

ವಿಜಯವಾಣಿ ಸುದ್ದಿಜಾಲ ಗದಗ
ಕೃಷಿಯಲ್ಲಿ ಶೇ.1 ರಷ್ಟು ಅಭಿವೃದ್ಧಿಯಿಂದ ಕೈಗಾರಿಕೆಯಲ್ಲಿ ಶೇ. 4 ರಷ್ಟು ಮತ್ತು ಸೇವಾ ವಲಯದಲ್ಲಿ ಶೇ.10 ರಷ್ಟು ಬೆಳವಣಿಗೆ ಆಗುತ್ತದೆ. ಅದಕ್ಕಾಗಿ ಕೃಷಿ ವಲಯಕ್ಕೆ ಸಾಲ ನೀಡಲು ಹಿಂಜರಿಯಬಾರದು ಮತ್ತು ಪ್ರತಿ ವರ್ಷ ಸಾಲ ನೀಡಿಕೆ ಗುರಿ ಏರಿಕೆ ಆಗಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ ಏರ್ಪಡಿಸಿದ್ದ ಬ್ಯಾಂಕರ್ಸ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಸಾಲ ನೀಡಿಕೆ ಬಗ್ಗೆ ಬೇಸರ ವ್ಯಕ್ತ ಪಡಿಸಿ, ಪ್ರತಿವರ್ಷ ಕೃಷಿ ಸಾಲ ನೀಡಿಕೆ ಮೊತ್ತ ಒಂದೇ ಆಗಿರುತ್ತದೆ. ಪ್ರತಿ ವರ್ಷ ಸಾಲ ನೀಡಿಕೆ ಮೊತ್ತ ಏರಿಕೆ ಆಗಬೇಕು. ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಠೇವಣಿ ಮತ್ತು ಸಾಲದ ಬಗ್ಗೆ ಜಿಪಂ ಸಿಇಓ ಗಮನ ಹರಿಸಬೇಕು. ಪ್ರತಿ ತಿಂಗಳು ಬ್ಯಾಂಕ್ಗಳ ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಿಗೆ ಬ್ಯಾಂಕ್ಗಳು ಸಾಲ ನೀಡಿಕೆಗೆ ಆಧ್ಯತೆ ನೀಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಬ್ಯಾಂಕರ್ಗಳು ಕಚೇರಿ ರ್ಕುಚಿಗೆ ಅಂಟಿಕೊಂಡೇ ಇರುತ್ತಾರೆ. ಕಚೇರಿಗೆ ಬಂದ ವ್ಯವಹಾರವಷ್ಟೇ ನಿಗಾವಹಿಸಿದರಷ್ಟೇ ಹೇಗೆ ಎಂದು ಅವರು ಪ್ರಶ್ನಿಸಿದರು. ಆಹಾರ ಸಂಸ್ಕರಣ ಟಕಗಳಿಗೆ ಬ್ಯಾಂಕ್ಗಳು ಸಾಲ ನೀಡುತ್ತಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಿಗಳು ಅಗತ್ಯ ಸಾಲ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಕೈಗಾರಿಕಾ ಸಾಲದ ಬಗ್ಗೆ ಬ್ಯಾಂಕ್ ಗಳು ಮುತುವಜಿರ್ ವಹಿಸಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಾಲ ನೀಡಲು ಬ್ಯಾಂಕ್ ಗಳು ಮುಂದಾಗಬೇಕು. ಕೃಷಿ, ಕೈಗಾರಿಕೆ, ಆಹಾರ ಸಂಸ್ಕರಣ ಟಕಗಳ ಅಭಿವೃದ್ಧಿಗೆ ಬ್ಯಾಂಕ್ ಸಾಲ ಮುಖ್ಯವಾಗಿರುತ್ತದೆ. ಇದರಿಂದ ಜನರ ಮತ್ತು ಗದಗ ಜಿಲ್ಲೆಯ ಆಥಿರ್ಕ ಅಭಿವೃದ್ಧಿ ಸಾಧ್ಯ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗೆ ಪೂರಕವಾಗಿ ಶೇಕಡಾವಾರು ಸಾಲ ನೀಡಿಕೆ ಅಧಿಕಗೊಳ್ಳಬೇಕು ಎಂದು ನಿರ್ದೇಶಿಸಿದ ಬೊಮ್ಮಾಯಿ, ಸಾಲ ನೀಡಿಕೆಯಲ್ಲಿ ಬ್ಯಾಂಕಗಳು ವಿಳಂಬ ಮಾಡಬಾರದು ಎಂದರು.
