

ವಿಜಯವಾಣಿ ಸುದ್ದಿಜಾಲ ಗದಗ
ಗದಗ: ಜಿಮ್ಸ್ಗೆ ಕೆ.ಎಚ್.ಪಾಟೀಲ ನಾಮಕರಣ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕರು ಸಚಿವರು ಅಭಿನಂದಿಸಿದ ಫೇಸ್‌ಬುಕ್ ಪೋಸ್ಟ್ಗೆ ಬಿಜೆಪಿ ಜಿಲ್ಲಾಧ್ಯರು ಲೈಕ್(ಮೆಚ್ಚುಗೆ) ಮಾಡಿದ್ದಾರೆ ಎಂದು ಕಾಂಗ್ರೆಸ್ನ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ಹರಡುತ್ತಿದ್ದಾರೆ. ಈ ಸುದ್ದಿ ಸಂರ್ಪೂಣ ಸುಳ್ಳಿನಿಂದ ಕೂಡಿದೆ. ನನ್ನ ವಿರುದ್ಧು ಪಿತೂರಿ ನಡೆಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯರಾದ ರಾಜು ಕುರುಡಗಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿಗಳು ಕರ್ನಾಟಕ ಫೇಸ್‌ಬುಕ್ ಪೇಜ್ನಲ್ಲಿ ವಿಷಯ ಪ್ರಕಟವಾಗಿದ್ದನ್ನು ಲೈಕ್(ಮೆಚ್ಚುಗೆ) ಮಾಡಿದ್ದಾಗಿ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕೆ. ಎಚ್. ಪಾಟೀಲರ ಹೆಸರನ್ನು ಜೀಮ್ಸ್ಗೆ ನಾಮಕರಣ ಮಾಡುವುದನ್ನು ಕೇವಲ ಬಿಜೆಪಿ ಅಷ್ಟೇ ಅಲ್ಲದೇ ಇತರೆ ರಾಜಕೀಯ ಪಗಳ ಮುಖಂಡರುಗಳು, ಸಾರ್ವಜನಿಕರು ವಿರೋಧಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಹಲವಾರು ಕಟ್ಟಡ, ರಸ್ತೆ, ಕ್ರೀಡಾಂಗಣ, ಶಾಲೆ, ಕಾಲೂನಿಗಳಿಗೆ ಕೆ.ಎಚ್.ಪಾಟೀಲರ ಹೆಸರನ್ನ ಇಡಲಾಗಿದ್ದು, ಜೀಮ್ಸ್ನ ಸ್ಥಾಪನೆಯಲ್ಲಿ ಏನೂ ಕೊಡುಗೆ ಇಲ್ಲದ ಕಾಂಗ್ರೆಸ್ ಮುಖಂಡರ ಹೆಸರನ್ನು ಇಡುವುದನ್ನು ವಿರೋಧಿಸುತ್ತಿದೆ. ಈ ಭಾಗದ ನಡೆದಾಡುವ ದೇವರು ಲಿಂ. ಪಂ. ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣವನ್ನು ಮಾಡುವ ಜನತೆಯ ಕೂಗಿಗೆ ಬಿಜೆಪಿ ಸ್ಪಂಧಿಸಿ ಹೋರಾಟವನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.