

ವಿಜಯವಾಣಿ ಸುದ್ದಿಜಾಲ ಗದಗ
ದೇಶದಲ್ಲಿ ಇಂದಿರಾ ಗಾಂಧಿ ಕಾಲದಲ್ಲಿ ತುರ್ತು ಪರಿಸ್ಥಿತಿ ಹೇರಿ, ಹಲವು ಜನರ ಕಗ್ಗೊಲೆ, ನ್ಯಾಯಾಧೀಶರ ವರ್ಗಾವಣೆ ಮತ್ತು ಜನರ, ಮಾಧ್ಯಮಗಳ ಹಕ್ಕು ಕಸಿದುಕೊಂಡಿದ್ದ ಕಾಂಗ್ರೆಸ್ ಪಕ್ಷವು, ಇಂದು ದಲಿತ, ಅಲ್ಪಸಂಖ್ಯಾತ, ಎಸ್ಸಿ ಎಸ್ಟಿ ಸಮುದಾಯದ ಯುವಕರಲ್ಲಿ ಭಯ ಹುಟ್ಟಿಸಿ ರಾಜಕೀಯ ಭಯೋತ್ಪಾದನೆ ಆರಂಭಿಸಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ತಂದೊಡ್ಡಿ ಸಂವಿಧಾನ ನೀಡಿದ್ದ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದ ಕಾಂಗ್ರೆಸ್ ಪಕ್ಷ ಇಂದು ಬಿಜೆಪಿಗೆ ಸಂವಿಧಾನದ ಪಾಠ ಹೇಳುತ್ತಿದೆ. ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ 400 ಅಧಿಕ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸಂದರ್ಭದಲ್ಲಿ ಸಂವಿಧಾನ ದುರ್ಬಳಕೆ ಮಾಡಿಕೊಂಡಿತ್ತು ಎಂಬುದನ್ನು ಅಲ್ಪಸಂಖ್ಯಾತರು, ದಲಿತರು, ಎಸ್ಸಿ, ಎಸ್ಟಿ ಸಮುದಾಯದ ಸೇರಿದಂತೆ ಎಲ್ಲ ಮತದಾರ ವರ್ಗ ಮರೆಯಬಾರದು ಎಂದರು.
ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು ತಮ್ಮ ಮತಬ್ಯಾಂಕ್, ತುಷ್ಟಿಕರಣ ರಾಜಕಾರಣ, ವಿವಿಧ ಸಮುದಾಯ ಒಡೆದು ದೇಶ ಹಿಂದೆ ಉಳಿಯುವಂತೆ ಮಾಡಿ, ತಮ್ಮ ರಾಜಕಾರಣ ಮುಂದೆ ಬರುವಂತೆ ಮಾಡಿದ್ದರು. ಆದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತುಷ್ಟೀಕರಣ ರಾಜಕಾರಣಕ್ಕೆ ಇತೀಶ್ರ ಹೇಳಲಾಗಿದೆ. ಅಭಿವೃದ್ಧಿ ಒಂದೇ ಮಾನದಂಡ ಇಟ್ಟುಕೊಂಡು ಆಡಳಿತ ನಡೆಸಲಾಗುತ್ತಿದೆ. ದಕ್ಷ ನಾಯಕನಿಂದ ಮಾತ್ರ ದೇಶ ಒಗ್ಗೂಡಿಸಲು, ಅಭಿವೃದ್ಧಿಗೊಳಿಸಲು ಸಾಧ್ಯ. ದುರ್ಬಲ ನಾಯಕನಿಂದ ದೇಶದ ಚುಕ್ಕಾಣಿ ಹಿಡಿಯಲು ಸಾಧ್ಯವೇ ಇಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದರು.
ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, 2014 ಕ್ಕೂ ಮೊದಲಿನ ದೇಶದ ಅಭಿವೃದ್ಧಿ, 2014 ರ ನಂತರ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಅಭಿವೃದ್ಧಿ ನೋಡಬೇಕು. 2024 ರ ನಂತರ ಬಿಜೆಪಿ ಅಧಿಕಾರದಲ್ಲಿ ದೇಶ ಹೇಗೆ ಅಭಿವೃದ್ಧಿ ಕಾಣಲಿದೆ ಎಂಬುದನ್ನು ಯುವಕರು ಯೋಚಿಸಬೇಕು. ದೇಶದ ಚುಕ್ಕಾಣಿ ಹಿಡಿಯುವ ನಾಯಕನಿಗೆ ದೂರದೃಷ್ಟಿ ಇರಬೇಕು. ಭದ್ರತೆ, ಆಥಿರ್ಕ ಸ್ಥಿತಿ, ಉತ್ತಮ ಆಡಳಿತವನ್ನು ಪ್ರಧಾನಿ ನೀಡಿದ್ದಾರೆ. ಕೇಂದ್ರದಿಂದ ಬರುವ ಅಕ್ಕಿಯನ್ನೇ ನಮ್ಮ ಭಾಗ್ಯ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳಲುವ ನೈತಿಕತೆ ಇಲ್ಲ. ಗ್ಯಾರಂಟಿ ಯೋಜನೆ ಜಾರಿಗೆ ನಮ್ಮ ಅಭ್ಯಂತರವಿಲ್ಲ. ಆದರೆ, ಗ್ಯಾರಂಟಿಗೆ ಆಥಿರ್ಕ ಸಂಪನ್ಮೂಲ ಕ್ರೂಢಿಕರಣ ಹೇಗೆ ಎಂಬುದನ್ನು ಮುಂದಾಲೋಚಿಸಬೇಕು. ಕಾಂಗ್ರೆಸ್ ಪಕ್ಷವು ಕೇವಲ ಅಧಿಕಾರದ ದಾಹಕ್ಕೆ ಅವೈಜ್ಞಾನಿಕ ಯೋಜನೆಗಳನ್ನು ಜಾರಿ ಮಾಡಿ ಆಥಿರ್ಕ ದಿವಾಳಿತನ ಮಾಡಿದ ಕೀತಿರ್ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ಎಸ್.ವಿ. ಸಂಕನೂರು ಮಾತನಾಡಿ, ಕಾರ್ಯಕರ್ತರು ಬಹಳ ಶಿಸ್ತಿನಿಂದ ಚುನಾವಣೆ ಪ್ರಚಾರ ಮಾಡಬೇಕು. ದೇಶದ ಭವಿಷ್ಯ ಯುವಕರ ನಿರ್ಧಾರದ ಮೇಲಿದೆ. ದೇಶದ ಭದ್ರತೆ, ಅಭಿವೃದ್ಧಿ, ನಿರುದ್ಯೋಗ ನಿವಾರಣೆಗಾಗಿ ಬೆಜೆಪಿಗೆ ಮತ ಹಾಕಬೇಕು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶವು ಭಾರತದ ಅಭಿವೃದ್ಧಿ ಕಂಡು ಭಯ ಬೀಳುತ್ತೀವೆ. ಬಿಜೆಪಿ ಸೋಲಿಸಲು ನೆರೆ ದೇಶಗಳು ಒಳ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ದೇಶದ ಯುವಕರು ಇಂತಹ ಕುತಂತ್ರದ ಬಗ್ಗೆ ಅರಿತುಕೊಳ್ಳಬೇಕು. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ವಿಶ್ವದ ಮುಂದೆ ಭಾರತ ತಲೆ ಭಾಗಬೇಕಿತ್ತು. ಈಗ ವಿಶ್ವದ ಬಲಾಢ್ಯ ನಾಯಕರು ಭಾರತದ ಮುಂದೆ ತಲೆ ಬಾಗುತ್ತಿದ್ದಾರೆ ಹಾಗಾಗಿ ಬಿಜೆಪಿ ಅಭ್ಯಥಿರ್ ಬಸವರಾಜ ಬೊಮ್ಮಾಯಿ ಅವರಿಗೆ ಮತ ನೀಡಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.
ರಾಜು ಕುರಡಗಿ, ಚಂದ್ರು ಲಮಾಣಿ, ಮೋಹನ್ ಮಾಳಶೆಟ್ಟಿ, ಸಿದ್ದು ಪಲ್ಲೇದ, ಎಂ. ಎಸ್. ಕರಿಗೌಡರ, ರವಿ ದಂಡಿನ, ಉಷಾ ದಾಸರ ಇತರರು ಇದ್ದರು.
