಂದು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಅಶೋಕಗೌಡ ಕೆ.ಪಾಟೀಲ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net