ಗದಗ ಹೊಂಬಳ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೆತುವೆ ಕಾಮಗಾರಿ ಪರಿಶೀಲಿಸಿದ ಸಂಸದ ಬಸವರಾಜ ಬೊಮ್ಮಾಯಿ

27GDG06A
Published on

ಐದಾರು ತಿಂಗಳಲ್ಲಿ ಕಾಮಗಾರಿ ರ್ಪೂಣಗೊಳಿಸುವ ಭರವಸೆ: ಬಸವರಾಜ ಬೊಮ್ಮಾಯಿ

ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿ

ವಿಜಯವಾಣಿ ಸುದ್ದಿಜಾಲ ಗದಗ

ನಗರದ ಗಂಗಾಪುರ ಪೇಟೆಯಲ್ಲಿರುವ ಗದಗ ಹಾಗೂ ಹೊಂಬಳ ಸಂಪರ್ಕ ಕಲ್ಪಿಸುವ ನಿರ್ಮಾಣ ಹಂತದಲ್ಲಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ಬಸವರಾಜ ಬೊಮ್ಮಾಯಿ ಶುಕ್ರವಾರ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಐದಾರು ತಿಂಗಳಲ್ಲಿ ರ್ಪೂಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪ್ರತಿಕ್ರಿತಿಸಿದರು.

ನಿರ್ಮಾಣ ಹಂತದಲ್ಲಿರುವ ರೈಲ್ವೆ ಸೇತುವೆ ಕಾಮಗಾರಿಯ ಪರಿಶೀಲನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಂಬಳ ಗ್ರಾಮೀಣ ಪ್ರದೇಶದಿಂದ ಅಂಬೇಡ್ಕರ್​ ನಗರದ ಮೂಲಕ ಹಾಯ್ದು ಹೋಗುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಲಾಯಿತು. ಕಳೆದ ಕೆಲ ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಮೂರು ತಿಂಗಳ ಹಿಂದೆ ಈ ಕಾಮಗಾರಿಯ ಕುರಿತು ಹುಬ್ಬಳಿಯ ನೈರುತ್ಯ ರೈಲ್ವೆ ವಲಯ ಅಧಿಕಾರಿಗಳ ಜೊತೆ ಸಭೆ ಮಾಡಿದಾಗ ಕೂಡಲೆ ಕಾಮಗಾರಿ ಪ್ರಾರಂಭ ಮಾಡುವುದಾಗಿ ಹೇಳಿದ್ದರು. ಅದೇ ರೀತಿ ಕ್ರಮ ಕೈಗೊಂಡಿದ್ದಾರೆ. ಹೊಸ ಗುತ್ತಿಗೆದಾರರನ್ನು ನೇಮಿಸಲಾಗಿದೆ. ಕಾಮಗಾರಿ ಸದಸ್ಯದಲ್ಲೇ ಪ್ರಾರಂಭ ಆಗಲಿದೆ ಎಂದು ತಿಳಿಸಿದರು.

ರೈಲ್ವೆ ಶೆತುವೆ ಜತೆಗೆ ಸ್ಥಳದಲ್ಲಿ ಎರಡು ಮೂರು ಕಾಮಗಾರಿಗಳ ಕುರಿತು ಚರ್ಚೆ ಮಾಡಲಾಗಿದೆ. ಅಂಬೇಡ್ಕರ್​ ನಗರದಲ್ಲಿನ 80 ಮೀಟರ್​ ಕುಡಿಯುವ ನೀರಿನ ಪೈಪ್​ ಲೈನ್​ ಬದಲಾವಣೆ ಮಾಡಬೇಕಿತ್ತು. ಅಂಬೇಡ್ಕರ್​ ನಗರದ ನಿವಾಸಿಗಳು ಒಳ ಚರಂಡಿ ವ್ಯವಸ್ಥೆ ಸುಧಾರಣೆ ಸೇರಿದಂತೆ ಕೆಲವು ಬೇಡಿಕೆ ಇಟ್ಟಿದ್ದಾರೆ. ಅಂಬೇಡ್ಕರ್​ ನಗರ ಬಡವರು ಇರುವಂತಹ ಪ್ರದೇಶ ಈ ಕುರಿತು ಈ ಪ್ರದೇಶದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಹಾಯಕ ಆಯುಕ್ತ ಗಂಗಪ್ಪ ಅವರಿಗೆ ಸೂಚನೆ ನೀಡಿದ್ದೇನೆ. ಅವರು ಕೂಡಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗನೆ ಹೊಂಬಳ ಮತ್ತು ಅಂಬೇಡ್ಕರ್​ ನಗರದ ಕಡೆಗಿನ ಎರಡೂ ಕಾಮಗಾರಿ ರ್ಪೂಣಗೊಳ್ಳಲಿವೆ ಎಂದರು.

