

ವಿಜಯವಾಣಿ ಸುದ್ದಿಜಾಲ ಗದಗ
ಕನ್ನಡ ನಾಡಿನಲ್ಲಿ ಅನೇಕ ಶಿವಶರಣರು, ಮಹಾತ್ಮರು ಜನ್ಮ ತಾಳಿದ್ದಾರೆ. ಅಂತಹ ಮಹಾತ್ಮರಲ್ಲೇ ತಮ್ಮ ವಿಶಿಷ್ಟತೆಯಿಂದ ಬೆಳಗಿದವರು ಪಂ. ಪಂಚಾರ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳು. ಗುರುವಿನ ಅನುಗ್ರಹದಿಂದ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಉಭಯ ಗಾಯನಾಚಾರ್ಯರು ತಮ್ಮ ಅದ್ವೀತಿಯ ಸಂಗೀತ ಪಾಂಡಿತ್ಯವನ್ನು ತಮ್ಮ ಶಿಷ್ಯರಿಗೆ ಧಾರೆ ಎರೆದು ಸಂಗೀತ ೇತ್ರಕ್ಕೆ ಅಮೂಲ್ಯ ಕಾಣಿಕೆಗಳನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಡಾ. ರಾಜಶೇಖರ ದಾನರೆಡ್ಡಿಯವರು ಹೇಳಿದರು.
ನಗರದ ಬಸವದಳದಲ್ಲಿ ಶುಕ್ರವಾರ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಪಂ.ಪಂಚಾರಿ ಗವಾಯಿ, ಪಂ. ಪುಟ್ಟರಾಜ ಗವಾಯಿ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಸ್ವತಃ ಅಂಧರಾಗಿದ್ದ ಉಭಯ ಶ್ರೀಗಳು ಸಾವಿರಾರು ಅಂಧರಿಗೆ ಉಚಿತ ಅನ್ನ, ವಸತಿ ನೀಡಿ, ಸಂಗೀತ ವಿದ್ಯಾದಾನ ನೀಡಿದ್ದಾರೆ. ಇತಿಹಾಸದಲ್ಲಿ ಸ್ಮರಣೀಯವಾಗಿದೆ. ತಮಗಿರುವ ನೋವನ್ನೆಲ್ಲ ನುಂಗಿ ನಗುನಗುತ್ತಾ ಅಂಧ ಅನಾಥರ ಸೇವೆಯಲ್ಲಿಯೇ ಶಿವನ್ನು ಕಂಡಿದ್ದಾರೆ. ಅಂಧರ ಬೆಳಕಿನಲ್ಲಿ ಹೊಸಬೆಳಕನ್ನು ನೀಡಿ ಅಜರಾಮರ ಆಗಿದ್ದಾರೆ ಎಂದು ಹೇಳಿದರು.
ವಿ. ಕೆ. ಕರೇಗೌಡ್ರ ಮಾತನಾಡಿ, ಪಂಚಾರಿ ಗವಾಯಿಗಳ ನಂತರ ಅವರ ಕರಸಂಜಾತ ಶಿಷ್ಯರಾದ ಪುಟ್ಟರಾಜ ಗವಾಯಿಗಳು ವೀರೇಶ್ವರ ಪುಣ್ಯಾಶ್ರಮದ ಕರ್ಣಧಾರತ್ವವನ್ನು ವಹಿಸಿಕೊಂಡು ಗುರುವನ್ನು ಮೀರಿಸುವ ಶಿಷ್ಯನೆನಿಸಿಕೊಂಡರು. ಅವರು ಬರೀ ಸಂಗೀತ ೇತ್ರವಷ್ಟೇ ಅಲ್ಲ ಸಾಹಿತ್ಯ ೇತ್ರಕ್ಕೂ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ತ್ರಿಕಾಲ ಪೂಜಾನಿಷ್ಠರೂ ಆಗಿ ಅನೇಕ ಶಿಣ ಸಂಸ್ಥೆಗಳನ್ನು ತೆರೆದು ಆಶ್ರಮದ ಮಕ್ಕಳಿಗೆ ಎಲ್ಲ ತರಹದ ಶಿಣವನ್ನು ಸಿಗುವಂತೆ ಮಾಡಿದರು. ಆರಂಭದಲ್ಲಿ ಪುಟ್ಟರಾಜರ ಬದುಕು ಅಂಧಕಾರದಿಂದ ತುಂಬಿತ್ತು. ಹುಟ್ಟಿದ 6 ತಿಂಗಳಿಗೆ ಕಣ್ಣನ್ನು ಕಳೆದುಕೊಂಡು ಮಾವನ ಮನೆಯಲ್ಲಿ ಬೆಳೆದರು. ಸ್ವತಃ ಸಂಗೀತಗಾರರಾಗಿದ್ದ ಚಂದ್ರಶೇಖರಯ್ಯ ಮಾವನ ಮನೆಯಲ್ಲಿ ಹಾಮೋರ್ನಿಯಂ ಪೇಟಿ ಇತ್ತು. ಅದನ್ನು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಮಾವ ಹಾಮೋರ್ನಿಯಂ ಬಾರಿಸುವದನ್ನು ಕದ್ದು ಕೇಳಿ ಮನನ ಮಾಡಿಕೊಂಡು ಪುಟ್ಟಯ್ಯ ಅವರು ಮಾವ ಹೊರಗೆ ಹೋದ ಸಂದರ್ಭದಲ್ಲಿ ಹಾಮೋರ್ನಿಯಂ ನುಡಿಸುತ್ತಿದ್ದರು ಎಂದು ತಿಳಿಸಿದರು.
ರೇಣಕ್ಕ ಕರೇಗೌಡ್ರ, ಪ್ರಶಾಂತ ಲಿಂಗಧಾಳ, ವೀರೇಶ ಲಿಂಗಧಾಳ ಇತರರು ಇದ್ದರು.