ರಾಹುಲ್​ ಗಾಂಧಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

17GDG04
ರಾಹುಲ್​ ಗಾಂಧಿ ಹೇಳಿಕೆ ವಿರೋಧಿಸಿ ಬಿಜೆಪಿ ಜಿಲ್ಲಾ ಟಕ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿತು. ಎಂ.ಎಸ್​. ಕರಿಗೌಡರ, ಎಂ. ಎಂ. ಹಿರೇಮಠ, ಅನಿಲಅ ಅಬ್ಬಿಗೇರಿ, ವಿನಾಯಕ ಮಾನ್ವಿ, ಸಂತೋಷ ಅಕ್ಕಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ, ಗದಗ

ಭಾರತ ವಿರುದ್ಧ ಹೋರಾಡುತ್ತೇವೆ ಎಂಬ ರಾಹುಲ್​ ಗಾಂಧಿ ಹೇಳಿಕೆ ವಿರುದ್ಧ ಜಿಲ್ಲಾ ಬಿಜೆಪಿ ಟಕ ಶುಕ್ರವಾರ ನಗರದ ಗಾಂಧೀ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಸ್​. ಕರಿಗೌಡರ ಮಾತನಾಡಿ, ರಾಹುಲ್​ ಗಾಂಧಿ ಈ ದೇಶದ ಜನತೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ- ಬಾಣಂತಿಯರ ಸಾವು, ಬಸ್​ ದರ ಏರಿಕೆ, ಗುತ್ತಿಗೆದಾರ ಸಚಿನ್​ ಪಾಂಚಾಳ ಆತ್ಮಹತ್ಯೆ ಪ್ರಕರಣ, ಆಕಳು ಕೆಚ್ಚಲು ಕೋಯ್ದ ಪ್ರಕರಣ ಸೇರಿದಂತೆ ಹಲವು ಪ್ರಕರಣದಿಂದ ರಾಜ್ಯದಲ್ಲಿ ಅರಾಜಕತೆ ಸ್ಪಸ್ಟವಾಗುತ್ತಿದೆ. ಅದೇ ರೀತಿ ಕೇಂದ್ರದಲ್ಲಿ ರಾಹುಲ್​ ಗಾಂಧಿ ಭಾರತದ ವಿರುದ್ಧವೇ ಹೇಳಿಕೆ ನೀಡುವ ಮೂಲಕ ರಾಷ್ಟ್ರೀಯತೆಯನ್ನೇ ಮರೆತಿದ್ದಾರೆ. ಭಾರತೀಯರಾಗಿ ಭಾರತದ ವಿರುದ್ಧವೇ ನೀಡುವ ಇಂತಹ ಹೇಳಿಕೆಗಳು ದೇಶದ್ರೋಹದ ಕೆಲಸ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿ, ಕಾಂಗ್ರೆಸ್​ ನಾಯಕರು ದೇಶದ ಹಿತಾಸಕ್ತಿ ವಿರುದ್ಧ ಮಾತನಾಡುತ್ತಿದ್ದಾರೆ. ದೇಶದ ಗೌರವ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಕಾಂಗ್ರೆಸ್ಸಿನ ರಾಜ್ಯ ನಾಯಕರು ಮತ್ತು ರಾಷ್ಟ್ರ ನಾಯಕರು ಮಾತನಾಡುತ್ತಿರುಇವುದನ್ನು ಗಮನಿಸಿದರೆ ದೇಶಕ್ಕೆ ಕಾಂಗ್ರೆಸ್ಸಿನಿಂದ ಸಂಕಷ್ಟ ಎದುರಾಗುವುದರಲ್ಲಿ ಸಂದೇಹ ಇಲ್ಲ. ಸರ್ಕಾರದ ದುರಾಡಳಿತದ ಸನ್ನಿವೇಶಗಳನ್ನು ಜನರು ಗಮನಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಶಹರ ಬಿಜೆಪಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿ, ಅನೇಕ ಇಲಾಖೆಗಳಲ್ಲಿ ಅಪರಿಮಿತ ಬ್ರಷ್ಟಾಚಾರವನ್ನು ನಡೆಸಿ ಸ್ವತಹ ಸರ್ಕಾರದ ಸಚಿವರುಗಳ ಮೇಲೆ ಎೈಆರ್​ ಆಗಿವೆ. ಸ್ವತಃ ಮುಖ್ಯಮಂತ್ರಿಗಳು ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ, ಶಿಣಕ್ಕೆ ಆರೋಗ್ಯಕ್ಕೆ, ಸಾರ್ವಜನಿಕ ಹಿತಾಸಕ್ತಿ ಕೆಲಸಗಳಿಗೆ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಅರೋಗ್ಯ ಇಲಾಖೆಯ ನಿರ್ಲದಿಂದ ರಾಜ್ಯದಲ್ಲಿ ನೂರಾರು ಜನ ಬಾಣಂತಿಯರ ಸಾವಾಗಿದೆ ಎಂದು ಆರೋಪಿಸಿದರು.

ನಗರಸಭೆ ಸದಸ್ಯ ವಿನಾಯಕ ಮಾನ್ವಿ ಮಾತನಾಡಿ, ಸರಿಯಾದ ಔಷದ ಉಪಚಾರ ಇಲ್ಲದೆ ಸರ್ಕಾರ ನಿರ್ಲಸಿದ ಕಾರಣ ರಾಜ್ಯದಲ್ಲಿ ನೂರಾರು ಬಾಣಂತಿಯರ ಸಾವಿಗೆ ಕಾರಣವಾಗಿದೆ. ಅನಾಥವಾದ ಹಸುಗೂಸು ಕಂದಮ್ಮಗಳ ಶಾಪ ಆರೋಗ್ಯ ಸಚಿವರಿಗೆ, ಮುಖ್ಯಮಂತ್ರಿಗೆ ತಟ್ಟದೆ ಬಿಡುವುದಿಲ್ಲ. ಆರೋಗ್ಯ ರಕ್ಷಣೆ ಇಲ್ಲದಂತಾಗಿದೆ. ರಾಷ್ಟ್ರ ರಕ್ಷಣೆಯನ್ನು ಕಾಂಗ್ರಸ್ಸಿನಿಂದ ನಿರೀಸುವುದು ಅಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂತೋಷ ಅಕ್ಕಿ, ರಮೇಶ ಸಜ್ಜಗಾರ, ಮಂಜು ಮುಳಗುಂದ, ಮಾಂತೇಶ ನಲವಡಿ, ಪ್ರಕಾಶ ಅಂಗಡಿ, ನವೀನ ಕೊಟೆಕಲ್​, ಧರ್ಮರಾಜ ಕೊಂಚಿಗೇರಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net