ಸ್ಟೀಲ್​ ಬ್ರಿಡ್ಜ್​:

ರೈಲ್ವೆ ಹಳಿ ಮೇಲೆ 42 ಮೀಟರ್​ನ ಸ್ಟೀಲ್​ ಬ್ರಿಡ್ಜ ಬರಲಿದೆ. ಇನ್ನೊಂದು ಹದಿನೈದು ದಿನಗಳಲ್ಲಿ ಅದನ್ನು ಜೋಡಿಸಲಾಗುತ್ತದೆ. ಐದಾರು ತಿಂಗಳಲ್ಲಿ ಈ ಕಾಮಗಾರಿಯನ್ನು ರ್ಪೂಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಆಸಕ್ತಿ ತೆಗೆದುಕೊಂಡಿದ್ದಾರೆ. ಮೇಲಿಂದ ಮೇಲೆ ಯೋಜನೆಯ ಪ್ರಗತಿ ಪರಿಶೀಲನೆ ಮಾಡಲಾಗುವುದು ಎಂದರು.

ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು, ಜಿಲ್ಲಾಧ್ಯಕ್ಷ ರಾಜು ಕುರಡಗಿ, ನಗರಾಧ್ಯಕ್ಷ ಅನಿಲ ಅಬ್ಬಿಗೇರಿ, ಚಂದ್ರು ತಡಸದ, ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

ವಿಜಯವಾಣಿ ವರದಿ:

ಗದಗ ಹೊಂಬಳ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತವೆ ಕಾಮಗಾರಿ ನಾನಾ ಕಾರಣಗಳಿಂದ ಕಳೆದ ಎಂಟು ತಿಂಗಳಿಂದ ಸ್ಥಗಿತಗೊಂಡ ಕುರಿತು ಕಳೆದ ಸೆಪ್ಟಂಬರ್​ ತಿಂಗಳಲ್ಲಿ ವಿಜಯವಾಣಿ ವರದಿ ಪ್ರಕಟಿಸಿತ್ತು. ಈ ಭಾಗದ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿತ್ತು. ಗುತ್ತಿಗೆದಾರರ ವಿಳಂಬ ಧೋರಣೆ, ಕಚ್ಚಾ ಸಾಮಗ್ರಿಗಳ ಬೆಲೆ ಅಧಿಕಗೊಂಡಿದ್ದು ಮತ್ತು ಆಡಳಿತಾತ್ಮ, ತಾಂತ್ರಿಕ ಸಮಸ್ಯೆಯಿಂದಾಗಿ 2017ರಲ್ಲಿ ಆರಂಭಗೊಂಡ ಕಾಮಗಾರಿ ಈ ವರೆಗೂ ರ್ಪೂಣಗೊಂಡಿಲ್ಲ. ನಗರದ ಗಂಗಾಪೂರ ಪೇಟೆ ಬಳಿ ಹುಬ್ಬಳ್ಳಿ&ವಿಜಯಪು ರೈಲ್ವೆ ಸಂಪರ್ಕವಿದ್ದು, ಗಂಗಾಪೂರ ಪೇಟೆಯಿಂದ ಹೊಂಬಳ ಗ್ರಾಮ, ಲಿಂಗದಾಳ ಮತ್ತು ಕೃಷ್ಣ ನಗರದ ಜನರು ಸಂಚರಿಸಲು ತೊಂದರೆ ಆಗುತ್ತಿದೆ. ಗದಗ ಹಾಗೂ ನರಗುಂದ ತಾಲೂಕಿಗೆ ಸಂಪಕಿರ್ ಕಲ್ಪಿಸುವ ನಗರದ ಎರಡೂ ಮಾರ್ಗಗಳಲ್ಲಿ ಈ ಮಾರ್ಗವೂ ಒಂದಾಗಿದೆ. ನರಗುಂದ&ಹೊಂಬಳ&ಗದಗ(ಗಂಗಾಪೂರ ಪೇಟೆ) ಮಾರ್ಗದಲ್ಲಿ ಸಂಚಾರ ದಟ್ಟಣೆ ಕಾರಣ 2017&18ರಲ್ಲಿ 16 ಕೋಟಿ ವೆಚ್ಚದಲ್ಲಿ ಬ್ರಿಡ್ಜ ಕಾಮಗಾಗಿ ಕೈಗೊಳ್ಳಲಾಗಿತ್ತು. ಕೋವಿಡ್​ ನಿಂದ ಕಾಮಗಾರಿ ಸ್ಥಗಿತಗೊಂಡ ನಂತರ ಕಟ್ಟಡ ಸಾಮಗ್ರಿಗಳ ಬೆಲೆ ಏಕಾಏಕಿ ದ್ವಿಗುಣಗೊಂಡ ಕಾರಣ ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಹಿಂದೇಟು ಹಾಕಿದ್ದರು. ಹಾಗಾಗಿ ಹಳೆಯ ಗುತ್ತಿಗೆದಾರನ ಜತೆಗೆ ಒಪ್ಪಂದ ಮೇರೆಗೆ 16 ಕೋಟಿಯ ಯೋಜನೆ ಮೊತ್ತದ ಜತೆಗೆ ಹೆಚ್ಚುವರಿ 7 ಕೋಟಿ ಮೊತ್ತ ಸೇರಿಸಿ ಹೊಸ ಗುತ್ತಿಗೆದಾರ ಕಾಮಗಾರಿಯನ್ನು ಗುತ್ತಿಗೆ ನೀಡಲಾದ ಬಗ್ಗೆ ವಿಜಯವಾಣಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net