ಕೈಗಾರಿಕಾ ಮತ್ತು ವಾಣಿಜೋದ್ಯಮಕ್ಕೆ ಸಂಬಂಧಿಸಿದ ಸಾಲ ನೀಡಿಕೆ ಬಗ್ಗೆ ಪ್ರಶ್ನಿಸಿದ ಬೊಮ್ಮಾಯಿ ಕೈಗಾರಿಕಾ ಅಭಿವೃದ್ಧಿಗಾಗಿ ಬ್ಯಾಂಕ್ ಏಕೆ ಶ್ರಮವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಾಣಿಜ್ಯೋದ್ಯಮ ಸಂಸ್ಥೆಗಳ ಜತೆ ಸಭೆ ನಡೆಸಿ ಕೈಗಾರಿಕಾ ಸಾಲ ನೀಡಿಕೆ ಬಗ್ಗೆ ಗಮನ ಹರಿಸಬೇಕು. ವಸತಿ, ಶಿಕ್ಷಣ ಸೇರಿದಂತೆ ಇತರೆ ಸಾಲ ನೀಡಲು ಬ್ಯಾಂಕರ್ ಗಳು ಆಸಕ್ತಿ ವಹಿಸಬೇಕು ಎಂದು ಒತ್ತಾಯಿಸಿದರು.
ಮುದ್ರಾ ಯೋಜನೆ ಮತ್ತು ಪ್ರಧಾನಮಂತ್ರಿ ಅವಾಸ್ ಯೋಜನೆ, ಉದ್ಯೋಗಿನಿ ಸಾಲ ನೀಡಿಕೆ ಬಗ್ಗೆ ಚಚಿರ್ಸಿದ ಬೊಮ್ಮಾಯಿ, ಈ ಯೋಜನೆಗಳು ನಾಗರಿಕರಿಕರ ಅಭಿವೃದ್ಧಿ ಮತ್ತು ಅಗತ್ಯತೆಗಳನ್ನು ಪೂರೈಸುವ ಯೋಜನೆಗಳಾಗಿವೆ. ಜಿಲ್ಲೆಯ ಲೀಡ್ ಬ್ಯಾಂಕ್ ನಿರ್ವಾಹಕರು ಬ್ಯಾಂಕುಗಳ ಜತೆ ಚಚಿರ್ಸಿ ಅರ್ಹರಿಗೆ ಸಾಲ ಸಿಗುವಂತೆ ನೋಡಿಕೊಳ್ಳಬೇಕು. ಗದಗ ನಗರದಲ್ಲಿ ನೇಕಾರಿಕೆ ಮತ್ತು ಆಹಾರ ಸಂಸ್ಕರಣ ಟಕಗಳಿಗೆ ಪೂರಕ ವಾತಾವರಣ ಇದ್ದು, ಈ ಎರಡೂ ವಲಯಗಳಿಗೆ ಬ್ಯಾಂಕ್ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಕುರಿ ಮತ್ತು ಉಣ್ಣೆ ನಿಗಮ:
ಕಳೆದೆರಡೂ ವರ್ಷದಿಂದ ಕುರಿ ಮತ್ತು ಉಣ್ಣೆ ಅಭಿವೃದ್ಧಿಗೆ ಅನುದಾನ ಬಾರದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ಜರುಗಿತು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ 295 ಅಜಿರ್ಗಳು ಸಲ್ಲಿಕೆ ಆಗಿವೆ. ಅದರಲ್ಲಿ 258 ಅಜಿರ್ ಪುರಸ್ಕರಿಸಲಾಗಿದೆ. 139 ಅರ್ಹರಿಗೆ ಯೋಜನೆ ಅನುಷ್ಠಾನಗೊಂಡಿದೆ. ಆದರೆ 2024&-25 ಮತ್ತು 2025&-26 ನೇ ಸಾಲಿನಲ್ಲಿ ಅನುದಾನ ಬಂದಿಲ್ಲ ಎಂದು ಸಭೆಯಲ್ಲಿ ಚರ್ಚೆ ಜರುಗಿತು.
