ಸ್ಪೀಡ್ ಬೋಟಗೆ ಚಾಲನೆ‌ ನೀಡಿದ ಸಚಿವ ಎಚ್.ಕೆ.ಪಾಟೀಲ

DSC_8228
Published on

ಗದಗ: ಗದಗ ನಗರದ ಭೀಷ್ಮ‌ವಿಹಾರ‌‌ ಧಾಮದಲ್ಲಿ ಮಂಗಳವಾರ (ಮೇ.27) ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ‌ ಅವರು ಸ್ಪೀಡ್ ಬೋಟಗೆ ಚಾಲನೆ‌ ನೀಡಿದರು.

ಈಗಾಗಲೇ ಭೀಷ್ಮ‌ವಿಹಾರ ಧಾಮದಲ್ಲಿ ಸೌರಶಕ್ತಿ ಚಾಲಿತ ಬೋಟ ಸೇರಿದಂತೆ ವಿವಿಧ ಬೋಟುಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು ಇದರ ಜೊತೆಗೆ ಇಂದು ಚಾಲನೆ ನೀಡಿದ  ಸ್ಪೀಡ ಬೋಟ್ ಮೂಲಕ ಭೀಷ್ಮ ಕೆರೆಯ ಪರ್ಯಟನೆ‌ ಮಾಡಿದಂತಹ ಎಚ್.ಕೆ.ಪಾಟೀಲ ಅವರು ಸಂತಸ‌ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳಾದ ಸಿ.ಎನ್.ಶ್ರೀಧರ, ಜಿಲ್ಲಾ‌ಪೊಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ,  ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಬಿ.ಬಿ.ಅಸೂಟಿ ಅವರುಗಳು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರೊಂದಿಗೆ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net