

ಗದಗ:
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜನರಿಗೂ ರಕ್ಷಣೆ ಇಲ್ಲ. ವನ್ಯಜಿವಿಗಳಿಗೂ ರಕ್ಷಣೆ ಇಲ್ಲ. ಕರ್ನಾಟಕದ ವನ್ಯಜಿವಿ ಸಂರಕ್ಷಣೆ, ಮತ್ತು ಅರಣ್ಯ ಇಲಾಖೆಯ ಆಡಳಿತ ಸಂರ್ಪೂಣ ಕುಸಿದಿದೆ ಎಂದು ನಗರಸಭೆ ಸದಸ್ಯ ರಾವೇಂದ್ರ ಯಳವತ್ತಿ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬನ್ನೇರುಟ್ಟ ಅರಣ್ಯ ಸಮೀಪದ ಕಗ್ಗಲಿಪುರ ಪ್ರಾದೇಶಿಕ ವಲಯದಲ್ಲಿ 9 ಜಿಂಕೆಗಳು, ಮಲೆ ಮಹದೇಶ್ವರ ವನ್ಯಜಿವಿ ಧಾಮದಲ್ಲಿ ಒಂದು ಹೆಣ್ಣು ಹುಲಿ ಮತ್ತು ಅದರ ನಾಲ್ಕು ಮರಿಗಳ ವಿಷಪ್ರಾಶನದಿಂದ ಸಾವನ್ನಪ್ಪಿವೆ. ವನ್ಯಜಿವಿ ರಕ್ಷಣೆಯಲ್ಲಿ ಸರ್ಕಾರದ ನಿರಾಸಕ್ತಿ ಸ್ಪಷ್ಟವಾಗಿದೆ. ಇದರಿಂದ ರಾಜ್ಯದಲ್ಲಿ ಜನರಿಗೂ ಮತ್ತು ವನ್ಯಜಿವಿಗಳಿಗೂ ರಕ್ಷಣೆ ಇಲ್ಲದಂತಾಗಿದೆ.
ಕಾಂಗ್ರೆಸ್ ಸರ್ಕಾರವು ವನ್ಯಜಿವಿ ಸಂರಕ್ಷಣೆಯಲ್ಲಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಲ್ಯಾಣದಲ್ಲಿ ಸಂರ್ಪೂಣ ವಿಫಲವಾಗಿದೆ. ಜಿಂಕೆಗಳ ಕೊಲೆ, ಹುಲಿಗಳ ವಿಷಪ್ರಯೋಗ ಮತ್ತು ಕಾವಲುಗಾರರಿಗೆ ವೇತನ ವಿಳಂಬ ಇವೆಲ್ಲವೂ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಪರಿಸರ ಸಂರಕ್ಷಣೆಯ ರ್ದುಬಲತೆಯನ್ನು ಬಯಲಿಗೆಳೆಯುತ್ತಿವೆ ಎಂದು ಆರೋಪಿಸಿದ್ದಾರೆ. ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.