ಎನ್ಆರ್ಎಲ್ಎಂ:
ಕಳೆದ ವರ್ಷ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಗುರಿ ಸಾಧಿಸದ ಕುರಿತು ಚರ್ಚೆ ನಡೆಸಿದ ಬೊಮ್ಮಾಯಿ, ಕಳೆದ ವರ್ಷ ಯೋಜನೆಯಡಿ ಸ್ವಸಹಾಯ ಗುಂಪುಗಳಿಂದ 2500 ಅರ್ಹರಿಗೆ 90.85 ಕೋಟಿ ಸಾಲ, ಅನುದಾನ ನೀಡುವ ಗುರಿ ಹೊಂದಲಾಗಿತ್ತು. ಆದರೆ, ಕೇವಲ 1683 ಅರ್ಹರಿಗೆ 30.49 ಕೋಟಿ ಮಾತ್ರ ನೀಡಿಕೆ ಆಗಿದೆ. ಈ ಯೋಜನೆಯಲ್ಲಿ ಶೇ. 100 ರಷ್ಟು ಗುರಿ ಸಾಧಿಸಬೇಕು. ಸ್ವಸಹಾಯ ಗುಂಪುಗಳಿಂದ ಅಜಿರ್ ಸ್ವೀಕರಿಸದೇ ಬ್ಯಾಂಕರ್ ಗಳು ನೀರಾಸಕ್ತಿ ತೋರುತ್ತಿದ್ದಾರೆ. ಹೀಗಾದರೆ, ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಸಾಧ್ಯವೆ ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ:
ನಗರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿಮಿರ್ಸುತ್ತಿರುವ 3630 ಮನೆಗಳ ಬಗ್ಗೆ ಚರ್ಚೆ ಜರುಗಿ, ಈ ಯೋಜನೆ ಮುಕ್ತಾಯಗೊಳ್ಳುವುದು ಯಾವಾಗ ಎಂದು ಬೊಮ್ಮಾಯಿ ಸಿಡಿಮಿಡಿಗೊಂಡರು. ಕಲ ಮನೆಗಳು ರ್ಪೂಣಗೊಂಡಿವೆ. ಇನ್ನೂ ಕೆಲ ಮನೆಗಳು ಅರ್ಪೂಣಗೊಂಡಿವೆ. ಕೆಲವರು ನ್ಯಾಯಾಲಯ ಮೊರೆ ಹೋಗಿದ್ದಾರೆ. ಕೆಲವರಿಗೆ ಸಾಲ ಸಿಗುತ್ತಿಲ್ಲ. ಈಗಾಗಲೇ ನಾಲ್ಕು ವರ್ಷ ಕಳೆದಿದೆ. ಹೀಗೆ ಇನ್ನೂ ನಾಲ್ಕು ವರ್ಷ ಕಳೆದರೆ ಯೋಜನೆಯೂ ಬದಲಾಗುತ್ತದೆ. ವೆಚ್ಚವು ಏರಿಕೆ ಆಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.
ವಿಮೆ ಬಗ್ಗೆ ಜಾಗೃತಿ ನಡೆಸಿ:
ಪಿಎಂ ಸುರಕ್ಷಾ ಭೀಮ ಯೋಜನೆ, ಪಿಎಂ ಜೀವನಜ್ಯೋತಿ ಯೋಜನೆ ಬಗ್ಗೆ ಬ್ಯಾಂಕರ್ ಗಳು ಜಾಗೃತಿ ಮೂಡಿಸದೇ ನಿರ್ಲಕ್ಷ$್ಯ ತೋರಬಾರದು. ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ ಹೊಂದಿದವರಿಗೆ ಸುರಕ್ಷಾ ಭೀಮ ಯೋಜನೆಯಡಿ ವಾಷಿರ್ಕ 20 ರೂ. ವಂತಿಗೆ ಮಾತ್ರ ಕಡಿತಗೊಳ್ಳುತ್ತದೆ. ಜೀವನಜ್ಯೋತಿ ಯೋಜನೆಯಡಿ ಖಾತೆಯಿಂದ ವಾಷಿರ್ಕ 436 ರೂ. ಮಾತ್ರ ಕಡಿತಗೊಳ್ಳುತ್ತದೆ. ಆದರೆ ಅಪಘಾತದಿಂದ ಖಾತೆದಾರ ಮರಣಹೊಂದಿದರೆ ಖಾತೆದಾರನ ಕುಟುಂಬಕ್ಕೆ 2 ಲಕ್ಣ ಪರಿಹಾರ ಸಿಗುತ್ತದೆ. ಕೇಂದ್ರದ ಈ ಯೋಜನೆಗಳ ಬಗ್ಗೆ ಬ್ಯಾಂಕರ್ ಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ, ಜಿಪಂ ಸಿಇಓ ಭರತ್ ಎಸ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಎಂ., ಸೇರಿದಂತೆ ಇತರರು ಇದ್ದರು.