ಸಿದ್ದರಾಮಯ್ಯಗೆ ಕುಮಾರ್ ಬಂಗಾರಪ್ಪ ಸವಾಲು:
ಸಿಎಂ ಸಿದ್ದರಾಮಯ್ಯ ಅವರಿಗೆ ಧೈರ್ಯ ಇದ್ದರೆ ಕಾಂತರಾಜು ವರದಿ, ಸದಾಶಿವ ಆಯೋಗ ವರದಿ ಜಾರಿ ಮಾಡಿ ತಮ್ಮ ನೈತಿಕತೆ ತೋರಿಸಲಿ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸವಾಲ್ ಹಾಕಿದರು. ಕಾರ್ಯಕ್ರಮದಲ್ಲಿ ಮಾತನಾಡಿ, ಅಲ್ಲಸಂಖ್ಯಾತ, ಎಸ್ಸಿ ಎಸ್ಟಿ, ದಲಿತರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸುತ್ತಲೇ ಇರುತ್ತಾರೆ. ಜನರನ್ನು ದಾರಿ ತಪ್ಪಿಸುವುದೇ ಅವರ ಕೆಲಸ. ಬಿಜೆಪಿಯ ಯಾವುದೇ ಯೋಜನೆಗಳು ಒಂದೇ ಸಮುದಾಯಕ್ಕೆ ಸೀಮಿತವಾಗಿರದೇ ಸಮಾನವಾಗಿ ನೀಡಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ತುಷ್ಟೀಕರಣ ರಾಜಕಾರಣಕ್ಕೆ ಮೇಲುಗೈ. ಕೇಂದ್ರದಿಂದ ತೆರಿಗೆ ಬಂದಿಲ್ಲ ಎಂದು ಸುಳ್ಳು ಆರೋಪಿಸುವ ಸಿದ್ದರಾಮಯ್ಯ ಅವರಿಗೆ ಲೆಕ್ಕ ಕೊಟ್ಟರು ಸಮಾಧಾನ ಇಲ್ಲ. ಒಂದಡೆ ವಿದ್ಯುತ್ ಬಿಲ್ ಹೆಚ್ಚಿಸಿ, ಇನ್ನೊಂದೆಡೆ ಮಹಿಳೆಯರಿಗೆ 2000 ರೂ, ಉಚಿತ ಬಸ್ ಪ್ರಯಾಣ ನೀಡಿದ್ದಾರೆ. ಒಂದು ಕಡೆ ದೋಚಿ, ಮತ್ತೊಂದೆಡೆ ನೀಡುವುದುದೇ ಅವರ ಕೆಲಸ ಎಂದರು.
ಬಾಕ್ಸ್:
ಮದ್ವಿ ಆಗಾಕ ಮದುಮಗ ರೆಡಿ ಇಲ್ಲ: ಮಲ್ಲಿಕಾರ್ಜುನ ರ್ಖಗೆ ಪ್ರಧಾನಿ ಅಭ್ಯಥಿರ್ ಎಂದು ಘೋಷಿಸಿದರೇ ಸಿದ್ದರಾಮಯ್ಯ ಅವರಿಗೆ ಒಳಮುನಿಸು. ಮಮತಾ ಬ್ಯಾನಜಿರ್ ಆಗಬೇಕು ಎಂದು ಮತ್ತೊಬ್ಬರು ಹೇಳುತ್ತಾರೆ. ಒಟ್ಟಿನಲ್ಲಿ ಇಂಡಿ ಒಕ್ಕೂಟದಲ್ಲಿ ಮದುವೆ ಆಗಲು ಮದುಮಗನೇ ರೆಡಿ ಇಲ್ಲ. ಆದರೂ ಮದುವೆ ಮದುವೆ ದಿಬ್ಬಣ ಹೊರಟಿದೆ ಎಂದು ಬೊಮ್ಮಾಯಿ ವ್ಯಂಗ್ಯ ವಾಡಿದರು.
ಬಾಕ್ಸ್:
ಸಂವಿಧಾನವನ್ನು ಬದಲಾಯಿಸಲು ಯಾರಿದಂಲೂ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನ ಎಂಬುದು ಪ್ರಜಾಪ್ರಭುತ್ವದ ಮತ್ತು ಸಂವಿಧಾನ ರಕ್ಷಣೆಯ ದೇಗುಲ ಎಂದು ಕರೆದಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಅನುಕೂಲಕ್ಕಾಗಿ ಹಲವು ಬಾರಿ ಸಂವಿಧಾನ ದುರ್ಬಳಕೆ ಮಾಡಿಕೊಂಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ ಎಂದು ಸುಳ್ಳು ಸುದ್ದಿ ಹರಿಬಿಡುವ ಮೂಲಕ ತನ್ನ ಯುವ ಜನತೆಯನ್ನು ದಾರಿ ತಪ್ಪಿಸುತ್ತಿದೆ. ಅಂಬೇಡ್ಕರ್ ಅವರ ಹಾದಿಯಲ್ಲೇ ಬಿಜೆಪಿ ನಡೆಯುತ್ತಿದ್ದು, ಎಲ್ಲ ಸಮುದಾಯಗಳನ್ನು ಬಡತನದಿಮದ ಮೇಲೆತ್ತುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಬೊಮ್ಮಾಯಿ ಹೇಳಿದರು.