ಫೆ 29 ರಂದು ಬಿಎಸ್ಪಿ ಪದಾಧಿಕಾರಿಗಳ ಕಾರ್ಯಕ್ರಮ. ಬಸವರಾಜ ನವಲಗುಂದ

fa73c7b1-604e-4345-b4d9-45309caa82fa
Published on

ಗದಗ: ಗರದ ಬಿಎಸ್ಪಿ ಕಚೇರಿಯಲ್ಲಿ ಫೆ 29 ರಂದು ಬೆಳಗ್ಗೆ 11 ಕ್ಕೆ ಜಿಲ್ಲಾ ಬಿಎಸ್ಪಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಜರುಗಲಿದೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಸಂಯೋಜಕ ಬಸವರಾಜ ನವಲಗುಂದ ಹೇಳಿದರು.

ಅವರು‌ ಸೋಮವಾರ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮಕ್ಕೆ‌ ಅತಿಥಿಗಳಾಗಿ ಬೆಳಗಾವಿ ವಲಯ ಉಸ್ತುವಾರಿ ಕಲ್ಲಪ್ಪ ತೊರವಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು, ಒಂದು ಧರ್ಮ ಒಡೆಯುತ್ತಿದ್ದರೆ, ಇನ್ನೊಬ್ಬರು ದೇಶ ಒಡೆಯುತ್ತಿದ್ದಾರೆ. 77 ವರ್ಷಗಳ ನಂತರ ಕಾಂಗ್ರೆಸ್ ನವರಿಗೆ ಸಂವಿಧಾನದ ಜಾಥಾ ಇವತ್ತು ನೆನಪಾಗಿದೆ. 

ಪರಿಶಿಷ್ಟ, ಪರಿಶಿಷ್ಟ ಪಂಗಡ ಸೇರಿದಂತೆ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ, ಬಡವರಿಗೆ ಇಂದಿಗೂ ಸೂರು ಕೊಡಲು ಆಗಿಲ್ಲ. ಆದರೆ ಮಾಯಾವತಿ ಹಲವಾರು ವರ್ಷಗಳ ಹಿಂದೆಯೇ ಇದನ್ನು ಮಾಡಿ ತೋರಿಸಿದ್ದಾರೆ. ಮೋದಿ ಅವರು ಮತ್ತೆ 10 ಕೋಟಿ ಮನೆಗಳನ್ನು ಕೊಡುತ್ತೇವೆ ಎಂದು ಹೇಳಿರುವುದು ಹಾಸ್ಯಾಸ್ಪದ.

ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ಉತ್ತಮವಾಗಿದ್ದು ಈ ಬಾರಿ ಬಿಎಸ್ಪಿ ಎಲ್ಲಾ 28 ಕ್ಷೇತ್ರದಲ್ಲಿ ಸ್ವತಂತ್ರ್ಯವಾಗಿ‌ ಸ್ಪರ್ಧಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಶಶಿಕುಮಾರ ಭಾವಿಮನಿ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಕಡೇಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹುಬ್ಬಳ್ಳಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net